Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ


Team Udayavani, Dec 29, 2024, 12:30 PM IST

13-health

ಮಧುಮೇಹ ಇಂದು ಅಂಕೆ ಮೀರಿ ವಿಜೃಂಭಿಸುತ್ತಿದೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟವು ಒದಗಿಸುವ ಅಂಕಿಅಂಶಗಳ ಪ್ರಕಾರ ಕಡಿಮೆ ಮತ್ತು ಮಧ್ಯಮ ತಲಾದಾಯದ ದೇಶಗಳ ಪ್ರತೀ ನಾಲ್ಕರಲ್ಲಿ ಮೂರು ಮಂದಿ ಮಧುಮೇಹಿಗಳಾಗಿರುತ್ತಾರೆ. ಪ್ರತೀ ವರ್ಷ ನವೆಂಬರ್‌ 14ನೇ ದಿನಾಂಕವನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಮಧುಮೇಹವನ್ನು ಒಂದು ಜಾಗತಿಕ ಆರೋಗ್ಯ ಸಮಸ್ಯೆ ಎಂಬುದಾಗಿ ಪರಿಗಣಿಸಿ, ಅದರ ವಿರುದ್ಧ ಸಮನ್ವಯದ, ಒಗ್ಗಟ್ಟಾದ ಹೋರಾಟವನ್ನು ಸಂಘಟಿಸುವ ಗುರಿಯೊಂದಿಗೆ ಈ ದಿನವನ್ನು ಆಚರಿಸುತ್ತೇವೆ. ಪ್ರತಿಯೊಂದು ರೋಗದ ವಿಷಯದಲ್ಲಿಯೂ ಅದು ಬಾರದಂತೆ ತಡೆಯುವುದು ಬಂದ ಮೇಲೆ ಗುಣಪಡಿಸುವುದಕ್ಕಿಂತ ಉತ್ತಮ ಎಂಬ ಮಾತಿದೆ.

ಆದರೆ ಮಧುಮೇಹ ತಲೆದೋರಿದರೆ ಗುಣ ಎಂಬುದೇ ಇಲ್ಲ; ನಿಯಂತ್ರಣ ಇರಿಸಿಕೊಳ್ಳಬಹುದು ಅಷ್ಟೇ! ಹೀಗಾಗಿಯೇ ಮಧುಮೇಹ ಉಂಟಾಗದಂತೆ ತಡೆಯುವುದು ಹೇಗೆ ಮತ್ತು ಅದು ತಲೆದೋರಿದರೆ ಅದನ್ನು ಸಮರ್ಪಕವಾಗಿ ನಿರ್ವಹಿಸುವುದು ಹೇಗೆ ಎಂಬುದು ಬಹಳ ಪ್ರಾಮುಖ್ಯವಾಗಿದೆ. ಸಾಮಾನ್ಯವಾಗಿ ಕಂಡುಬರುವ ಮಧುಮೇಹ -ಟೈಪ್‌ 1, ಮಧುಮೇಹ- ಟೈಪ್‌2, ಗರ್ಭಧಾರಣೆಯ ಸಮಯದಲ್ಲಿ ಕಾಣಿಸಿಕೊಳ್ಳುವಂಥದ್ದು ಆಗಿರಲಿ ಅಥವಾ ಯಾವುದೇ ವಿಧವಾದ ಮಧುಮೇಹವಾಗಿರಲಿ; ಸಮರ್ಪಕ ನಿಯಂತ್ರಣ ಮತ್ತು ಚಿಕಿತ್ಸೆಯ ಹೂರಣ ಎಂದರೆ “ಆಹಾರಕ್ರಮವನ್ನು ಸರಿಪಡಿಸಿಕೊಳ್ಳುವುದು.’

