Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Team Udayavani, Dec 29, 2024, 11:38 PM IST
ಪಡುಬಿದ್ರಿ: ಮೊಬೈಲ್ ತೆಗೆಸಿಕೊಡುವ ವಿಚಾರಕ್ಕೆ ಸಂಬಂಧಿಸಿ ತಾಯಿಯೊಂದಿಗೆ ಜಗಳ ಮಾಡಿದ ಮಗ ಹೆದ್ದಾರಿಗೋಡಿದ್ದು, ಈ ವೇಳೆ ಆತನನಿಗೆ ಲಾರಿ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಡಿ. 28ರಂದು ಪಡುಬಿದ್ರಿ ಜಂಕ್ಷನ್‌ನಲ್ಲಿ ಸಂಭವಿಸಿದೆ.
ಮುಂಬಯಿನ ಬೋರಿವಿಲಿಯ ಬೇಲಾಡಿಯ ತಾಯಿ ಮನೆಗೆ ಬಂದಿದ್ದ ಕುಶಲಾ ಹಾಗೂ ಅವರ ಪುತ್ರ ಕೌಶಿಕ್ (17) ಶನಿವಾರ ಪಡುಬಿದ್ರಿಗೆ ಬಂದಿದ್ದರು. ಪಡುಬಿದ್ರಿಯ ಮುಖ್ಯ ಪೇಟೆಯ ಜಂಕ್ಷನ್‌ನ ನವರಂಗ್ ರೆಸ್ಟೋರೆಂಟಿನ ಬಳಿ ಮೊಬೈಲ್ ತೆಗೆಸಿಕೊಡುವ ವಿಚಾರದಲ್ಲಿ ತಾಯಿ-ಮಗನ ನಡುವೆ ಮಾತಿಗೆ ಮಾತು ಬೆಳೆದಿದೆ.
ಮೊಬೈಲ್ ತೆಗೆಸಿಕೊಡದ ಕಾರಣ ತಾನೇ ಸಾಯುವುದಾಗಿ ಹೇಳಿ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯೆ ಓಡಿ ಬಂದಾಗ ಲಾರಿಯೊಂದು ಢಿಕ್ಕಿಯಾಗಿ ಗಂಭೀರ ಗಾಯಗಳೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಾದ ವಿಚಿತ್ರ ಘಟನೆಯೊಂದು ವರದಿಯಾಗಿದೆ.
ಪಡುಬಿದ್ರಿಗೆ ಶನಿವಾರ ತಾಯಿ ಮಗ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಈಗ ಕನ್ನಡಕ ಸರಿ ಮಾಡಿಸೋಣ. ಮೊಬೈಲ್ ಬೇಡ ಎಂದು ತಾಯಿ ಕುಶಲಾ ಅವರು ಹೇಳಿದ್ದರು. ಆ ಕೂಡಲೇ ನವರಂಗ್ ಬಾರ್ ಸಮೀಪದಿಂದ ನೇರವಾಗಿ ಕೌಶಿಕ್ ಓಡಿ ಹೆದ್ದಾರಿ ಮಧ್ಯೆ ನಿಂತಾಗ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಲಾರಿ ಢಿಕ್ಕಿಯಾಗಿದೆ. ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗ್ರತೆಯ ಚಾಲನೆಯ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಕೌಶಿಕ್ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Bellary; ಪ್ರಿಯಾಂಕ್ ಖರ್ಗೆ ರಾಜೀನಾಮೆ ಖಂಡಿಸಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.