New Year; ಕರಾವಳಿಯಲ್ಲಿ ಪ್ರವಾಸಿಗರ ದಟ್ಟಣೆ : ಕೊಲ್ಲೂರಿನಲ್ಲಿ ಅಪಾರ ಭಕ್ತಸಂದಣಿ

ಎಲ್ಲೆಲ್ಲೂ ಟ್ರಾಫಿಕ್‌ ಜಾಮ್‌...ಮಂಗಳೂರು ಗಿಜಿಗಿಜಿ...ಬೀಚ್‌ಗಳಲ್ಲಿ ಭಾರೀ ಜನಸ್ತೋಮ

Team Udayavani, Dec 30, 2024, 6:30 AM IST

1-klr

ಉಡುಪಿ/ಮಂಗಳೂರು: ಸತತ ಮೂರು ದಿನಗಳ ರಜೆ ಹಾಗೂ ವರ್ಷದ ಕೊನೆಯ ವಾರಾಂತ್ಯವಾಗಿದ್ದ ಕಾರಣ ರವಿವಾರ ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತವಾಗಿದ್ದು, ವಿವಿಧೆಡೆ ವಾಹನ ದಟ್ಟಣೆಯೂ ಕಂಡುಬಂತು. ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರಮುಖ ದೇಗುಲಗಳು ಮತ್ತು ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು.

ಕೊಲ್ಲೂರಿನಲ್ಲಿ ಅಪಾರ ಭಕ್ತಸಂದಣಿ
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಕಳೆದ ಒಂದು ವಾರದಿಂದ ಭಕ್ತರ ಸಂಖ್ಯೆ ವಿಪರೀತವಾಗಿದ್ದು, ಡಿ.29ರ ಶನಿವಾರ 15 ಸಾವಿರಕ್ಕೂ ಮಿಕ್ಕಿದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ವರ್ಷದ ಕೊನೆಯ ವಾರಾಂತ್ಯ ಹಾಗೂ ಮೂರು ದಿನ ರಜೆ ಇದ್ದ ಕಾರಣ ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು.

ಮುಖ್ಯ ರಸ್ತೆಯವರೆಗೆ ಸರತಿ ಸಾಲು
ದೇವರ ದರ್ಶನಕ್ಕೆ ಭಾರೀ ಉದ್ದದ ಸರತಿ ಸಾಲು ಕಂಡುಬಂದಿದ್ದು, ಇದು ಮುಖ್ಯ ರಸ್ತೆಯವರೆಗೂ ತಲುಪಿತ್ತು. ದೇವರ ದರ್ಶನಕ್ಕೆ ದೇಗುಲದ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ಪರಿಸರದ ಬಹುತೇಕ ಎಲ್ಲ ವಸತಿ ಗೃಹಗಳು ಕಳೆದ ಒಂದು ವಾರದಿಂದ ಭರ್ತಿಯಾಗಿದ್ದು, ದೂರದೂರಿನಿಂದ ಆಗಮಿಸಿದ್ದ ಭಕ್ತರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ದಣಿವಾರಿಸುತ್ತಿರುವುದು ಕಂಡುಬಂತು.

ವಾಹನ ದಟ್ಟಣೆ
ವಾಹನ ನಿಲುಗಡೆ ಹಾಗೂ ಸಂಚಾರ ಸಮಸ್ಯೆಯು ಇಲ್ಲಿ ಹಲವು ವರ್ಷಗಳಿಂದ ಇದ್ದು, ಭಕ್ತರ ಸಂಖ್ಯೆ ಹೆಚ್ಚಿದ್ದಾಗ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರವಿವಾರ ಸಂಚಾರ ಸುವ್ಯವಸ್ಥೆಗೆ ಪೊಲೀಸರು ಹರಸಾಹಸಪಡಬೇಕಾಯಿತು.

