Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು


Team Udayavani, Dec 29, 2024, 3:51 PM IST

20-health

ತಮ್ಮ ಶಿಶು ಉಸಿರಾಡಲು ಕಷ್ಟಪಟ್ಟರೆ ಪ್ರತೀ ಹೆತ್ತವರು ಕೂಡ ಆತಂಕಕ್ಕೆ ಒಳಗಾಗುತ್ತಾರೆ. ಚಳಿಗಾಲದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸುವುದಕ್ಕೆ ಬ್ರೊಂಕೊಲೈಟಿಸ್‌ ಒಂದು ಸಾಮಾನ್ಯವಾದ ಕಾರಣವಾಗಿದೆ.

ಬ್ರೊಂಕೊಲೈಟಿಸ್‌ ಎಂದರೇನು?

ಬ್ರೊಂಕೊಲೈಟಿಸ್‌ ಎಂದರೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶ್ವಾಸಾಂಗ ಸೋಂಕು. ಶ್ವಾಸಕೋಶದ ಸೂಕ್ಷ್ಮ ವಾಯುಮಾರ್ಗಗಳಲ್ಲಿ ಉರಿಯೂತ ಮತ್ತು ಅಡಚಣೆ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆ ಉಂಟಾಗುವುದು ಇದರ ಸಾಮಾನ್ಯ ಗುಣಲಕ್ಷಣ. ಇದು ಋತುಮಾನೀಯವಾಗಿ ಕಂಡುಬರುವ, ರೆಸ್ಪಿರೇಟರಿ ಸಿನ್ಸಿಶಿಯಲ್‌ ವೈರಸ್‌ (ಆರ್‌ಎಸ್‌ವಿ) ನಿಂದ ಉಂಟಾಗುವ ಒಂದು ಅನಾರೋಗ್ಯವಾಗಿದ್ದು, ಚಳಿಗಾಲದಲ್ಲಿ ಯೇ ಇದರ ಕಾಟ ಹೆಚ್ಚು. ರಿನೊವೈರಸ್‌, ಅಡೆನೋವೈರಸ್‌ ಮತ್ತು ಪ್ಯಾರಾಇನ್‌ಫ್ಲುಯೆಂಜಾ ವೈರಾಣುಗಳು ಕೂಡ ಬ್ರೊಂಕೊಲೈಟಿಸ್‌ ಉಂಟು ಮಾಡುತ್ತವೆ.

ಈ ಕಾಯಿಲೆ ಹೇಗೆ ಹರಡುತ್ತದೆ?

ಬ್ರೊಂಕೊಲೈಟಿಸ್‌ ಉಂಟಾಗುವುದಕ್ಕೆ ಪ್ರಧಾನ ಕಾರಣ ಆರ್‌ಎಸ್‌ವಿ ಆಗಿದ್ದು, ಇದು ಸೋಂಕುಪೀಡಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಅವರ ಮೂಗು, ಬಾಯಿಗಳಿಂದ ಹೊರಬಿದ್ದು ಗಾಳಿಯಲ್ಲಿ ಬೆರೆಯುವ ಹನಿಬಿಂದುಗಳ ಮೂಲಕ ಪ್ರಸಾರವಾಗುತ್ತದೆ. ಈ ವೈರಾಣುವು ಆಟಿಕೆಗಳು, ಪೀಠೊಪಕರಣಗಳ ಮೇಲ್ಮೈ ಬಾಗಿಲಿನ ಹಿಡಿಕೆಗಳಂತಹ ವಸ್ತುಗಳ ಹೆತ್ತವರು ತಿಳಿದಿರಬೇಕಾದ ಅಂಶಗಳು ತಮ್ಮ ಶಿಶು ಉಸಿರಾಡಲು ಕಷ್ಟಪಟ್ಟರೆ ಪ್ರತೀ ಹೆತ್ತವರು ಕೂಡ ಆತಂಕಕ್ಕೆ ಒಳಗಾಗುತ್ತಾರೆ. ಚಳಿಗಾಲದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸುವುದಕ್ಕೆ ಬ್ರೊಂಕೊಲೈಟಿಸ್‌ ಒಂದು ಸಾಮಾನ್ಯವಾದ ಕಾರಣವಾಗಿದೆ. ಮೇಲೆ ಬದುಕುಳಿಯಬಲ್ಲುದು. ಅವಧಿಪೂರ್ವ ಜನಿಸಿದ ಶಿಶುಗಳು, ಹೃದಯ ಅಥವಾ ಶ್ವಾಸಾಂಗ ಅನಾರೋಗ್ಯ ಹೊಂದಿರುವ ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಶಿಶುಗಳಲ್ಲಿ ಬ್ರೊಂಕೊಲೈಟಿಸ್‌ ಉಲ್ಬಣಗೊಳ್ಳುವ ಅಪಾಯ ಇರುತ್ತದೆ.

