Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Team Udayavani, Dec 29, 2024, 7:21 AM IST
ಮೇಷ: ಹೋಟೆಲ್ ಉದ್ಯಮಿಗಳಿಗೆ ಆದಾಯ ವೃದ್ಧಿ. ದೂರ ದೇಶದಲ್ಲಿರುವ ಬಂಧುಗಳಿಂದ ಶುಭ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗೃಹೋದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ. ಮನೆಗೆ ಹೊಸ ಅತಿಥಿಯ ಆಗಮನ.
ವೃಷಭ: ಭವಿಷ್ಯದ ಕಾರ್ಯಗಳ ಕುರಿತು ಚಿಂತನೆ. ಖಾದಿಯ ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ. ಶಿಕ್ಷಿತ ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಖರ್ಚಿನ ಬಗ್ಗೆ ನಿಗಾ ಇರಲಿ.
ಮಿಥುನ: ಕುಟುಂಬದ ಸದಸ್ಯರ ಸಮ್ಮಿಲನ. ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ. ಒಳ್ಳೆಯ ಪುಸ್ತಕ ಓದುವ ಪ್ರಯತ್ನ. ಯುವಜನರಿಗೆ ಧಾರ್ಮಿಕ ಮಾರ್ಗದರ್ಶನದ ನೇತೃತ್ವ. ಸಹೋದರಿಯಿಂದ ಸೂಕ್ತ ಸಲಹೆ.
ಕರ್ಕಾಟಕ: ಊರಿನ ದೇವಾಲಯಕ್ಕೆ ಭೇಟಿ. ಸಾರ್ವಜನಿಕ ಸೌಕರ್ಯ ಸುಧಾರಣೆಗೆ ಊರಿನವರ ಶ್ರಮದಾನ. ಚಾರಿತ್ರ್ಯವಂತರ ಹೆಸರು ಕೆಡಿಸಲು ಕುತಂತ್ರ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ.
ಸಿಂಹ: ತಪ್ಪಿಸಿಕೊಳ್ಳಲು ಸಾಧ್ಯವಾಗದಷ್ಟು ಹೊಣೆಗಾರಿಕೆಗಳು. ನಾಳೆಯ ಕೆಲಸಗಳ ಕುರಿತು ಚಿಂತನೆ. ಉದ್ಯಮಕ್ಕೆ ಹೊಸ ರೂಪ ನೀಡುವ ಪ್ರಯತ್ನ. ಕುಟುಂಬದ ಮನೆಯಲ್ಲಿ ದೇವತಾರ್ಚನೆ. ನಿಮ್ಮ ವರ್ತನೆಯಿಂದ ಮನೆಮಂದಿಗೆ ಬೇಸರವಾಗದಿರಲಿ.
ಕನ್ಯಾ: ಅಪರೂಪದ ನೆಂಟರೊಂದಿಗೆ ವಿರಾಮ ಆಚರಣೆ. ಪತ್ರಕರ್ತರಿಗೆ ಅಪವಾದ ಬರುವ ಭೀತಿ. ಹಿರಿಯರ ಆಸ್ತಿಯಲ್ಲಿ ಕೃಷಿ ಅಭಿವೃದ್ಧಿ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಹೊಗಳು ಭಟರಿಂದ ದೂರವಿರಿ.
ತುಲಾ: ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ ನೀಡಲು ಅವಕಾಶ. ಉದ್ಯಮಿಗಳಿಗೆ ಪೈಪೋಟಿಯಿಂದ ತಾತ್ಕಾಲಿಕ ಮುಕ್ತಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಮಾರ್ಗದರ್ಶನ. ಸಹೋ ದ್ಯೋಗಿಗಳೊಡನೆ ಸಣ್ಣ ಪ್ರವಾಸ.
ವೃಶ್ಚಿಕ: ಎಲ್ಲ ರೀತಿಯಲ್ಲೂ ಅನುಕೂಲದ ಪರಿಸ್ಥಿತಿ. ಆತ್ಮಗೌರವಕ್ಕೆ ಚ್ಯುತಿಯಾಗದು. ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಸನ್ನಿವೇಶ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳಿಗಾಗಿ ಖರ್ಚು.
ಧನು: ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳ ಅದೃಷ್ಟಕ್ಕೆ ತಡೆ ಇಲ್ಲ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರೋತ್ಸಾಹ. ವಾಹನ ಚಾಲನೆಯಲ್ಲಿ ಅವಸರ ಬೇಡ.
ಮಕರ: ಒಂದಿಲ್ಲೊಂದು ಕಿರಿಕಿರಿ ತಪ್ಪದು. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಮಕ್ಕಳ ಆರೋಗ್ಯ ಸುಧಾರಣೆ. ತಂದೆಯ ಕಡೆಯ ಬಂಧುಗಳ ಆಗಮನ.
ಕುಂಭ: ನಿಲ್ಲದೆ ಸಾಗುವ ಕೆಲಸ, ಕಾರ್ಯಗಳು. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ. ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ.
ಮೀನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಸೇವಾ ರೂಪದ ಕಾರ್ಯಗಳ ಮುಂಚೂಣಿಗೆ ಪ್ರವೇಶ. ಹಿರಿಯರ ಉದ್ಯಮಕ್ಕೆ ಹೊಸ ರೂಪ ನೀಡುವ ಕ್ರಮ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಸಾಲಬಾಧೆಯಿಂದ ಮುಕ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.