ಮಧುಮೇಹಿಗಳು ಅನುಸರಿಸಬೇಕಾದ ವೈದ್ಯಕೀಯ ಪೌಷ್ಟಿಕಾಂಶ ಚಿಕಿತ್ಸೆ (ಮೆಡಿಕಲ್‌ ನ್ಯೂಟ್ರಿಶನ್‌ ಥೆರಪಿ – ಎಂಎನ್‌ಟಿ)ಯು ನುರಿತ ಪಥ್ಯಾಹಾರ ತಜ್ಞರಿಂದ ವ್ಯಕ್ತಿನಿರ್ದಿಷ್ಟವಾಗಿ ವಿನ್ಯಾಸಗೊಂಡದ್ದು ಆಗಿರಬೇಕು. ಎಂಎನ್‌ಟಿಯ ಬಗ್ಗೆ ನಡೆಸಲಾಗಿರುವ ವೈದ್ಯಕೀಯ ಅಧ್ಯಯನಗಳಲ್ಲಿ ಕಂಡುಬಂದಿರುವ ಪ್ರಕಾರ 3-6 ತಿಂಗಳುಗಳ ಅವಧಿಯಲ್ಲಿ ಎಚ್‌ಬಿಎ1ಸಿಯು ಶೇ. 3ರಷ್ಟು ಇಳಿಕೆಯಾಗಿದ್ದು, ಟೈಪ್‌ 2 ಮಧುಮೇಹಿಗಳಲ್ಲಿ ಹೆಚ್ಚು ಇಳಿಕೆ ಕಂಡುಬಂದಿದೆ.

ಮಧುಮೇಹ ನಿಯಂತ್ರಣಕ್ಕೆ ಸಲಹೆಗಳು

 ಸಂಪೂರ್ಣವಾಗಿ ಹೊಸ ಪಥ್ಯಾಹಾರ ಕ್ರಮವನ್ನು ಅಳವಡಿಸಿಕೊಳ್ಳುವುದಕ್ಕಿಂತ ಈಗ ಇರುವ ಆಹಾರ ಕ್ರಮವನ್ನು ಸಮರ್ಪಕವಾಗಿ ಬದಲಾಯಿಸಿಕೊಂಡು ಅನುಸರಿಸುವುದು ಪ್ರಾಯೋಗಿಕವಾಗಿ ಹೆಚ್ಚು ಸುಲಭ, ಯೋಗ್ಯ.

 ಮಾದರಿ ದೇಹತೂಕವನ್ನು ಸಾಧಿಸಿ, ಮುಂದುವ ರಿಸುವುದು ಪ್ರಾಮುಖ್ಯ.

 ಸಂಸ್ಕರಿತ ಆಹಾರಗಳು ಕಡಿಮೆ ಇರುವ ಪೌಷ್ಟಿಕಾಂಶಗಳು, ಸಂಕೀರ್ಣ ಕಾರ್ಬೋಹೈಡ್ರೇಟ್‌ ಗಳು, ಉತ್ತಮ ಗುಣಮಟ್ಟದ ಪ್ರೊಟೀನ್‌ ಸಮೃದ್ಧವಾಗಿರುವ, ಸ್ಯಾಚುರೇಟೆಡ್‌ ಕೊಬ್ಬುಗಳು ಕಡಿಮೆ ಇರುವ ಹಾಗೂ ಕರಗಬಲ್ಲ ನಾರಿನಂಶ ಹೆಚ್ಚಿರುವ ಸಮತೋಲಿತ ಆಹಾರ ಕ್ರಮವನ್ನು ಅನುಸರಿಸಬೇಕು.

ಮಧುಮೇಹಿ ಆಹಾರ ಕ್ರಮ ಹೇಗೆ?

