Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್; ಸುಗಮ ಸಂಚಾರಕ್ಕೆ ಅಡ್ಡಿ
ಹೆದ್ದಾರಿಯಿಂದ ಹಳೆಯಂಗಡಿ ಒಳಪೇಟೆಗೆ ತೆರಳುವ ಅಡ್ಡರಸ್ತೆ
Team Udayavani, Dec 29, 2024, 3:07 PM IST
ಮೂಲ್ಕಿ: ಹಳೆಯಂಗಡಿಯ ಒಳಪೇಟೆಗೆ ಹೆದ್ದಾರಿಯಿಂದ ಹೋಗಲು ಮತ್ತು ಬರಲು ಇರುವ ಅಡ್ಡರಸ್ತೆಯ ಬದಿಯಲ್ಲಿ ಅಡ್ಡವಾಗಿ ಸರತಿ ಸಾಲಿನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ನಿಲುಗಡೆಯನ್ನು ನಿಷೇಧಿಸಿ ಬೋರ್ಡ್ ಅಳವಡಿಸಿದೆಯಾರೂ ಜನ ಕ್ಯಾರೆ ಎನ್ನದೆ ತಮ್ಮ ವಾಹನಗಳನ್ನು ಇಲ್ಲಿ ನಿಲುಗಡೆ ಮಾಡುತ್ತಿದ್ದು, ಸಂಚಾರ ಸಮಸ್ಯೆ ಮುಂದುವರಿದಿದೆ ಎಂದು ನಿತ್ಯಸಂಚಾರಿಗಳು ದೂರಿದ್ದಾರೆ.
ಇದು ಒಳ ರಸ್ತೆ ಆಗಿರುವ ಕಾರಣ ಅಗಲಕಿರಿದಾಗಿದ್ದು, ಬದಿ ಯಲ್ಲಿ ವಾಹನ ಪಾರ್ಕ್ ಮಾಡಿದರೆ ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಯಾಗುತ್ತದೆ. ಅಲ್ಲದೆ ಪಾದಚಾರಿಗಳು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಇಲ್ಲಿ ವಾಹನ ಪಾರ್ಕ್ ಮಾಡಿದವರ ಮೇಲೆ ಕೇಸು ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಗ್ರಾಮ ಪಂಚಾಯತ್ ಬೋರ್ಡ್ ಹಾಕಿದೆ. ಆದರೆ ದಂಡ ಪಡೆಯುವವರು ಹಾಗೂ ವಾಹನ ನಿಲುಗಡೆ ಮಾಡದಂತೆ ಸೂಚಿಸಲು ಸಂಬಂಧಪಟ್ಟವರು ಯಾರೂ ಸ್ಥಳದಲ್ಲಿಲ್ಲ. ಹಾಗಾಗಿ ಜನರು ಯಾವುದೇ ಭಯವಿಲ್ಲದೆ ದಿನದ 8ರಿಂದ 10 ಗಂಟೆಗಳ ಕಾಲ ತಮ್ಮ ವಾಹನವನ್ನು ಇಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ.
ಪಕ್ಷಿಕೆರೆ ಕಿನ್ನಿಗೋಳಿ ರಸ್ತೆಯಿಂದ ಅಡ್ಡವಾಗಿ ಮತ್ತು ಹೆದ್ದಾರಿಯಿಂದ ಒಳ ಪೇಟೆಯತ್ತಾ ಹೋಗುವಲ್ಲಿ ಸುಮಾರು ಅರ್ಧ ಫರ್ಲಾಂಗು ಉದ್ದಕ್ಕಿರುವ ಈ ಅಡ್ಡ ರಸ್ತೆಯಲ್ಲಿ ಬೇರೆ ಬೇರೆ ಕೆಲಸ ನಿಮಿತ್ತ ವಿವಿಧೆಡೆಗಳಿಗೆ ಹೋಗುವ ಜನ ತಮ್ಮ ದ್ವಿಚಕ್ರ ವಾಹನವನ್ನು ಇಲ್ಲಿರಿಸಿ ಹೋಗುವ ಕಾರಣದಿಂದ ಈ ರಸ್ತೆಯಲ್ಲಿ ಎದುರು ಬದುರು ವಾಹನ ಬಂದಾಗ ಸಂಚಾರ ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯಿಂದ ಕಾನೂನು ಕ್ರಮ ಜರಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.