ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ
ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಬೃಹತ್ ಹುಂಡಿ ಪೆಟ್ಟಿಗೆಗಳನ್ನು ಇರಿಸಿದ ಅಧಿಕಾರಿಗಳು
Team Udayavani, Dec 29, 2024, 5:15 PM IST
ಕೊಟ್ಟೂರು: ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸಮರ್ಪಕ ದೇವರ ದರ್ಶನ, ಇತರೆ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹಿಸಬೇಕೆಂಬ ಉದ್ದೇಶ ಹೊಂದಿರುವ ಧಾರ್ಮಿಕ ಇಲಾಖೆ ಅಧಿಕಾರಿಗಳು, ದೇವಸ್ಥಾನದಲ್ಲಿ ತುಂಬೆಲ್ಲಾ ಹುಂಡಿಗಳನ್ನೇ ಇರಿಸಿ ಭಕ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ದೇವಸ್ಥಾನದಲ್ಲಿ ಬಹಳ ವರ್ಷಗಳಿಂದಲೂ ಆರು ಹುಂಡಿಗಳಿದ್ದರೂ, ಭಕ್ತರಿಗೆ ತೊಂದರೆಯಾಗುವ ರೀತಿಯಲ್ಲಿ ದೊಡ್ಡದಾದ ಮತ್ತೆ ಮೂರು ಹುಂಡಿ ಪೆಟ್ಟಿಗೆಗಳನ್ನು ಇರಿಸಿ ಭಕ್ತರಿಂದ ಹಣ ಸಂಗ್ರಹಿಸುವುದೇ ನಮ್ಮ ಗುರಿ ಎಂದು ಬಿಂಬಿಸಿಕೊಂಡಿದ್ದಾರೆ.
ಕೊಟ್ಟೂರೇಶ್ವರ ದೇವಸ್ಥಾನದ ಬಾಗಿಲಿನಿಂದ ದೇವರ ಸನ್ನಿಧಿಗೆ ಹೋಗುವ ಪುರುಷರ ಸಾಲಿನಲ್ಲಿ ಮೂರು, ಮಹಿಳೆಯರ ಸಾಲಿನಲ್ಲಿ ಎರಡು ಮತ್ತು ದೇವಸ್ಥಾನದ ಹಿಂಬದಿಯಲ್ಲಿ ಒಂದು ಹುಂಡಿಗಳು ಬಹಳ ವರ್ಷಗಳಿಂದ ಇವೆ. ಈ ಹುಂಡಿಗಳು ಭಕ್ತರಿಗೆ ಕೈಗೆಟುಕುವಂತೆ ಇವೆ. ಆದ್ದಾಗ್ಯೂ ಭಕ್ತರ ಮುಂದೆಯೇ ಹುಂಡಿ ಇರುಬೇಕು ಎಂಬ ಕುಂಟು ನೆಪದಿಂದ ಅಧಿಕಾರಿಗಳು 8 ಅಡಿ ಉದ್ದ, 3 ಅಡಿ ಅಗಲದ ಮೂರು ದೊಡ್ಡ ಹುಂಡಿ ಪೆಟ್ಟಿಗೆಗಳನ್ನು ದೇವಸ್ಥಾನದ ಮಧ್ಯದಲ್ಲಿ, ಪುರಷರ, ಮಹಿಳೆಯರು ನಿಲ್ಲುವ ಸ್ಥಳದಲ್ಲಿ ಇರಿಸಿ, ಇರುವ ಅಲ್ಪ ಜಾಗವನ್ನು ಆಕ್ರಮಿಸಿ ಭಕ್ತರಿಗೆ ನಿಲ್ಲಲೂ ತೊಂದರೆ ಮಾಡಿದ್ದಾರೆ.
ಇಂತಹ ಅಗಲವಾದ ಬಾಕ್ಸ್ ಗಳನ್ನು ಇಟ್ಟಿರುವುದರಿಂದ ಹೆಜ್ಜೆ ಹೆಜ್ಜೆಗೂ ಹಾಗೂ ಇಡೀ ದೇವಸ್ಥಾನದ ತುಂಬೆಲ್ಲಾ ಹುಂಡಿ ಪೆಟ್ಟಿಗೆಗಳೇ ಕಾಣುತ್ತಿವೆ. ಮೊದಲೇ ಚಿಕ್ಕ ಸ್ಥಳಾವಕಾಶವಿರುವ ದೇವಸ್ಥಾನದಲ್ಲಿ ಭಕ್ತರು ಹೋಗಿ ಬರಲು, ನಿಲ್ಲಲು, ಬಾಗಿ ನಮಸ್ಕಾರ ಮಾಡಲೂ ಅವಕಾಶ ಇಲ್ಲದಂತೆ ಅಧಿಕಾರಿಗಳು ಮಾಡಿದ್ದಾರೆ.
