World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
2 ಬಾರಿ ಪ್ರಶಸ್ತಿ ಗೆದ್ದ 2ನೇ ಸಾಧಕಿ
Team Udayavani, Dec 29, 2024, 11:31 PM IST
ನ್ಯೂಯಾರ್ಕ್: ಭಾರತದ 2024ರ ಚೆಸ್ ಸಾಧನೆಯ ಕಿರೀಟಕ್ಕೆ ಜಿಎಂ ಕೊನೆರು ಹಂಪಿ ಮತ್ತೂಂದು ಗರಿ ತೊಡಿಸಿದ್ದಾರೆ. ಅವರು ಮಹಿಳೆಯರ ವಿಶ್ವ ರ್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಅಂತಿಮ ಸುತ್ತಿನಲ್ಲಿ ಇಂಡೋನೇಷ್ಯಾದ ಇರೆನ್ ಸಿಕಂದರ್ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿದರು.
ಆಂಧ್ರ ಪ್ರದೇಶದ, 37 ವರ್ಷದ ಕೊನೆರು ಹಂಪಿ ವಿಶ್ವ ರ್ಯಾಪಿಡ್ ಚೆಸ್ ಪ್ರಶಸ್ತಿಯನ್ನು 2 ಸಲ ಗೆದ್ದ ವಿಶ್ವದ ಕೇವಲ 2ನೇ ಆಟಗಾರ್ತಿ. ಇದಕ್ಕೂ ಮುನ್ನ ಅವರು 2019ರಲ್ಲಿ ಚಾಂಪಿಯನ್ ಆಗಿದ್ದರು. ಚೀನದ ಜು ವೆಂಜುನ್ 2017, 2018ರಲ್ಲಿ ಈ ಪ್ರಶಸ್ತಿ ಜಯಿಸಿದ್ದರು.
ಸೋಲಿನೊಂದಿಗೆ ಆರಂಭ
ಕೊನೆರು ಹಂಪಿ ಸೋಲಿನೊಂದಿಗೆ ಈ ಕೂಟವನ್ನು ಆರಂಭಿಸಿದ್ದರು. ಆದರೆ 11ನೇ ಮತ್ತು ಕೊನೆಯ ಸುತ್ತಿಲ್ಲಿ ಕೊನೆರು ಒಬ್ಬರೇ ಗೆದ್ದಿದ್ದರಿಂದ ಅವರು ಗರಿಷ್ಠ 8.5 ಅಂಕ ಗಳಿಸಿ ವಿಜೇತರೆನಿಸಿದರು. ಭಾರತದವರೇ ಆದ ದ್ರೋಣವಲ್ಲಿ ಹರಿಕಾ ಸೇರಿ 6 ಮಂದಿ 8 ಅಂಕ ಗಳಿಸಿದ್ದರು. ದ್ವಿತೀಯ ಮತ್ತು ತೃತೀಯ ಸ್ಥಾನಕ್ಕಾಗಿ ಟೈಬ್ರೇಕರ್ ನಡೆಯಿತು. ಇಲ್ಲಿ ಜು ವೆಂಜುನ್ ದ್ವಿತೀಯ, ರಷ್ಯಾದ ಕ್ಯಾಥರಿನಾ ಲ್ಯಾಗ್ನೊ ತೃತೀಯ ಸ್ಥಾನಿಯಾದರು.
ಅರ್ಜುನ್ ಜಂಟಿ 4ನೇ ಸ್ಥಾನ
ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ರಷ್ಯಾದ 18 ವರ್ಷದ ವೊಲೊಡರ್ ಮುರ್ಜಿನ್ (10 ಅಂಕ) ಬಂಗಾರ ಗೆದ್ದರು. ಇದೇ ದೇಶದ ಅಲೆಕ್ಸಾಂಡರ್ ಗ್ರಿಸುcಕ್ (9.5) ದ್ವಿತೀಯ ಮತ್ತು ಇಯಾನ್ ನೆಪೋಮ್ನಿಯಾಚಿ (9.5) ತೃತೀಯ ಸ್ಥಾನಿಯಾದರು. 9 ಅಂಕ ಗಳಿಸಿದ ಭಾರತದ ಅರ್ಜುನ್ ಎರಿಗಾಯ್ಸಿ ಮತ್ತು ಇತರ 5 ಮಂದಿ 4ನೇ ಸ್ಥಾನ ಹಂಚಿಕೊಂಡರು. ಪ್ರಜ್ಞಾನಂದ 8.5 ಅಂಕ ಗಳಿಸಿ ಐದರಾಚೆಯ ಸ್ಥಾನ ಪಡೆದರು.
15 ವರ್ಷದಲ್ಲೇ ಜಿಎಂ
ಆಂಧ್ರಪ್ರದೇಶದ ಗುಡಿವಾಡದವರಾದ ಕೊನೆರು ಹಂಪಿ, 2002ರಲ್ಲಿ 15 ವರ್ಷದವರಾಗಿದ್ದಾಗಲೇ ಗ್ರ್ಯಾಂಡ್ ಮಾಸ್ಟರ್ ಆಗಿ ಗುರುತಿಸಿಕೊಂಡರು. ಈ ಮೂಲಕ ಅವರು ವಿಶ್ವದ ಅತೀ ಕಿರಿಯ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಎಂಬ ದಾಖಲೆ ನಿರ್ಮಿಸಿದ್ದರು. ಬಳಿಕ ಈ ದಾಖಲೆಯನ್ನು ಚೀನದ ಹೌ ಯಿಫಾನ್ ಮುರಿದರು.
10ನೇ ವಯಸ್ಸಿನಿಂದಲೇ ಕಿರಿಯರ ಚೆಸ್ ಕೂಟಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಕೊನೆರು, ಚೆಸ್ ಒಲಿಂಪಿಯಾಡ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಗೆದ್ದಿರುವ ಸಾಧಕಿ.
“ನಾನು ಬಹಳ ಉದ್ವೇಗಕ್ಕೊಳಗಾಗಿದ್ದೇನೆ, ವಿಪರೀತ ಸಂತೋಷಗೊಂಡಿದ್ದೇನೆ. ಇದು ನನಗೆ ಬಹಳ ಕಠಿನ ದಿನವಾಗಿತ್ತು. ಟೈಬ್ರೇಕರ್‌ಗೆ ಪಂದ್ಯ ಹೋಗಬಹುದೆಂದು ಭಾವಿಸಿದ್ದೆ. ಯಾವಾಗ ಪಂದ್ಯವನ್ನು ನಾನು ಮುಗಿಸಿದೆನೋ, ಆಗ ನಾನು ಗೆದ್ದೆ ಎಂದು ನಿರ್ವಾಹಕರು ತಿಳಿಸಿದರು. ಅದು ಬಹಳ ಒತ್ತಡದ ಸನ್ನಿವೇಶವಾಗಿತ್ತು’
-ಕೊನೆರು ಹಂಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.