ಲಕ್ಷಣಗಳನ್ನು ಗುರುತಿಸುವುದು

ರೋಗಲಕ್ಷಣಗಳನ್ನು ಗುರುತಿಸುವುದು ಶಿಶು ಈ ಕಾಯಿಲೆಯಿಂದ ಬಳಲದಂತೆ ಕಾಪಾಡಲು ಬಹಳ ಮುಖ್ಯವಾಗಿರುತ್ತದೆ. ಮೂಗಿನಿಂದ ಸಿಂಬಳ ಸುರಿಯುವುದು, ಕೆಮ್ಮು ಮತ್ತು ಜ್ವರ ಬ್ರೊಂಕೊಲೈಟಿಸ್‌ನ ಲಕ್ಷಣಗಳಲ್ಲಿ ಒಳಗೊಂಡಿವೆ. ಕಾಯಿಲೆ ಅಭಿವೃದ್ಧಿ ಹೊಂದುತ್ತಿದ್ದಂತೆ ಈ ಲಕ್ಷಣಗಳು ಉಲ್ಬಣಿಸುತ್ತವೆ ಮತ್ತು ಹೆತ್ತವರು ತತ್‌ ಕ್ಷಣ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.

ಬ್ರೊಂಕೊಲೈಟಿಸ್‌ ಉಲ್ಬಣವಾದಾಗ ಲಕ್ಷಣಗಳು ಈ ಕೆಳಕಂಡಂತೆ ಇರುತ್ತವೆ:

 ಉಬ್ಬಸ

 ವೇಗವಾದ ಉಸಿರಾಟ

 ಉಸಿರಾಡಲು ಮೂಗಿನ ಹೊಳ್ಳೆಗಳನ್ನು ಅಗಲಗೊಳಿಸಬೇಕಾಗುವುದು

 ಚರ್ಮ ನೀಲಿಗಟ್ಟುವುದು (ಸಯನೋಸಿಸ್‌)

 ಕಿರಿಕಿರಿಗೊಳ್ಳುವುದು ಮತ್ತು ಆಹಾರ ಸೇವಿಸದಿರುವುದು

ಬ್ರೊಂಕೊಲೈಟಿಸ್‌ ನಿರ್ವಹಣೆ ಹೇಗೆ?

ಬ್ರೊಂಕೊಲೈಟಿಸ್‌ಗೆ ನಿರ್ದಿಷ್ಟವಾದ ಆ್ಯಂಟಿವೈರಲ್‌ ಚಿಕಿತ್ಸೆ ಇಲ್ಲ; ಶಿಶುವಿನ ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದು ಮತ್ತು ಶಿಶುವನ್ನು ಆರಾಮದಾಯಕವಾಗಿ ಇರಿಸುವುದು ಚಿಕಿತ್ಸೆಯ ಮೂಲಕ ಇದರ ನಿರ್ವಹಣೆಯ ಗುರಿಯಾಗಿರುತ್ತದೆ. ಆ್ಯಂಟಿಪೈರೆಟಿಕ್‌ಗಳು, ಬ್ರೊಂಕೊಡಯಲೇಟರ್‌ಗಳು ಮತ್ತು ಆ್ಯಂಟಿಬಯೋಟಿಕ್‌ ಔಷಧಗಳನ್ನು ಅಗತ್ಯಬಿದ್ದಲ್ಲಿ ನೀಡಲಾಗುತ್ತದೆ. ಬ್ರೊಂಕೊಲೈಟಿಸ್‌ ಉಲ್ಬಣಗೊಂಡ, ಅದರಲ್ಲೂ ಶಿಶುವಿನ ರಕ್ತದಲ್ಲಿ ಆಮ್ಲಜನಕ ಮಟ್ಟ ಕುಸಿತವಾಗುವುದು, ಉಸಿರಾಡಲು ಕಷ್ಟ ಅಥವಾ ನಿರ್ಜಲೀಕರಣಗೊಂಡಂತಹ ತೀವ್ರತರಹದ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾತಿ ಅಗತ್ಯವಾಗುತ್ತದೆ.

