BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Team Udayavani, Dec 29, 2024, 7:33 AM IST
ಬೆಂಗಳೂರು: ಬಿಗ್ ಬಾಸ್ ಆಟ ಫಿನಾಲೆಯತ್ತ ಸಾಗುತ್ತಿದೆ. ಸ್ಪರ್ಧಿಗಳು ವೈಯಕ್ತಿಕ ಆಟದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಮುಂದಾಗುತ್ತಿದ್ದಾರೆ.
ಈ ನಡುವೆ ದೊಡ್ಮನೆಯಿಂದ 13ನೇ ವಾರದಿಂದ ಒಬ್ಬರು ಆಚೆ ಬಂದಿದ್ದಾರೆ. ಆ ಮೂಲಕ ಬಿಗ್ ಬಾಸ್ ಆಟದಿಂದ ಖ್ಯಾತ ಸ್ಪರ್ಧಿ ಔಟ್ ಆಗಿದ್ದಾರೆ.
ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಇಡೀ ವಾರ ನಡೆದ ವಿಚಾರಗಳ ಬಗ್ಗೆ ಮಾತನಾಡಿ, ಖಡಕ್ ಆಗಿಯೇ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಭವ್ಯ ಅವರ ಆಟದ ವೈಖರಿಗೆ ಕಿಚ್ಚ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ಸಿ ವಿಚಾರವಾಗಿ ನಡೆದ ಕೆಲ ಗೊಂದಲಗಳ ಮಾತನಾಡಿದ್ದಾರೆ. ಅದರಂತೆ ನಾಮಿನೇಟ್ ಆಗಿರುವ 8 ಸದಸ್ಯರಲ್ಲಿ ಒಬ್ಬೊಬ್ಬರನ್ನು ಕಿಚ್ಚ ಸೇಫ್ ಎಂದು ಹೇಳಿದ್ದಾರೆ. ಹನುಮಂತು ಹಾಗೂ ಧನರಾಜ್ ಅವರು ಆರಂಭಿಕವಾಗಿ ಸೇವ್ ಆಗಿದ್ದಾರೆ.
ಚೈತ್ರಾ, ಗೌತಮಿ, ಮೋಕ್ಷಿತಾ, ತ್ರಿವಿಕ್ರಮ್, ಮಂಜು ಹಾಗೂ ಐಶ್ವರ್ಯಾ ಅವರಲ್ಲಿ ಕಡಿಮೆ ವೋಟ್ ಪಡೆದ ಒಬ್ಬರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಮೂಲಗಳ ಪ್ರಕಾರ ಐಶ್ವರ್ಯಾ ಹಾಗೂ ಮೋಕ್ಷಿತಾ ಅವರು ಬಾಟಂನಲ್ಲಿರಲ್ಲಿದ್ದಾರೆ. ಈ ಪೈಕಿ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಶಿಶಿರ್ ಅವರು ಮನೆಯಿಂದ ಆಚೆ ಬಂದ ಬಳಿಕ ಐಶ್ವರ್ಯಾ ಅವರು ದೊಡ್ಮನೆ ಮೊದಲ ಎರಡು ದಿನ ಡಲ್ ಆಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಉತ್ತಮವಾಗಿ ಆಡುತ್ತಿದ್ದರು.
ಈ ಹಿಂದೆ ಚೈತ್ರಾ ಅವರೊಂದಿಗೆ ಅವರನ್ನು ಕನ್ಫೆಷನ್ ರೂಮ್ ನಲ್ಲಿಟ್ಟು ಎಲಿಮಿನೇಷನ್ ಚಮಕ್ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
BBK11: ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಪೋಷಕರು ಎಂಟ್ರಿ; ತಾಯಿ ನೋಡಿ ತ್ರಿವಿಕ್ರಮ್ ಕಣ್ಣೀರು
BBK11: ಮಂಜುಗೆ ದುರಹಂಕಾರ ನಿರ್ವಹಣೆಯ ಕಷಾಯ ಕುಡಿಸಿದ ಭವ್ಯ.! ಇಬ್ಬರ ನಡುವೆ ಟಾಕ್ ವಾರ್
ಬಿಗ್ ಬಾಸ್ ಮನೆಯಿಂದ ಇಬ್ಬರು ಪ್ರಬಲ ಸ್ಪರ್ಧಿಗಳು ಔಟ್; ವೀಕ್ಷಕರಿಗೆ ಬಿಗ್ ಶಾಕ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.