  1. ಸರಳ ವಿಧಾನವೆಂದರೆ ಒಂದು ಬಟ್ಟಲು ವಿಧಾನವನ್ನು ಅನುಸರಿಸುವುದು
  2. ಆಗಾಗ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ: ಬೆಳಗಿನ ಉಪಾಹಾರ, ಪೂರ್ವಾಹ್ನದ ತಿನಿಸು, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ ಮತ್ತು ರಾತ್ರಿಯೂಟ.
  3. ಪ್ರತೀ ಬಾರಿಯ ಆಹಾರದಲ್ಲಿಯೂ ತರಕಾರಿಗಳನ್ನು ಪಲ್ಯ/ ಸಬ್ಜಿ ಅಥವಾ ಸಲಾಡ್‌ ರೂಪದಲ್ಲಿ ಉಪಯೋಗಿಸಿ. ತರಕಾರಿಗಳಲ್ಲಿ ಇರುವ ನಾರಿನಂಶವು ರಕ್ತದಲ್ಲಿ ಗ್ಲುಕೋಸ್‌ ಮಟ್ಟವನ್ನು, ಕೊಲೆಸ್ಟರಾಲ್‌ ಮಟ್ಟವನ್ನು ಮತ್ತು ಬಿಎಂಐ ತಗ್ಗಿಸಲು ಸಹಾಯ ಮಾಡುತ್ತದೆ.
  4. ನಿಮ್ಮ ದೈಹಿಕ ಚಟುವಟಿಕೆಯ ಮಟ್ಟಕೆ ಅನುಗುಣವಾಗಿ ಆಹಾರ ಸೇವಿಸಿ. ಅಂದರೆ, ಬೆಳಗಿನ ಉಪಾಹಾರ ಹೊಟ್ಟೆ ತುಂಬ ಸೇವಿಸಿ (ಧಾನ್ಯಗಳು-ಬೇಳೆಕಾಳುಗಳು ಸಂಯೋಜಿತವಾಗಿರಲಿ), ಮಧ್ಯಾಹ್ನದ ಊಟ ಮಿತವಾಗಿರಲಿ ಮತ್ತು ರಾತ್ರಿಯೂಟ ಲಘುವಾಗಿರಲಿ.
  5. ಊಟ-ಉಪಾಹಾರಗಳ ಪ್ರಮಾಣವನ್ನು ಕಡಿಮೆ ಮಾಡಿ. ಅಂದರೆ, ಬೆಳಗಿನ ಉಪಾಹಾರಕ್ಕೆ 2 ದೋಸೆಗಳು, ಮಧ್ಯಾಹ್ನದ ಊಟಕ್ಕೆ 1 ಕಪ್‌ ಅನ್ನ, ರಾತ್ರಿಯೂಟಕ್ಕೆ ಅರ್ಧ ಕಪ್‌ ಅನ್ನ ಮತ್ತು 1 ರೋಟಿ.
  6. ಸ್ಥಳೀಯವಾಗಿ ದೊರಕುವ ರಾಗಿ, ಹರಿವೆ ಸೊಪ್ಪು, ನುಗ್ಗೆಸೊಪ್ಪು, ಬಸಳೆ, ನೆಲ್ಲಿಕಾಯಿ, ಪಪ್ಪಾಯಿ, ಬೆಂಡೆ, ಕರಿಬೇವು, ಪೇರಳೆ ಇತ್ಯಾದಿ ಹಣ್ಣು ತರಕಾರಿಗಳನ್ನು ಬಳಸಿ. ಇತರ ಪ್ರದೇಶಗಳಿಂದ ಆವಕವಾದ ಹಣ್ಣು ತರಕಾರಿಗಳಿಗಿಂತ ನಮ್ಮ ಪ್ರದೇಶದಲ್ಲಿಯೇ ಬೆಳೆದವು ಹೆಚ್ಚು ಪೌಷ್ಟಿಕಾಂಶ ಹೊಂದಿರುತ್ತವೆ, ನಮ್ಮ ದೇಹಪ್ರಕೃತಿಗೆ ಹೆಚ್ಚು ಒಗ್ಗುತ್ತವೆ.
