ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ತಾಳೆಯಾಗದ ಒಎಂಆರ್ ಶೀಟ್-ಪ್ರಶ್ನೆ ಪತ್ರಿಕೆ ಸರಣಿ, ಪರೀಕ್ಷೆ ಬರೆಯದೇ ಪ್ರತಿಭಟಿಸಿದ ಅಭ್ಯರ್ಥಿಗಳು

Team Udayavani, Dec 29, 2024, 10:37 PM IST

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗವು ರವಿವಾರ ನಡೆಸಿದ ಕೆಎಎಸ್ ಶ್ರೇಣಿಯ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಮತ್ತೊಮ್ಮೆ ದೊಡ್ಡ ಎಡವಟ್ಟಾಗಿದೆ.

ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಒಎಂಆರ್ ಶೀಟ್ ಸಂಖ್ಯೆ-ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಓಎಂಆರ್ ಶೀಟ್-ಪ್ರಶ್ನೆ ಪತ್ರಿಕೆ ನಡುವೆ ತಾಳೆಯಾಗದೆ ಪರೀಕ್ಷಾರ್ಥಿಗಳು ಗೊಂದಲಕ್ಕೆ ಒಳಗಾದರು. ಇದನ್ನು ಪ್ರತಿಭಟಿಸಿ ಕೆಲ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಅಲ್ಲದೇ, ಮರು ಪರೀಕ್ಷೆಯಲ್ಲೂ ಇಂತಹ ಲೋಪಗಳು ಕಾಣಿಸಿಕೊಂಡ ಪರಿಣಾಮ ಇಡೀ ವ್ಯವಸ್ಥೆ ಬಗ್ಗೆಯೇ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದರು.

ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗಾಗಿ ಜಿಲ್ಲೆಯಲ್ಲಿ 32 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟಾರೆ 12,741 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಬಳ್ಳಾರಿ, ವಿಜಯನಗರ, ದಾವಣಗೆರೆ ಸೇರಿದಂತೆ ದೂರದ ಜಿಲ್ಲೆಗಳಿಂದಲೂ ಪರೀಕ್ಷಾರ್ಥಿಗಳು ಬಂದಿದ್ದರು. ಆದರೆ, ಬೆಳಗಿನ ಅವಧಿಯ ಪರೀಕ್ಷೆಯಲ್ಲೇ ಲೋಪಗಳು ಕಂಡುಬಂದಿವೆ.

ಒಎಂಆರ್ ಶೀಟ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ಅದಲು-ಬದಲು ಮೊದಲನೆಯ ಲೋಪವಾದರೆ, ಎರಡನೆಯದಾಗಿ ಓಎಂಆರ್ ಶೀಟ್ ಮತ್ತು ಪ್ರಶ್ನೆ ಪತ್ರಿಕೆ ಮಧ್ಯೆ ತಾಳೆಯಾಗಿಲ್ಲ. ಎಂದರೆ “ಸಿ” ಸರಣಿ ಓಎಂಆರ್ ಶೀಟ್ ಕೊಟ್ಟರೆ, ಪ್ರಶ್ನೆ ಪತ್ರಿಕೆಯೂ “ಸಿ” ಸರಣಿಯಾಗಿರಬೇಕಿತ್ತು. ಆದರೆ, ಬೇರೆ-ಬೇರೆ ಸರಣಿಯ ಪ್ರಶ್ನೆ ಪತ್ರಿಕೆ, ಓಎಂಆರ್ ಶೀಟ್ ಕೊಡಲಾಗಿತ್ತು ಎಂದು ಪರೀಕ್ಷಾರ್ಥಿಗಳು ದೂರಿದರು.

ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಎರಡು ಪರೀಕ್ಷಾ ಕೇಂದ್ರಗಳು, ವಿಕಾಸ ಪ್ರೌಢ ಶಾಲೆ, ಮರಾಠಿ ವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಈ ಎಡವಟ್ಟು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿದ ಕೂಡಲೇ ಕೆಪಿಎಸ್‌ಸಿ ಸದಸ್ಯ ಎಂ.ಬಿ.ಹೆಗ್ಗಣ್ಣನವರ, ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಮತ್ತು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರೀಕ್ಷಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಕೆಪಿಎಸ್‌ಸಿ ಅಧಿಕಾರಿಗಳೊಂದಿಗೆ ಮಾತನಾಡಿದರು. ಬಳಿಕ ಅಭ್ಯರ್ಥಿಗಳಿಗೆ ತಾವೇ ತಮ್ಮ ನೋಂದಣಿ ಸಂಖ್ಯೆ, ಓಎಂಆರ್ ಶೀಟ್ ಸಂಖ್ಯೆ ಮತ್ತು ಸರಣಿಯನ್ನು ಬರೆಯುವಂತೆ ತಿಳಿಸಿದರು. ಅಲ್ಲದೇ, ಈ ಗೊಂದಲದಿಂದ ಪರೀಕ್ಷೆಗೆ ವಿಳಂಬವಾದ ಸಮಯ ಸರಿದೂಗಿಸಲು ಹೆಚ್ಚುವರಿ ಸಮಯ ಕೊಡುವುದಾಗಿಯೂ ಭರವಸೆ ನೀಡಿದರು.

ಈ ವೇಳೆ, ಕೆಲ ಪರೀಕ್ಷಾರ್ಥಿಗಳು ನಮ್ಮ ಕೈಯಿಂದಲೇ ನೋಂದಣಿ ಸಂಖ್ಯೆ, ಓಎಂಆರ್ ಶೀಟ್ ಸಂಖ್ಯೆ ನಮೂದಿಸಿದರೆ, ಇದಕ್ಕೆ ಯಾವ ಮಾನ್ಯತೆ ಇರುತ್ತದೆ?. ಅದನ್ನು ಹೇಗೆ ಪರಿಗಣಿಸುತ್ತಾರೆ ಎಂದು ಪ್ರಶ್ನಿಸಿ ಪರೀಕ್ಷೆಯನ್ನು ಬರೆಯಲಿಲ್ಲ. ಜತೆಗೆ ಇಂತಹ ಗೊಂದಲದ ಪರೀಕ್ಷೆಗೆ ಕುಳಿತರೆ, ಪರೀಕ್ಷೆಯ ಒಂದು ಅವಕಾಶವೂ ತಪ್ಪಿದಂತಾಗುತ್ತದೆ ಎಂದು ಪರೀಕ್ಷೆ ಬರೆಯದೆ ಕೊಠಡಿಯಿಂದ ಬರಬೇಕಾಯಿತು ಎಂದು ಅಭ್ಯರ್ಥಿಗಳು ತಮ್ಮ ಆಳಲು ತೋಡಿಕೊಂಡರು. ಇನ್ನು, ಪರೀಕ್ಷೆ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಪರೀಕ್ಷೆಗೆ 6,677 ಅಭ್ಯರ್ಥಿಗಳು ಗೈರು:
ಜಿಲ್ಲೆಯಲ್ಲಿ 32 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 12,741 ಅಭ್ಯರ್ಥಿಗಳು ಪರೀಕ್ಷೆಯ ಬರಬೇಕಾಗಿತ್ತು. ಆದರೆ, ಮೊದಲ ಅವಧಿ ಪರೀಕ್ಷೆಗೆ 6,064 ಅಭ್ಯರ್ಥಿಗಳು ಹಾಜರಾಗಿ, 6,677 ಅಭ್ಯರ್ಥಿಗಳು ಗೈರಾಗಿದ್ದರು. ಎರಡನೇ ಅವಧಿಯ ಪರೀಕ್ಷೆಗೆ 6,078 ಅಭ್ಯರ್ಥಿಗಳು ಕುಳಿತಿದ್ದರು. ಉಳಿದ 6,663 ಪರೀಕ್ಷಾರ್ಥಿಗಳು ಗೈರಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿರುವುದು ಸ್ಪಷ್ಟವಾಗಿದೆ. ಹೆಚ್ಚಿನ ಗೊಂದಲ ಸೃಷ್ಟಿಯಾದ ವಿಕಾಸ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 240 ಅಭ್ಯರ್ಥಿಗಳ ಪೈಕಿ 48 ಅಭ್ಯರ್ಥಿಗಳು ಮಾತ್ರವೇ ಪರೀಕ್ಷೆ ಬರೆದಿದ್ದಾರೆ.

