PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
ಮನ್ ಕಿ ಬಾತ್ ನಲ್ಲಿ ನಾಲ್ವರು ದಿಗ್ಗಜ ನಟರನ್ನು ಸ್ಮರಿಸಿದ ಪ್ರಧಾನಿ
Team Udayavani, Dec 29, 2024, 6:43 PM IST
ನವದೆಹಲಿ:‘ಮಹಾ ಕುಂಭ’ವನ್ನು “ಏಕತೆಯ ಮಹಾಕುಂಭ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರವಿವಾರ(ಡಿ29) ಬಣ್ಣಿಸಿದ್ದಾರೆ.
ಮಾಸಿಕ ಮನ್ ಕಿ ಬಾತ್ ಪ್ರಸಾರದಲ್ಲಿ ಮಾತನಾಡಿದ ಮೋದಿ, ”ಸಮಾಜದಿಂದ ದ್ವೇಷ ಮತ್ತು ವಿಭಜನೆಯನ್ನು ಹೊರಹಾಕುವ ಸಂಕಲ್ಪದೊಂದಿಗೆ ಭವ್ಯವಾದ ಧಾರ್ಮಿಕ ಸಭೆಗೆ ತೆರಳಲು ಜನರನ್ನು ವಿನಂತಿಸಿಕೊಂಡಿದ್ದಾರೆ.
ಮಹಾ ಕುಂಭದ ಸಂದೇಶವು ಇಡೀ ದೇಶವು ಒಗ್ಗೂಡಬೇಕು. ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಸಭೆಗೆ ವಿವಿಧತೆಯಲ್ಲಿ ಏಕತೆಯಂತಹ ದೃಶ್ಯಕ್ಕೆ ಬೇರೆ ಉದಾಹರಣೆ ಇಲ್ಲ ಎಂದರು.
ಸಂವಿಧಾನ ನಮ್ಮ ಮಾರ್ಗದರ್ಶಕ ಬೆಳಕು
”ಮುಂದಿನ ಗಣರಾಜ್ಯೋತ್ಸವವು ಸಂವಿಧಾನದ ಅನುಷ್ಠಾನದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ. ಇದು ದೇಶವಾಸಿಗಳಿಗೆ ಹೆಮ್ಮೆಯ ವಿಷಯ, ಸಂವಿಧಾನವು ಪ್ರತಿಯೊಂದು ಕಾಲಘಟ್ಟದಲ್ಲೂ ನಮ್ಮ ಮಾರ್ಗದರ್ಶಕ ಬೆಳಕು, ಸಂವಿಧಾನದ ಕಾರಣದಿಂದಾಗಿ ನಾನು ನನ್ನ ಜೀವನದಲ್ಲಿ ಈ ಸ್ಥಾನವನ್ನು ತಲುಪಿದ್ದೇನೆ. constitution75.com ಎಂಬ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ ” ಎಂದರು.
ನಾಲ್ವರು ಐಕಾನ್‌ಗಳ ಸ್ಮರಣೆ
ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಭಾರತೀಯ ಚಿತ್ರರಂಗದ ನಾಲ್ವರು ಐಕಾನ್‌ಗಳಾದ ರಾಜ್ ಕಪೂರ್, ಮೊಹಮ್ಮದ್ ರಫಿ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ತಪನ್ ಸಿನ್ಹಾ ಅವರನ್ನು ಪ್ರಧಾನಿ ಮೋದಿ ಸ್ಮರಿಸಿದರು.
ರಾಜ್ ಕಪೂರ್ ಅವರು ತಮ್ಮ ಚಲನಚಿತ್ರಗಳ ಮೂಲಕ ಭಾರತದ ಶಕ್ತಿಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದರು, ಮೊಹಮ್ಮದ್ ರಫಿ ಅವರ ಮಾಂತ್ರಿಕ ಧ್ವನಿ ಪ್ರತಿಯೊಬ್ಬ ಕೇಳುಗರ ಹೃದಯವನ್ನು ಮುಟ್ಟುತ್ತದೆ ಎಂದು ಪ್ರಧಾನಿ ಹೇಳಿದರು.
ಎಎನ್‌ಆರ್ ತೆಲುಗು ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು, ಅವರ ಚಲನಚಿತ್ರಗಳು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಸುಂದರವಾಗಿ ಚಿತ್ರಿಸಿವೆ. ತಪನ್ ಸಿನ್ಹಾ ಅವರ ಚಿತ್ರಗಳು ಸಮಾಜಕ್ಕೆ ಹೊಸ ದೃಷ್ಟಿಕೋನವನ್ನು ನೀಡಿತು. ಅವರ ಚಲನಚಿತ್ರಗಳು ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ನೀಡುತ್ತವೆ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.