ದೇವರ ಸನ್ನಿಧಿ ಮುಂದಿನ ಮೆಟ್ಟಿಲು ಮುಂದೆ, ಮತ್ತು ಎಡ ಮತ್ತು ಬಲ ಬದಿ ತಲಾ ಒಂದು ಅಗಲದ ಬೃಹತ್ ಹುಂಡಿಗಳನ್ನು ಇರಿಸಿರುವುದರಿಂದ ಅಲ್ಪ ಜಾಗವನ್ನು ಹುಂಡಿಗಳೇ ಆಕ್ರಮಿಸಿಕೊಂಡಿವೆ. ಮೊದಲು ಇರುವ ಹುಂಡಿಗಳಲ್ಲಿ ಭಕ್ತರು ಕಾಣಿಕೆ ಹಾಕಲು ಯಾವುದೇ ತೊಂದರೆಯೂ ಇಲ್ಲ. ಇನ್ನಷ್ಟು ಹುಂಡಿಗಳನ್ನು ಇರಿಸುವಂತೆ ಯಾವುದೇ ಭಕ್ತರು ಕೋರಿಕೊಂಡಿಲ್ಲ. ಆದರೂ ಲಕ್ಷಾಂತರ ರೂ.ಗಳನ್ನು ದೇವಸ್ಥಾನದ ದುಡ್ಡಿನಲ್ಲಿ ಖರ್ಚು ಮಾಡಿ ಮತ್ತೆ ಮೂರು ಹುಂಡಿ ಪೆಟ್ಟಿಗೆಗಳನ್ನು ಇರಿಸುವ ಅಧಿಕಾರಿಗಳ ನಡೆ ಕುರಿತು ಭಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ದೊಡ್ಡ ಹುಂಡಿಗಳನ್ನು ಇರಿಸಿರುವ ಕುರಿತು ಪಟ್ಟಣದ ಅನೇಕರು ಮುಖಂಡರು, ಸಾರ್ವಜನಿಕರು ಅಧಿಕಾರಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನಿಸಿದಾಗ, ತಮ್ಮದೇ ಮೊಂಡು ವಾದವನ್ನು ಅಧಿಕಾರಿಗಳು ಇರಿಸಿದ್ದಾರೆ. ಭಕ್ತರಿಗೆ ಅನುಕೂಲವಾಗುವಂತೆ ಹುಂಡಿ ಇರಿಸಿದ್ದೇವೆ. ಈಗ ಇಟ್ಟಿರುವ ಹುಂಡಿಗಳಿಂದ ಭಕ್ತರಿಗೆ ತೊಂದರೆಯಿಲ್ಲ. ತೊಂದರೆ ಎಂದು ಭಕ್ತರು ಹೇಳಿದರೆ ತೆಗೆಯುತ್ತೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ದೊಡ್ಡ ದೇವಸ್ಥಾನಗಳಲ್ಲಿ ಇಂತಹ ಹುಂಡಿಗಳಿವೆ ಎಂತಲೂ ಕೆಟ್ಟ ಸಮರ್ಥನೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಆಕ್ಷೇಪ ವ್ಯಕ್ತಪಡಿಸಿದರಿಗೆ ನೀವು ಅರ್ಚಕರ ಪರವಾಗಿ ಮಾತನಾಡುತ್ತಿದ್ದೀರಿ, ಅವರು ನಿಯಮ ಮೀರಿ ಹುಂಡಿ ಇರಿಸಿಕೊಂಡಿದ್ದಾರೆ. ಅದರ ವಿರುದ್ಧ ಏಕೆ ಮಾತಾಡುತ್ತಿಲ್ಲ ಎಂದು ಮರು ಪ್ರಶ್ನೆ ಹಾಕಿದ್ದಾರೆ. 3 ದೊಡ್ಡ ಹುಂಡಿಗಳನ್ನು ಮಾಡಿಸಲು ಎಷ್ಟು ಹಣ ಖರ್ಚಾಗಿದೆ ಎಂಬುದಕ್ಕೆ ಧಾರ್ಮಿಕ ಇಲಾಖೆ ಎಸಿಯವರಿಗೆ ಮಾಹಿತಿಯೇ ಇಲ್ಲದಿರುವುದು ಅನುಮಾನ ಮೂಡಿಸಿದೆ.