ಬ್ರೊಂಕೊಲೈಟಿಸ್‌ಗೆ ತುತ್ತಾದ ಶಿಶುವಿನ ನಿರ್ವಹಣೆಯಲ್ಲಿ ಹೆತ್ತವರಿಗೆ ಕೆಲವು ಸಲಹೆಗಳು

 ಶಿಶು ಸಾಕಷ್ಟು ದ್ರವಾಹಾರ, ನೀರು ಸೇವಿಸುವಂತೆ ಪ್ರೋತ್ಸಾಹಿಸಿ

 ತಾಜಾ ಮತ್ತು ಆದ್ರì ಗಾಳಿ ಓಡಾಡುವಂತಹ ಸ್ಥಳದಲ್ಲಿ ಇರಿಸಿ

 ಉಸಿರಾಟಕ್ಕೆ ಸುಲಭವಾಗುವಂತೆ ಎದ್ದು ಕುಳಿತಿರಲಿ

ಬ್ರೊಂಕೊಲೈಟಿಸ್‌ ಉಂಟಾಗುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳಬಹುದು?

ಬ್ರೊಂಕೊಲೈಟಿಸ್‌ ಉಂಟಾಗದಂತೆ ತಡೆಯುವುದಕ್ಕೆ ಅದರ ಪ್ರಸಾರವನ್ನು ನಿರ್ಬಂಧಿಸುವುದು ಮುಖ್ಯವಾಗಿರುತ್ತದೆ. ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳುವುದು, ಮೇಲ್ಮೆ„ಗಳನ್ನು ಸೋಂಕು ನಿವಾರಣಗೊಳಿಸುವುದು, ರೋಗಪೀಡಿತರ ಜತೆಗೆ ಸಂಪರ್ಕ ಉಂಟಾಗದಂತೆ ನೋಡಿಕೊಳ್ಳುವುದು ಇತ್ಯಾದಿ ಕ್ರಮಗಳಿಂದ ಶಿಶುವನ್ನು ರಕ್ಷಿಸಬಹುದಾಗಿದೆ. ಹೆಚ್ಚು ಅಪಾಯವುಳ್ಳ ಶಿಶುಗಳಿಗೆ ಆರ್‌ಎಸ್‌ವಿ ಸಾಮಾನ್ಯವಾಗಿರುವ ಸಮಯದಲ್ಲಿ ಮಾಸಿಕ ಪಾಲಿವಿಝುಮಾಬ್‌ ಇಂಜೆಕ್ಷನ್‌ ನೀಡುವುದರಿಂದ ಬ್ರೊಂಕೊಲೈಟಿಸ್‌ ಉಲ್ಬಣಗೊಳ್ಳುವ ಅಪಾಯವನ್ನು ತಪ್ಪಿಸಬಹುದಾಗಿದೆ.

ಸಾರಾಂಶ

ಬ್ರೊಂಕೊಲೈಟಿಸ್‌ ಎಂಬುದು ಆರ್‌ಎಸ್‌ವಿಯಂತಹ ವೈರಾಣು ಸೋಂಕಿನಿಂದ ಉಂಟಾಗುವ ಸಾಮಾನ್ಯ ಅದರೆ ಗಂಭೀರ ಶ್ವಾಸಾಂಗ ಕಾಯಿಲೆಯಾಗಿದೆ. ಆದಷ್ಟು ಬೇಗನೆ ಇದನ್ನು ಪತ್ತೆಹಚ್ಚುವುದು ಮತ್ತು ಪೂರಕ ಆರೈಕೆಯ ಮೂಲಕ ಈ ರೋಗಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದಾಗಿದೆ. ತಮ್ಮ ಶಿಶುಗಳು ಸೋಂಕಿಗೆ ತುತ್ತಾಗದಂತೆ ಪ್ರತಿಬಂಧಕ ಕ್ರಮಗಳನ್ನು ಹೆತ್ತವರು ಕೈಗೊಳ್ಳಬೇಕು, ಮಗು ತೀವ್ರತರಹದ ರೋಗಲಕ್ಷಣಗಳನ್ನು ಹೊಂದಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.

-ಪ್ರಸಾಲಿ ಕುಲಾಲ್‌

ಅಸಿಸ್ಟೆಂಟ್‌ ಪ್ರೊಫೆಸರ್‌

-ಶಶಾಂಕ್‌ ಕುಲಾಲ್‌

ಅಸಿಸ್ಟೆಂಟ್‌ ಲೆಕ್ಚರರ್‌

ರೆಸ್ಪಿರೇಟರಿ ಥೆರಪಿ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ಸ್‌ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ

ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ

1-bjp

Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ

ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ

1-bjp

Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!

BUS driver

Mangaluru; ಸದ್ಯ ಖಾಸಗಿ ಬಸ್‌ ಟಿಕೆಟ್‌ ದರ ಏರಿಕೆ ಇಲ್ಲ

court

Kasaragod:ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ

UTK

Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.