ಕುಕ್ಕೆ ಸುಬ್ರಹ್ಮಣ್ಯ: ಭಕ್ತ ಸಂದಣಿ
ಸುಬ್ರಹ್ಮಣ್ಯ: ಸರಣಿ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಅಪಾರ ಭಕ್ತ ಸಂದಣಿ ಕಂಡುಬಂತು.
ದೇಗುಲಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸಿದ್ದರು. ಕ್ಷೇತ್ರದ ವಾಹನ ಪಾರ್ಕಿಂಗ್‌ ಸ್ಥಳಗಳು ಭರ್ತಿಯಾಗಿದ್ದು, ವಾಹನಗಳನ್ನು ಇತರೆಡೆ ನಿಲ್ಲಿಸಿರುವುದು ಕಂಡುಬಂತು. ದೇಗುಲದ ಹೊರಾಂಗಣ, ರಥಬೀದಿ, ಪೇಟೆಯ ರಸ್ತೆಯಲ್ಲಿ ಜನರ ದಟ್ಟಣೆ ಇತ್ತು. ದೇವರ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಲಾಗಿತ್ತು.

ಕಟೀಲಿನಲ್ಲಿ
ಸರಣಿ ರಜೆಯ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಯಾತ್ರಿಗಳ ಸಂಖ್ಯೆ ಹೆಚ್ಚಿತ್ತು. ಶೈಕ್ಷಣಿಕ ಪ್ರವಾಸದ ಶಾಲಾ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಅನ್ನಪ್ರಸಾದ ಸ್ವೀಕರಿಸಲು ದೊಡ್ಡ ಸರತಿ ಸಾಲು ಕಂಡುಬಂದಿತು. ಮಧ್ಯಾಹ್ನ ಸುಮಾರು 5 ಸಾವಿರಕ್ಕೂ ಮಿಕ್ಕಿದ ಭಕ್ತರು ದೇವರ ದರ್ಶನ ಪಡೆದಿದ್ದಾರೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ಶ್ರೀ ಕೃಷ್ಣ ಮಠದಲ್ಲಿ
ಉಡುಪಿ ಶ್ರೀಕೃಷ್ಣ ಮಠದಲ್ಲೂ ಭಕ್ತರ ಸಂಖ್ಯೆ ವಿಪರೀತವಾಗಿತ್ತು. ದೇವರ ದರ್ಶನಕ್ಕೆ ಭಾರೀ ಉದ್ದದ ಸಾಲು ಕಂಡುಬಂತು. ಶೈಕ್ಷಣಿಕ ಪ್ರವಾಸ ಬಂದಿದ್ದ ವಿಧ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿದ್ದು, ರಥಬೀದಿಯು ಜನರಿಂದ ತುಂಬಿ ತುಳುಕುತ್ತಿತ್ತು.

ಎಲ್ಲೆಲ್ಲೂ ಟ್ರಾಫಿಕ್‌ ಜಾಮ್‌
ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕರಾವಳಿಯ ಪ್ರವಾಸಿ ತಾಣಗಳಿಗೆ ಆಗಮಿಸಿದ್ದರಿಂದ ವಿವಿಧೆಡೆ ಟ್ರಾಫಿಕ್‌ ಜಾಮ್‌ ಸಂಭವಿಸಿತು. ದೇಗುಲಗಳ ಪರಿಸರ, ಮಂಗಳೂರು ಮತ್ತು ಉಡುಪಿ ನಗರದಲ್ಲಿ ವಾಹನ ದಟ್ಟಣೆ ಅತಿಯಾಗಿತ್ತು.

ಮಂಗಳೂರು ಗಿಜಿಗಿಜಿ
ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರವಿವಾರದಂದು ನಗರದ ವಿವಿಧೆಡೆ ಜನಸಂದಣಿ ಕಂಡುಬಂತು. ವಿವಿಧ ಮಾಲ್‌ಗ‌ಳಲ್ಲಿ, ಬೀಚ್‌, ದೇವಸ್ಥಾನ, ಕರಾವಳಿ ಉತ್ಸವ ಮೈದಾನ, ಮಂಗಳೂರು ಕಂಬಳ ಪ್ರದೇಶದಲ್ಲೂ ಜನದಟ್ಟಣೆ ಕಂಡುಬಂತು.