ದೇವಸ್ಥಾನದ ಅಧಿಕಾರಿಗಳ ಕ್ರಮ ಕುರಿತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಮಾಧ್ಯಮದವರು ತಂದಾಗ, ಸದ್ಯ ಇರುವ ಹುಂಡಿಗಳ ಹೊರತುಪಡಿಸಿ ಹೊಸದಾಗಿ ಹುಂಡಿ ಇರಿಸಲು ನಾವು ಅನುಮತಿ ನೀಡಿಲ್ಲ. ಭಕ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ವರ್ತಿಸಬೇಕು. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಹೊಸ ಹುಂಡಿಗಳನ್ನು ತೆರವು ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
-ರಾಮಲಿಂಗ ರೆಡ್ಡಿ ಮುಜರಾಯಿ ಸಚಿವ..
ಹಾಲಿ ಇರುವ ಹುಂಡಿಗಳ ಜೊತೆಗೆ ಭಕ್ತರಿಗೆ ಅನುಕೂಲಕ್ಕೆ ಹೊಸ ಹುಂಡಿಗಳನ್ನು ಇಒ ಇರಿಸಿದ್ದಾರೆ. ಇದರಿಂದ ಯಾರಿಗೂ ತೊಂದರೆಯಿಲ್ಲ. ಹಣ ಸಂಗ್ರಹ ಮಾಡಬೇಕು. ಭಕ್ತರಿಗೆ ತೊಂದರೆ ಎಂದು ಮನವಿ ಬಂದರೆ ತೆಗೆಯುತ್ತೇವೆ. ಮೂರು ಹುಂಡಿಗಳನ್ನು ಮಾಡಿಸಲು ಎಷ್ಟು ಹಣ ಖರ್ಚಾಗಿದೆ ಎಂಬ ಮಾಹಿತಿ ಇಲ್ಲ.
-ಗಂಗಾಧರಪ್ಪ, ಎಸಿ, ಧಾರ್ಮಿಕ ಇಲಾಖೆ, ವಿಜಯನಗರ ಬಳ್ಳಾರಿ.
ದೇವಸ್ಥಾನದಲ್ಲಿ ಸ್ಥಳಾವಕಾಶದ ಕೊರತೆಯಿದೆ. ಹಾಲಿ ಆರು ಹುಂಡಿಗಳಿದ್ದರೂ, ಮತ್ತೆ 3 ದೊಡ್ಡ ಬಾಕ್ಸ್ ಗಳನ್ನು ಮಾಡುವ ಅವಶ್ಯತೆ ಇರಲಿಲ್ಲ. ಧರ್ಮಕರ್ತರಾದ ನಮಗೆ ಇದರ ಮಾಹಿತಿಯನ್ನೂ ಇಒ ನೀಡಿಲ್ಲ.
-ಎಎಚ್‌ಎಂ ಶೇಖರಯ್ಯ, ಧರ್ಮಕರ್ತ, ಶ್ರೀ ಕೊಟ್ಟೂರೇಶ್ವರ ದೇವಸ್ಥಾನ ಕೊಟ್ಟೂರು.
ದೇವಸ್ಥಾನದಕ್ಕೆ ಬರುವ ಭಕ್ತರಿಗೆ ಸ್ವಾಮಿ ದರ್ಶನಕ್ಕೆ, ಇತರೆ ಸೌಲಭ್ಯಕ್ಕೆ ಆದ್ಯತೆ ನೀಡಬೇಕಾದ ಅಧಿಕಾರಿಗಳು, ದೇವಸ್ಥಾನದ ತುಂಬೆಲ್ಲಾ ಹುಂಡಿಗಳನ್ನು ಇರಿಸಿ, ವಾಣಿಜ್ಯೀಕರಣ ಮಾಡ ಹೊರಟಿರುವುದು ಖಂಡನೀಯ. ಬಹಳ ವರ್ಷಗಳಿಂದ ಇರುವ ಆರು ಹುಂಡಿಗಳ ಹೊರತು ಮತ್ತೆ ಹೆಚ್ಚುವರಿ ಹುಂಡಿ ಇರಿಸದಂತೆ ಅಧಿಕಾರಿಗಳಿಗೆ ಹೇಳಿದರೂ ತಮ್ಮದೇ ವಾದ ಮಾಡಿದ್ದಾರೆ.
-ಎಂಎಅಜೆ ಹರ್ಷವರ್ಧನ, ಜಿಪಂ ಮಾಜಿ ಸದಸ್ಯ, ಕೊಟ್ಟೂರು.
-ಪಿ.ಎಚ್.ದೊಡ್ಡರಾಮಣ್ಣ, ಜಿಪಂ ಮಾಜಿ ಉಪಾಧ್ಯಕ್ಷ, ಕೊಟ್ಟೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.