  7. ಪೇರಳೆ, ಕಿತ್ತಳೆ, ಮೂಸಂಬಿ, ಪಪ್ಪಾಯಿ, ಕಲ್ಲಂಗಡಿ, ಮಸ್ಕ್ ಮೆಲನ್‌ ಇತ್ಯಾದಿ ಹಣ್ಣುಗಳನ್ನು ಸೇವಿಸಿ (ದಿನಕ್ಕೆ 50 ಗ್ರಾಂ ಅಥವಾ ಮಧ್ಯಮ ಗಾತ್ರದ ಸೇಬು). ಬಾಳೆಹಣ್ಣು, ಚಿಕ್ಕು, ದ್ರಾಕ್ಷಿ, ಸೀತಾಫ‌ಲದಂತಹ ಹಣ್ಣುಗಳಲ್ಲಿ ಹೆಚ್ಚು ಸಕ್ಕರೆಯಂಶ ಇರುವ ಕಾರಣ ಇವು ಬೇಡ.
  8. ಆಳವಾಗಿ ಕರಿದ/ ಪೊಟ್ಟಣಗಳಲ್ಲಿ ಸಿಗುವ ಆಹಾರವಸ್ತುಗಳನ್ನು ಸೇವಿಸಬೇಡಿ. ಅವುಗಳಲ್ಲಿ ಟ್ರಾನ್ಸ್‌ ಫ್ಯಾಟ್‌, ಕೇವಲ ಕ್ಯಾಲೊರಿಗಳು ಹೆಚ್ಚಿರುತ್ತವೆ. ಆಹಾರವಸ್ತುಗಳನ್ನು ಹಬೆಯಲ್ಲಿ ಬೇಯಿಸುವುದು, ಕುದಿಸಿ ಉಪಯೋಗಿಸುವುದು ಉತ್ತಮ.
  9. ನೆಲಗಡಲೆ, ಟೊಮೇಟೊ, ಹುರಿಗಡಲೆ ಇತ್ಯಾದಿಗಳನ್ನು ಚಟ್ನಿ, ಪದಾರ್ಥಗಳ ರಸ ತಯಾರಿಸಲು ಉಪಯೋಗಿಸಿ, ತೆಂಗಿನಕಾಯಿ ಉಪಯೋಗವನ್ನು ಕಡಿಮೆ ಮಾಡಿ. ತೆಂಗಿನಕಾಯಿಯಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಹೆಚ್ಚಿರುತ್ತದೆ, ದೈಹಿಕವಾಗಿ ಹೆಚ್ಚು ಸಕ್ರಿಯರಲ್ಲದ ಜನರು ತೆಂಗಿನಕಾಯಿ ಉಪಯೋಗವನ್ನು ಕಡಿಮೆ ಮಾಡಬೇಕು. ಹುರಿದ ನೆಲಗಡಲೆ, ಹುರಿಗಡಲೆ, ಮಖಾನಾ (ತಾವರೆ ಬೀಜ)ಗಳನ್ನು ಉಪಾಹಾರವಾಗಿ ಸೇವಿಸಬಹುದು.
  10. ದಿನಕ್ಕೆ 2-3 ಲೀಟರ್‌ ನೀರು/ ದ್ರವಾಹಾರ ಸೇವಿಸಿ. ಎಳನೀರು, ಗಂಜಿ/ ದಪ್ಪ ಅಂಬಲಿ ಸೇವನೆ ಬೇಡ. ತೆಳುವಾದ ಓಟ್ಸ್‌ ಮತ್ತು ರಾಗಿ ಅಂಬಲಿಯನ್ನು ಬಳಸಬಹುದು.