ವರ್ಷಾಂತ್ಯದ ಹಿನ್ನೆಲೆಯಲ್ಲಿ ವಿವಿಧೆಡೆ ಖರೀದಿ ಹಾಗೂ ಮಾರಾಟವೂ ಉತ್ತಮವಾಗಿತ್ತು. ಜನ ವಿವಿಧ ಮಳಿಗೆಗಳಿಗೆ ತೆರಳಿ ಖರೀದಿಯಲ್ಲಿ ತೊಡಗಿಕೊಂಡರು. ವಾಹನಗಳ ಓಡಾಟವೂ ಹೆಚ್ಚಾಗಿದೆ. ಮಂಗಳೂರು ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಎಂದಿಗಿಂತಲೂ ಅಧಿಕ ಪ್ರಯಾಣಿಕರು ಕಂಡುಬಂದರು. ಮಂಗಳೂರಿನ ಕರಾವಳಿ ಉತ್ಸವ ಮೈದಾನದತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.

ಕರಾವಳಿಯಲ್ಲಿ ವರ್ಷಾಂತ್ಯದಲ್ಲಿ ಸಮಾರಂಭಗಳು ಅಧಿಕ ವಾಗಿದ್ದವು. ಅವುಗಳ ಜತೆ ವಿದೇಶದಿಂದ, ಹೊರ ರಾಜ್ಯಗಳಲ್ಲಿ ಉದ್ಯೋಗದಲ್ಲಿರುವವರು ಊರಿಗೆ ಆಗಮಿಸಿರುವ ಕಾರಣ ಖರೀದಿ, ಮಾರಾಟದ ಭರಾಟೆ ಕಂಡುಬಂತು.

ಬೀಚ್‌ಗಳಲ್ಲಿ ಭಾರೀ ಜನಸ್ತೋಮ
ಕರಾವಳಿಯ ಬಹುತೇಕ ಎಲ್ಲ ಬೀಚ್‌ಗಳಲ್ಲೂ ಪ್ರವಾಸಿಗರ ದಟ್ಟಣೆ ಅತಿಯಾಗಿತ್ತು. ಮಂಗಳೂರಿನ ವಿವಿಧ ಬೀಚ್‌ಗಳಲ್ಲೂ ಕೂಡ ಪ್ರವಾಸಿಗರ ಸಂಖ್ಯೆ ಅಧಿಕವಾಗಿತ್ತು. ಪಣಂಬೂರು, ಸೋಮೇಶ್ವರ ಬೀಚ್‌ಗಳಿಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಉಡುಪಿಯ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಮಲ್ಪೇ ಬೀಚ್‌ನಲ್ಲಿ ಜನರ ದಟ್ಟಣೆ ವಿಪರೀತವಾಗಿತ್ತು. ಕಳೆದ ಕೆಲವು ದಿನಗಳಿಂದಲೂ ಇಲ್ಲಿ ಪ್ರವಾಸಿಗರ ಒತ್ತಡ ಅತಿಯಾಗಿದೆ. ಪರಿಣಾಮವಾಗಿ ಉಡುಪಿ- ಮಲ್ಪೆ ರಸ್ತೆಯಲ್ಲಿ ವಾಹನ ದಟ್ಟಣೆಯೂ ಕಂಡುಬಂತು. ಪಾರ್ಕಿಂಗ್‌ಗೂ ಸ್ವಲ್ಪ ಸಮಸ್ಯೆ ಕಂಡುಬಂತು. ಮರವಂತೆ, ಸೋಮೇಶ್ವರ ಬೀಚ್‌ಗಳಲ್ಲಿ ಕೂಡ ಪ್ರವಾಸಿಗರ ಸಂಖ್ಯೆ ಎಂದಿಗಿಂತ ಸಾಕಷ್ಟು ಹೆಚ್ಚಿತ್ತು.

ರಸ್ತೆ ಕಾಮಗಾರಿ: ಎಚ್ಚರಿಕೆ ವಹಿಸಿ
ಕರಾವಳಿಯ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಬದಲಿ ರಸ್ತೆ ಬಳಸಬೇಕಿದೆ. ಆದುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಾಗುವ ಅಗತ್ಯವಿದೆ.

ಟಾಪ್ ನ್ಯೂಸ್

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

Udupi: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Udupi: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಸುನಿಲ್ ಕುಮಾರ್

Udupi; ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಸುನಿಲ್ ಕುಮಾರ್ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Siddapura: ಪಾದಚಾರಿ ಮಹಿಳೆಗೆ ಕಾರು ಢಿಕ್ಕಿ; ಗಂಭೀರ

Siddapura: ಪಾದಚಾರಿ ಮಹಿಳೆಗೆ ಕಾರು ಢಿಕ್ಕಿ; ಗಂಭೀರ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.