Mulki: ಉಗುಳಿದರೆ ದಂಡ; ಹಾಕುವವರು ಯಾರು?

ಬೋರ್ಡ್‌ ಪಕ್ಕದಲ್ಲೇ ಉಗುಳಿದರೂ ಯಾರೂ ಕೇಳುವವರಿಲ್ಲ!

Team Udayavani, Dec 28, 2024, 3:08 PM IST

7

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್‌ ಆಡಳಿತ ಇಲ್ಲೊಂದು ಬೋರ್ಡು ಹಾಕಿದೆ: ಇಲ್ಲಿ ತಂಬಾಕು ವಸ್ತುಗಳನ್ನು ತಿಂದು ಉಗುಳುವುದು ಮತ್ತು ಕಸವನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದವರಿಗೆ 300 ರೂ. ದಂಡ ಹಾಕಲಾಗುವುದು! ಆದರೆ, ದುರಂತವೆಂದರೆ, ಈ ಬೋರ್ಡ್‌ನ ಪಕ್ಕದಲ್ಲೇ ನಿಂತು ಉಗುಳಿದರೂ ಯಾರೂ ದಂಡ ಹಾಕುತ್ತಿಲ್ಲ!

ನಗರ ಪಂಚಾಯತ್‌ ವ್ಯಾಪ್ತಿಯ ಮೂಲ್ಕಿ ಬಸ್‌ ನಿಲ್ದಾಣ ಬಳಿಯ ಹೊಟೇಲ್‌ ಎದುರಿನಲ್ಲಿ ರಸ್ತೆ ವಿಭಜಕದಲ್ಲಿ ಕೆಂಪು ಬಣ್ಣದಲ್ಲಿ ದೊಡ್ಡ ಬೋರ್ಡ್‌ ಹಾಕಲಾಗಿದೆ. ಇದರ ಎದುರು ಭಾಗದಲ್ಲೇ ನಿಂತು ನೂರಾರು ಮಂದಿ ರಸ್ತೆಯ ಪಕ್ಕದಲ್ಲೇ ಕಂಡಕಂಡಲ್ಲಿ ಉಗುಳುತ್ತಾರೆ. ಆದರೆ, ಇದುವರೆಗೆ ಯಾರೂ ಇಲ್ಲಿ ದಂಡ ವಿಧಿಸಿದ್ದರ ದಾಖಲೆ ಇಲ್ಲ!

ಪ್ರತೀ ದಿನ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಇಲ್ಲಿ ನೂರಾರು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಜಮಾಯಿಸುತ್ತಾರೆ. ಊರಿನ ಗುತ್ತಿಗೆದಾರರಿಗೆ ಕೆಲಸ ದಾಳುಗಳನ್ನು ಒದಗಿಸುವ ಕೆಲಸ ಇಲ್ಲಿಂದ ನಡೆಯುತ್ತಿದೆ. ಕಾರ್ಮಿಕರು ಸುಮಾರು ಮೂರು ಗಂಟೆಗಳ ಇಲ್ಲಿದ್ದು ಮಾಡುವ ಕಸ ಮತ್ತು ಉಗುಳುವ ತಂಬಾಕು ಅಸಹ್ಯ ಮೂಡಿಸುತ್ತಿದೆ.

ದಂಡ ಹಾಕಿದರೆ ಉಗುಳುವುದು ತಪ್ಪೀತು!
ನಿಜವೆಂದರೆ ಇಲ್ಲಿ ಬೋರ್ಡ್‌ ಹಾಕಿದ ನಗರ ಪಂಚಾಯತ್‌ನ ಯಾವುದೇ ಅಧಿಕಾರಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬೋರ್ಡ್‌ ಹಾಕಿದ್ದು ಕಾಟಾಚಾರಕ್ಕೆ ಎಂಬಂತಾಗಿದೆ.

ಇಲ್ಲಿ ನಿತ್ಯವೂ ಸೇರುವ ಜನರು ಕೂಲಿ ಕೆಲಸಗಾರರು, ಮಹಿಳೆಯರು ನಿಯತ್ತಿನಿಂದ ದುಡಿಯುವವರು. ಆದರೆ, ಈ ಬೋರ್ಡ್‌ಗಳನ್ನು ಓದುವಷ್ಟು ಅಕ್ಷರ ಜ್ಞಾನಿಗಳಲ್ಲ. ಬೋರ್ಡು ಹಾಕಿರುವ ನಗರ ಪಂಚಾಯತ್‌ ಅಧಿಕಾರಿಗಳು ಒಮ್ಮೆ ಇಲ್ಲಿಗೆ ಬಂದು ಬೋರ್ಡಿನ ವಿಚಾರವನ್ನು ತಿಳಿಸುವ ಕೆಲಸ ಮಾಡದೆ ಇದ್ದರೆ ಉಗುಳುವಿಕೆ ನಿಲ್ಲುವುದು ಕಷ್ಟ.

ಅದಕ್ಕಿಂತಲೂ ಹೆಚ್ಚಾಗಿ ಈ ಕಾರ್ಮಿಕರು ದುಡ್ಡಿನ ಮಹತ್ವ ಅರಿತವರು. ಮಧ್ಯಾಹ್ನದ ಊಟವನ್ನು ಬುತ್ತಿ ಕಟ್ಟಿಕೊಂಡೇ ಹೋಗುವ ಇವರಿಗೆ ದಂಡದ ಮೊತ್ತ ತುಂಬ ದೊಡ್ಡದು. ಹೀಗಾಗಿ ಯಾರಿಗಾದರೂ ಒಂದೆರಡು ಬಾರಿ ದಂಡ ಹಾಕಿದರೆ ಮತ್ತೆ ಜನರು ಎಚ್ಚೆತ್ತುಕೊಳ್ಳಬಹುದು ಎನ್ನುವುದು ಜನರ ಅಭಿಪ್ರಾಯ.

ಟಾಪ್ ನ್ಯೂಸ್

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

4

Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್‌; ಸುಗಮ ಸಂಚಾರಕ್ಕೆ ಅಡ್ಡಿ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

de

Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು

4

Udupi: ಗಾಂಜಾ ಮಾರಾಟ; ಮೂವರ ಬಂಧನ

2

Kundapura: ವ್ಯಕ್ತಿ ನಾಪತ್ತೆ; 25 ದಿನ ಕಳೆದರೂ ಸಿಗದ ಸುಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.