  11. ಖಾದ್ಯ ಎಣ್ಣೆಯ ಬಳಕೆ ಪ್ರತೀ ವ್ಯಕ್ತಿಗೆ ತಿಂಗಳಿಗೆ 500 ಮಿ.ಲೀ.ಗಳಷ್ಟು ಮಿತವಾಗಿರಬೇಕು. ಉದಾಹರಣೆಗೆ, ನಾಲ್ಕು ಮಂದಿಯ ಒಂದು ಕುಟುಂಬಕ್ಕೆ ತಿಂಗಳಿಗೆ 2 ಲೀಟರ್‌ ಎಣ್ಣೆ. ಖಾದ್ಯ ಎಣ್ಣೆ, ಭತ್ತದ ತೌಡಿನ ಎಣ್ಣೆ (ರೈಸ್‌ ಬ್ರ್ಯಾನ್‌ ಆಯಿಲ್‌)ಗಳನ್ನು ಸಂಯೋಜಿತವಾಗಿ ಉಪಯೋಗಿಸುವುದರಿಂದ ರಕ್ತದಲ್ಲಿ ಕೊಲೆಸ್ಟರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.
  12. ಆಹಾರ ವಸ್ತುಗಳ ಪೊಟ್ಟಣಗಳ ಮೇಲಿರುವ ಲೇಬಲ್‌ಗ‌ಳನ್ನು ಎಚ್ಚರಿಕೆಯಿಂದ ಓದಿ. ಸಕ್ಕರೆ ರಹಿತ, ಕೊಬ್ಬು ರಹಿತ ಅಥವಾ ಹೆಚ್ಚು ನಾರಿನಂಶ ಹೊಂದಿರುವ ಆಹಾರವಸ್ತುಗಳಲ್ಲಿ ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್‌ ಕಡಿಮೆ ಇರುತ್ತದೆ.
  13. ದೈಹಿಕವಾಗಿ ಚಟುವಟಿಕೆಯಿಂದ ಇರಿ. ಪ್ರತೀದಿನ ಕನಿಷ್ಠ 45 ನಿಮಿಷ ಬಿರುಸಾದ ನಡಿಗೆ ಇರಲಿ. ಪ್ರತೀದಿನ ಯೋಗ, ಪ್ರಾಣಾಯಾಮ, ವಿವಿಧ ಹವ್ಯಾಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಒತ್ತಡವನ್ನು ನಿಭಾಯಿಸಿ.
  14. ಉಪವಾಸ ಮಾಡಬೇಡಿ, ಅದರಿಂದ ಹೈಪೊಗ್ಲೈಸೇಮಿಯಾ (ರಕ್ತದಲ್ಲಿ ಗುÉಕೋಸ್‌ ಅಂಶ ಹಠಾತ್‌ ಕುಸಿಯುವುದು) ಉಂಟಾಗಬಹುದು. ಹಾಗೆಯೇ ಹೊಟ್ಟೆ ಬಿರಿಯೆ ಆಹಾರ ಸೇವಿಸುವುದು ಕೂಡ ಸಲ್ಲದು.
  15. ಮದ್ಯಪಾನ, ಧೂಮಪಾನ ಮತ್ತು ತಂಬಾಕು ಬಳಕೆಯನ್ನು ನಿಲ್ಲಿಸಿ. ಮದ್ಯಪಾನದಿಂದ ಹೈಪೊಗ್ಲೈಸೇಮಿಯಾ, ದೇಹತೂಕ ಹೆಚ್ಚಳ ಮತ್ತು ಹೈಪರ್‌ ಗ್ಲೆ„ಸೇಮಿಯಾ ಉಂಟಾಗಬಹುದು.

