Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು

ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಮುಳಿಯ ಶಂಕರ ಭಟ್‌

Team Udayavani, Dec 28, 2024, 2:34 PM IST

4

ಬಂಟ್ವಾಳ: ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಜ. 4 ಹಾಗೂ 5ರಂದು ನಡೆಯಲಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎಳೆಯರ ಗೆಳೆಯ ಮುಳಿಯ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್‌ ಅವರು ಆಯ್ಕೆಯಾಗಿದ್ದಾರೆ.

ಅಳಿಕೆ ಸಮೀಪ ಮುಳಿಯದಲ್ಲಿ ನೆಲೆಸಿರುವ 72ರ ಹರೆಯದ ನಿವೃತ್ತ ಅಧ್ಯಾಪಕ ಮುಳಿಯ ಶಂಕರ ಭಟ್‌ ಅವರು ಮಕ್ಕಳ ಸಾಹಿತ್ಯದಿಂದ ತೊಡಗಿ ಆಧ್ಯಾತ್ಮ, ಧಾರ್ಮಿಕ ಸಹಿತ ವೈವಿಧ್ಯಮಯ ಸಾಹಿತ್ಯ ರಚನೆ ಮಾಡಿದ್ದಾರೆ. ಸುಮಾರು 19ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ, ಗಮಕಿಯಾಗಿಯೂ ತೊಡಗಿಸಿಕೊಂಡಿದ್ದ ಅವರ ಕೃತಿ ಕೇರಳ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಿದೆ. ಸಾಹಿತ್ಯದ ಪಯಣಕ್ಕಾಗಿ ಕಾವ್ಯ ಕಲಾವಿಶಾರದ ಪ್ರಶಸ್ತಿ, ಯಕ್ಷ ಕೌಸ್ತುಭ ಪ್ರಶಸ್ತಿ ಸಹಿತ ಸುಮಾರು 14 ಪ್ರಶಸ್ತಿ, ಸಮ್ಮಾನಗಳು ಸಂದಿವೆ.

ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ಕನ್ನಡ ಸಾಹಿತ್ಯದ ತಮ್ಮ ಅಭಿಪ್ರಾಯ ಹಾಗೂ ಸಮ್ಮೇಳನದ ಅನಿವಾರ್ಯದ ಕುರಿತು ಮಾತನಾಡಿದ್ದಾರೆ. ಜತೆಗೆ ಉದಯವಾಣಿಯಲ್ಲಿ ತಮ್ಮ 300 ಕವನಗಳು ಪ್ರಕಟವಾಗಿದ್ದನ್ನು ನೆನಪಿಸಿಕೊಂಡು ಉಪಕಾರ ಸ್ಮರಣೆ ಮಾಡಿದ್ದಾರೆ.

-ನಿಮ್ಮ ಸಾಹಿತ್ಯ ಪಯಣ ನೆಮ್ಮದಿ ತಂದಿದೆಯೇ.?
ಖಂಡಿತವಾಗಿಯೂ ನೆಮ್ಮದಿ ತಂದಿದೆ. ಅಪೇಕ್ಷೆ ಇಟ್ಟುಕೊಂಡು ಕೆಲಸ ಮಾಡಿದಾಗ ಮನಸ್ಸಿಗೆ ನಿರಾಸೆಯಾಗುವುದು ಸಹಜ. ಆದರೆ ಅಪೇಕ್ಷೆಯೇ ಇಲ್ಲದೆ ಕೆಲಸ ಮಾಡಿದಾಗ ಅವಕಾಶ ಸಿಕ್ಕರೆ ಸಂತೋಷವೇ, ಸಿಗದೇ ಇದ್ದರೂ ಅಸಮಾಧಾನ ಎಂಬುದು ಇರುವುದಿಲ್ಲ. ನನ್ನ 12ನೇ ವಯಸ್ಸಿನಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು, ಈಗ 72ನೇ ಹರೆಯ. ಈ ಮಧ್ಯದ ಅವಧಿಯಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ ನಾನು ಮಾನಸಿಕ ತೃಪ್ತಿ, ಜನರ ಪ್ರೀತಿ ಕಂಡಿದ್ದೇನೆ. ಆಧ್ಯಾತ್ಮಿಕ ಸಾಹಿತ್ಯ, ಮಹಾಕಾವ್ಯಗಳು ಪ್ರಕಾಶಿತವಾಗಿದ್ದು, ಎಲ್ಲೂ ಕೂಡ ನನಗೆ ಪ್ರಕಾಶನದ ಸಮಸ್ಯೆಯಾಗಿಲ್ಲ. ಹೀಗಾಗಿ ನಾನು ನಿಜವಾಗಿಯೂ ತೃಪ್ತ ಎಂದು ಹೇಳುತ್ತೇನೆ.

-ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ ಕ್ಷೇತ್ರಕ್ಕೆ ಹೇಗೆ ಪೂರಕ?
ಸಾಹಿತ್ಯ ಸಮ್ಮೇಳನದಲ್ಲಿ ಬೇರೆ ಬೇರೆ ಮನಸ್ಸುಗಳು ಒಂದಾದಾಗ ಕನ್ನಡದ ಉಳಿವಿಗೆ ನಾವು ಏನು ಮಾಡಬಹುದು, ಮುಂದಿನ ಪೀಳಿಗೆಗೆ ಸಾಹಿತ್ಯವನ್ನು ಹೆಚ್ಚು ವರ್ಧಮಾನಕ್ಕೆ ತರುವುದಕ್ಕೆ ನಮ್ಮ ಪಾತ್ರ ಏನು ಎಂಬುದನ್ನು ಹೆತ್ತವರು, ಕನ್ನಡ ಕಾರ್ಯಕರ್ತರು ಯೋಚಿಸಲು ಅವಕಾಶ ದೊರೆಯುತ್ತದೆ. ಮಕ್ಕಳು, ಪೋಷಕರು ಕೂಡ ಕನ್ನಡ ಭಾಷೆ, ಸಂಸ್ಕೃತಿಯನ್ನು ಕಂಡುಕೊಳ್ಳುವುದಕ್ಕೆ ಆಂಶಿಕವಾಗಿಯಾದರೂ ಕಾರಣ ವಾಗಬೇಕು ಎನ್ನುವ ಕಾರಣಕ್ಕೆ, ಸಾಹಿತ್ಯವು ಮುಂದಿನ ಜನಾಂಗಕ್ಕೆ ಕೈದೀವಿಗೆಯಾಗಬೇಕು ಎನ್ನುವ ಕಾರಣಕ್ಕೆ ಸಮ್ಮೇಳನಗಳು ಅಗತ್ಯವಾಗಿದೆ.

-ಸಮ್ಮೇಳನಗಳಿಂದ ಜನ ಏನು ನಿರೀಕ್ಷೆ ಮಾಡಬಹುದು?
ಇತರರ ಅಭಿಪ್ರಾಯವನ್ನು ಕೇಳುವ ಮನೋಧರ್ಮವಿಲ್ಲದೆ ತನ್ನ ಅಭಿಪ್ರಾಯವನ್ನು ಇತರರು ಕೇಳಬೇಕು ಎಂದು ಹಂಬಲಿಸುವುದು ಸರಿಯಾಗುವುದಿಲ್ಲ. ಸಾಹಿತ್ಯದ ಕುರಿತು ಚಿಂತನ-ಮಂಥನ ನಡೆದು ಅದನ್ನು ಜನರಿಗೆ ಕೊಡಬೇಕು. ನಮ್ಮ ದೌರ್ಬಲ್ಯ ಯಾವುದು, ಯಾಕೆ ಸಾಹಿತ್ಯ ಬೇಡವಾಗಿದೆ, ಜನ ಬಯಸುವ ಹಾಗೆ ಮಾಡಬೇಕಾದರೆ ನಾವು ಏನು ಮಾಡಬೇಕು ಎಂಬ ದಿಕ್ಸೂಚಿಯನ್ನು ಸಮ್ಮೇಳನಗಳು ಸೂಚಿಸಬೇಕು. ಅದನ್ನು ಜನರು ಸ್ವೀಕಾರ ಮಾಡಬೇಕು.