ಮಧ್ಯಮ ವರ್ಗ ಜನರಿಗೆ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಆಸೆ ಇರುತ್ತದೆ. ಆದರೆ, ಪತ್ರಿ ಪರೀಕ್ಷೆಗಳಲ್ಲೂ ಇಂತಹ ಗೊಂದಲಗಳನ್ನು ಸೃಷ್ಟಿಸಿ ನಮ್ಮ ಆತ್ಮವಿಶ್ವಾಸವನ್ನೇ ಕುಗ್ಗುವಂತೆ ಮಾಡಲಾಗುತ್ತದೆ. ಈ ಹಿಂದೆ ರಾಯಚೂರು ಕೇಂದ್ರದಲ್ಲಿ ಪರೀಕ್ಷೆ ಬರೆದಾಗಲೂ ಲೋಪಗಳು ಆಗಿದ್ದವು. ಈಗ ಮರು ಪರೀಕ್ಷೆಯಲ್ಲೂ ಗೊಂದಲ ಸೃಷ್ಟಿ ಮಾಡಿ ಪರೀಕ್ಷೆಯಿಂದ ದೂರ ಉಳಿಯುಂತೆ ಮಾಡಲಾಗಿದೆ ಎಂದು ಹರಪನಹಳ್ಳಿ ಮೂಲದ ಪರೀಕ್ಷಾರ್ಥಿ ನೊಂದುಕೊಂಡರು.

ಕೆಪಿಎಸ್‌ಸಿ ಪರೀಕ್ಷೆಯ 4 ಕೇಂದ್ರಗಳಲ್ಲಿ ಗೊಂದಲ ಉಂಟಾಗಿದೆ. ಒಎಂಆರ್ ಶೀಟ್ ಸಂಖ್ಯೆ, ಅಭ್ಯರ್ಥಿಗಳ ನೋಂದಣಿ ಸಂಖ್ಯೆ ವ್ಯತ್ಯಾಸ ಕಂಡುಬಂದಿದೆ. ಕೂಡಲೇ ಕೆಪಿಎಸ್‌ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ನೋಂದಣಿ ಸಂಖ್ಯೆ ನಮೂದಿಸುವಂತೆ ಅಭ್ಯರ್ಥಿಗಳಿಗೆ ನಿರ್ದೇಶನ ನೀಡಲಾಗಿತ್ತು. ಇದನ್ನು ವಿಶೇಷ ಪ್ರಕರಣ ಎಂದು ಕೆಪಿಎಸ್‌ಸಿ ಪರಿಗಣಿಸಲಿದೆ ಎಂದು ಜಿಪಂ ಸಿಇಒ ರಿಷಿ ಆನಂದ ತಿಳಿಸಿದರು.

ಟಾಪ್ ನ್ಯೂಸ್

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್‌

Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್‌

8-social-media

Social Media A/c: ಮಕ್ಕಳ ಸೋಷಿಯಲ್‌ ಮೀಡಿಯಾ ಖಾತೆಗೆ ಹೆತ್ತವರ ಒಪ್ಪಿಗೆ ಕಡ್ಡಾಯ?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

CM DCM

Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್‌ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?

ct rav

CIDಗೆ ಹೆಬ್ಬಾಳ್ಕರ್‌ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?

vidhana-soudha

Congress; ಪರಿಷತ್‌ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ

Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್‌ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ

10-madikeri

Madikeri: ಮೂರು ಕಳ್ಳತನ ಪ್ರಕರಣದ ಆರೋಪಿ ಬಂಧನ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

9-chamarajanagara

Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.