ಕೆಲವು ಸುಳ್ಳುಗಳು ಮತ್ತು ಕೆಲವು ಸತ್ಯಗಳು

  1. ಸುಳ್ಳು: ಮಧುಮೇಹಿಗಳು ಸಕ್ಕರೆ ಉಪಯೋಗಿಸಬಾರದು; ಬೆಲ್ಲ ಬಳಸಬಹುದು. ಸತ್ಯ: ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪ ಇವೆಲ್ಲವೂ ಸಕ್ಕರೆ ವಸ್ತುಗಳಾಗಿದ್ದು, ರಕ್ತದಲ್ಲಿ ಗ್ಲುಕೋಸ್‌ ಅಂಶವನ್ನು ನೇರವಾಗಿ ಹೆಚ್ಚಿಸುತ್ತವೆ. ಈ ಎಲ್ಲವುಗಳ ಬಳಕೆಯನ್ನೂ ವರ್ಜಿಸಬೇಕು.
  2. ಸುಳ್ಳು: ಅನ್ನ/ಗೋಧಿ ಉಪಯೋಗಿಸಬಾರದು. ಸತ್ಯ: ಅನ್ನ ಅಥವಾ ಗೋಧಿಯನ್ನು ಮಿತಪ್ರಮಾಣದಲ್ಲಿ ಸಮ ಪ್ರಮಾಣದಲ್ಲಿ ಹೆಚ್ಚು ನಾರಿನಂಶವಿರುವ ತರಕಾರಿಗಳ ಜತೆಗೆ ಸೇವಿಸಬಹುದು. ಗ್ಲುಟೆನ್‌ಗೆ ಪ್ರತಿಸಂವೇದನೆ/ ಅಲರ್ಜಿ ಇದ್ದಾಗ ಮಾತ್ರ ಗೋಧಿ ಬಳಕೆ ನಿಲ್ಲಿಸಬೇಕು.
  3. ಸುಳ್ಳು: ಹಾಲು/ ಮೊಸರು ಸೇವಿಸಬಾರದು. ಸತ್ಯ: ಹಾಲು ಮತ್ತು ಮೊಸರು ಕ್ಯಾಲ್ಸಿಯಂ ಮತ್ತು ಪ್ರೊಟೀನ್‌ನ ಉತ್ತಮ ಮೂಲಗಳಾಗಿವೆ. ಕೆನೆಯನ್ನು ತೆಗೆದು ಇವುಗಳನ್ನು ಮಿತಪ್ರಮಾಣದಲ್ಲಿ ಸೇವಿಸಬಹುದು.
  4. ಸುಳ್ಳು: ಎಲ್ಲ ಕಾಯಿ/ಬೀಜಗಳನ್ನು ಸೇವಿಸಬಹುದು. ಸತ್ಯ: ಬಾದಾಮಿ, ವಾಲ್‌ನಟ್‌, ಪಿಸ್ತಾ, ನೆಲಗಡಲೆಗಳನ್ನು ಮಿತಪ್ರಮಾಣದಲ್ಲಿ ಸೇವಿಸಬಹುದು. ಗೇರುಬೀಜ, ಒಣದ್ರಾಕ್ಷಿ, ಅಂಜೂರ ಮತ್ತು ಖರ್ಜೂರ ಸೇವನೆ ಬೇಡ.
  5. ಸುಳ್ಳು: ಕಹಿ ರುಚಿಯ ಎಲ್ಲ ಆಹಾರವಸ್ತುಗಳು ರಕ್ತದ ಗ್ಲುಕೋಸ್‌ ಮಟ್ಟ ನಿಯಂತ್ರಣಕ್ಕೆ ಸಹಕಾರಿ. ಸತ್ಯ: ಮೆಂತೆಸೊಪ್ಪು/ ಮೆಂತೆ ಮಾತ್ರ ಪ್ರಯೋಜನಕಾರಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅರಶಿನ, ದಾಲಿcನ್ನಿಯಂತಹ ಸಂಬಾರವಸ್ತುಗಳನ್ನು ಮಿತಪ್ರಮಾಣದಲ್ಲಿ ಉಪಯೋಗಿಸಬಹುದು. “ಮಧುಮೇಹವನ್ನು ಅದು ನಿಮ್ಮನ್ನು ನಿಯಂತ್ರಿಸುವುದಕ್ಕೆ ಮುನ್ನ ಹಿಡಿತಕ್ಕೆ ತಂದುಕೊಳ್ಳಿ!’

ರೆಫ‌ರೆನ್ಸ್‌ಗಳು

1. Standards of Care in Diabetes—2024

2. Indian Dietetic Association. (2018). Clinical Detetics Manual (2nd edition ed.). New Delhi: Elite Publishing House.

3. International Diabetes Federation . (2022). IDF Diabetes Atlas. Retrieved from diabetesatlas: diabetesatlas.org

-ವಿದ್ಯಾ ರಾಜೇಶ್‌

ಕ್ಲಿನಿಕಲ್‌ ಡಯಟೀಶಿಯನ್‌

ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ,

ಮಾಹೆ, ಕಾರ್ಕಳ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಂಡೊಕ್ರೈನಾಲಜಿ ಮತ್ತು ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.