-ಯುವ ಸಮುದಾಯ ಸಾಹಿತ್ಯದ ಓದು- ಬರವಣಿಗೆಯಲ್ಲಿ ತೊಡಗಲು ಏನು ಮಾಡಬಹುದು.?
ಹಲವು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪ್ರಸ್ತುತ ಶಾಲೆಗಳಲ್ಲಿ ಕೂಡ ಸಾಹಿತ್ಯ ಸಂಘ, ಚರ್ಚಾ ಕೂಟಗಳ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಅಧ್ಯಾಪಕರು ಓದುವುದು-ಹಾಡುವುದು ನಮ್ಮ ಘನತೆಗೆ ಧಕ್ಕೆಯಾಗುತ್ತದೆ ಎಂದು ಕೊಂಡಿದ್ದಾರೋ ಗೊತ್ತಿಲ್ಲ. ಯಾವುದೇ ಸಾಹಿತ್ಯವನ್ನು ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಅಭಿನಯ ಮಾಡಿದಾಗ ಅವರಿಗೆ ಸಾಹಿತ್ಯದಲ್ಲಿ ಒಲವು ಮೂಡುತ್ತದೆ. ಯುವ ಸಮುದಾಯ ತಾವು ಹಂಬಲಿಸುವ ಕ್ಷೇತ್ರದ ಜ್ಞಾನವನ್ನು ಪಡೆಯಬೇಕಿದ್ದು, ಅಭ್ಯಾಸ-ಅಧ್ಯಯನ ಇಲ್ಲದೆ ಬರಹ ಯಶಸ್ವಿಯಾಗುವುದಿಲ್ಲ.

-ಸಾಹಿತ್ಯದ ಬೆಳವಣಿಗೆಗೆ ಸರಕಾರದ ಪ್ರೋತ್ಸಾಹ ಹೇಗಿರಬೇಕು.?
ಸಾಹಿತ್ಯ ಎಂದರೆ ಬರೀ ಸಾಹಿತ್ಯವಲ್ಲದೆ ಭಾಷೆ, ಸಂಸ್ಕೃತಿಯೂ ಇರುತ್ತದೆ. ಹೀಗಾಗಿ ಸರಕಾರ ಕನ್ನಡ ಭಾಷೆ ಕಲಿಯುವವರಿಗೆ, ವಿಶೇಷವಾದ ಪ್ರೋತ್ಸಾಹ, ಅನುದಾನ, ಮೀಸಲಾತಿಯನ್ನು ಕೊಡಬೇಕು. ಇತ್ತಿಚೆಗೆ ಕೆಲವು ಇಲಾಖೆಗಳು ಕನ್ನಡಕ್ಕೆ ಸ್ಥಾನಮಾನ ಕೊಟ್ಟಿದ್ದು, ಇದು ಎಲ್ಲ ರಂಗದಲ್ಲಿಯೂ ಬರಬೇಕು. ಸರಕಾರ ಏನು ಮಾಡಬಹುದು ಎಂಬುದರ ಜತೆಗೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ನಮ್ಮೊಂದಿಗೆ ಅಳಿದು ಹೋದರೆ ತೃಪ್ತಿಯೇ, ನಮ್ಮ ಮಕ್ಕಳ ಅದನ್ನು ಕಲಿಯಬೇಕೇ ಎಂಬುದರ ಕುರಿತು ಪೋಷಕರು ತಮ್ಮನ್ನು ತಾವು ವಿವೇಚನೆಗೆ ಒಳಪಡಿಸಬೇಕಿದೆ. ಕನ್ನಡ ಭಾಷೆಯ ಕಲಿಕೆಯ ಜತೆಗೆ ಪೂರಕ ಕಾರ್ಯಕ್ರಮಗಳು ನಡೆದರೆ ಹೆಚ್ಚು ಪುಷ್ಠಿಗೊಳ್ಳುತ್ತದೆ. ಇವೆಲ್ಲವನ್ನೂ ಮಾಡುವುದಕ್ಕೆ ಸರಕಾರ ಒಪ್ಪಿಕೊಳ್ಳುವುದು ಕಷ್ಟ, ಅದರ ಧೋರಣೆ ಬೇರೆಯೇ ಇರುತ್ತದೆ. ಹಾಗೆಂದು ಸರಕಾರವನ್ನು ಪ್ರಶ್ನೆ ಮಾಡುವಷ್ಟು ದೊಡ್ಡವರು ನಾವಲ್ಲ.

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

3

Badagannur: ಆರೋಗ್ಯ ಕೇಂದ್ರ, ಆ್ಯಂಬುಲೆನ್ಸ್‌ಗೆ ಗ್ರಾಮಸ್ಥರ ಬೇಡಿಕೆ

2

Bantwal: ಕಂಬಳದ ತೆರೆಮರೆ ಹೀರೊಗಳ ದಾಖಲೀಕರಣ

1(1

Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ  ಇನ್ನೂ ಮೀನ ಮೇಷ ಎಣಿಕೆ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Udupi: ಗಾಂಜಾ ಮಾರಾಟ; ಮೂವರ ಬಂಧನ

2

Kundapura: ವ್ಯಕ್ತಿ ನಾಪತ್ತೆ; 25 ದಿನ ಕಳೆದರೂ ಸಿಗದ ಸುಳಿವು

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.