PDO, ಪಂಚಾಯತ್‌ ಕಾರ್ಯದರ್ಶಿ ನೇಮಕಾತಿಗೆ ಆಮೆ ನಡೆ

ಗ್ರಾಮ ಆಡಳಿತಕ್ಕಿಲ್ಲ ಅಧಿಕಾರಿ ಬಲ

Team Udayavani, Dec 30, 2024, 6:41 AM IST

1-kar

ಮಂಗಳೂರು: ದೇಶದ ಆಡಳಿತಕ್ಕೆ ಸಂಸತ್ತು ಇದ್ದಂತೆ ಗ್ರಾಮಕ್ಕೆ ಗ್ರಾಮ ಪಂಚಾಯತ್‌ ಆಧಾರ. ಪಂಚಾಯತ್‌ಗೆ ಬರುವ ಜನಸಾಮಾನ್ಯರ ಸಮಸ್ಯೆ-ಸವಾಲುಗಳಿಗೆ ಉತ್ತರ ನೀಡಿ, ಗ್ರಾಮದ ಅಭಿವೃದ್ಧಿಗೆ ಬಲ ನೀಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ ಇಲ್ಲಿನ ಹುದ್ದೆಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಾತ್ರ ಸರಕಾರ ಹೆಚ್ಚು ಆಸ್ಥೆ ತೋರಿದಂತಿಲ್ಲ!

ರಾಜ್ಯದ 5,950 ಗ್ರಾ.ಪಂ.ಗಳ ಪೈಕಿ ಮಂಜೂರಾದ 5,954 ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ (ಪಿಡಿಒ) ಗಳಲ್ಲಿ 866 ಹುದ್ದೆಗಳು ಖಾಲಿ ಇವೆ. ಗ್ರಾ.ಪಂ. ಕಾರ್ಯದರ್ಶಿ (ಗ್ರೇಡ್‌ 1) 2,127 ಹುದ್ದೆಗಳ ಪೈಕಿ 491 ಹಾಗೂ ಗ್ರಾ.ಪಂ. ಕಾರ್ಯದರ್ಶಿ (ಗ್ರೇಡ್‌ 2) 3,827 ಹುದ್ದೆಗಳ ಪೈಕಿ 641 ಹುದ್ದೆ ಖಾಲಿ ಇವೆ.
ದಕ್ಷಿಣ ಕನ್ನಡದಲ್ಲಿ ಮಂಜೂರಾಗಿರುವ 223 ಪಿಡಿಒ ಹುದ್ದೆಗಳ ಪೈಕಿ 57 ಪಿಡಿಒ ಹುದ್ದೆಗಳು ಖಾಲಿ ಇದ್ದು, ರಾಜ್ಯ ಮಟ್ಟದಲ್ಲಿ ಅತ್ಯಧಿಕ ಹುದ್ದೆಗಳು ಖಾಲಿ ಇರುವ ಟಾಪ್‌ ಐದು ಜಿಲ್ಲೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಜೂರಾಗಿರುವ 61 ಪಂಚಾಯತ್‌ ಕಾರ್ಯದರ್ಶಿ ಗ್ರೇಡ್‌ 1 ಹುದ್ದೆಗಳಲ್ಲಿ 16 ಹುದ್ದೆಗಳು ಖಾಲಿ ಇವೆ. ಹಾಗೆಯೇ 161 ಪಂಚಾಯತ್‌ ಕಾರ್ಯದರ್ಶಿ ಗ್ರೇಡ್‌ 2 ಹುದ್ದೆಗಳಲ್ಲಿ 36 ಖಾಲಿ ಇದ್ದು, ಹೆಚ್ಚು ಖಾಲಿ ಇರುವ 5 ಜಿಲ್ಲೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಉಡುಪಿ ಜಿಲ್ಲೆಯಲ್ಲಿ 155 ಪಿಡಿಒ ಹುದ್ದೆಗಳು ಮಂಜೂರಾಗಿ ದ್ದರೆ 19 ಖಾಲಿ ಇವೆ. 57 ಪಂಚಾಯತ್‌ ಕಾರ್ಯದರ್ಶಿ ಗ್ರೇಡ್‌ 1 ಹುದ್ದೆ ಪೈಕಿ 3 ಖಾಲಿ ಇವೆ. 98 ಪಂಚಾಯತ್‌ ಕಾರ್ಯದರ್ಶಿ ಗ್ರೇಡ್‌ 2 ಹುದ್ದೆಗಳಲ್ಲಿ 30 ಖಾಲಿ ಇವೆ.
ಖಾಲಿ ಇರುವ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸಮೀಪದಲ್ಲಿರುವ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ/ ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್‌ 1 ವೃಂದದ ನೌಕರರಿಗೆ ಪ್ರಭಾರ ವಹಿಸಲಾಗಿದೆ.

ಗ್ರಾ.ಪಂ. ಕಾರ್ಯನಿರ್ವಹಣೆಗೆ “ಕೈಪಿಡಿ’ ರೆಡಿ!
ಗ್ರಾ.ಪಂ.ಗಳಲ್ಲಿ ಕಚೇರಿ ನಿರ್ವಹಣೆ ಹೇಗೆ ನಡೆಸಬೇಕು ಎಂಬ ಬಗ್ಗೆ ಅಧಿಕೃತ ಸೂಚನೆಗಳು ಇರಲಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳ ಸೂಚನೆಯ ಪ್ರಕಾರ ಹಾಗೂ ನಡೆದು ಬಂದ ಕ್ರಮದಂತೆ ಕಚೇರಿ ನಿರ್ವಹಣೆ ಆಗುತ್ತಿತ್ತು. ಹೀಗಾಗಿ ಕೆಲವೊಮ್ಮೆ ಟಿಪ್ಪಣಿ ಬರೆಯುವುದು ಯಾರು, ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಕೆಲವರನ್ನು ಕಾಡುತ್ತಿದ್ದವು. ಇದನ್ನು ಮನಗಂಡ ಪಂಚಾಯತ್‌ರಾಜ್‌ ಇಲಾಖೆಯು ಹೊಸದಾಗಿ “ಗ್ರಾಮ ಪಂಚಾಯತ್‌ ಕಚೇರಿ ಕಾರ್ಯವಿಧಾನ ಕೈಪಿಡಿ’ ಸಿದ್ಧಪಡಿಸಿದೆ. ಇದರಲ್ಲಿ ಪಂಚಾಯತ್‌ನ ವಿವಿಧ ಸ್ತರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಪಾತ್ರದ ಬಗ್ಗೆ ವಿವರವಾದ ಉಲ್ಲೇಖವಿದೆ. ಸದ್ಯ ಕೈಪಿಡಿಯ ಕರಡು ಅಧಿಸೂಚನೆ ಆಗಿದ್ದು, ಆಕ್ಷೇಪಗಳನ್ನು ಆಲಿಸಿ ಹೊಸ ಅಧಿಸೂಚನೆ ಬರಲಿದೆ.

ಇದರಿಂದಾಗಿ ಹಾಲಿ ಇರುವ ಪಂಚಾಯತ್‌ನಲ್ಲಿಯೂ ಪ್ರಭಾರ ವಹಿಸಿದ ಗ್ರಾಮದಲ್ಲಿಯೂ ಕೆಲಸ ನಿರ್ವಹಣೆ ಕಷ್ಟ ಎಂಬಂತಾಗಿದೆ. ಪಿಡಿಒ ಅಥವಾ ಇತರ ಅಧಿಕಾರಿ ವರ್ಗದವರು ದಿನಪೂರ್ತಿ ಗ್ರಾ.ಪಂ. ವ್ಯಾಪ್ತಿಯಲ್ಲೇ ಲಭ್ಯವಾದರೆ ಜನರ ಸಮಸ್ಯೆ-ಸವಾಲುಗಳ ನಿರ್ವಹಣೆ ಸುಲಭ ಎಂಬುದು ಜನರ ಅಭಿಪ್ರಾಯ.

ಮೂಲ ಸೌಕರ್ಯಗಳಾದ ನೀರು, ಬೀದಿದೀಪ, ಚರಂಡಿ ಸ್ವತ್ಛತೆ, ತ್ಯಾಜ್ಯ ವಿಲೇವಾರಿ, ರಸ್ತೆ ಸಂಪರ್ಕ, ಪರವಾನಿಗೆ, ಮನೆ ನಂಬರ್‌, 9/11, ನರೇಗಾ ಯೋಜನೆಯಡಿ ಉದ್ಯೋಗ ಇತ್ಯಾದಿ ಸೌಲಭ್ಯ ನೀಡುವುದರೊಂದಿಗೆ, ಗ್ರಾಮ ಮತ್ತು ಪಂಚಾಯತ್‌ ಮಟ್ಟದ ಶಿಕ್ಷಣ ಪಡೆ, ಆರೋಗ್ಯ ನೈರ್ಮಲ್ಯ ಸಮಿತಿ ಸಹಿತ ವಿವಿಧ ಕಾರ್ಯಗಳನ್ನು ಪಂಚಾಯತ್‌ನ ಅಧಿಕಾರಿಗಳು ನಡೆಸಬೇಕಿದೆ. ಆದರೆ ಹಲವು ಪಂಚಾಯತ್‌ನಲ್ಲಿ ಮುಖ್ಯ ಸ್ತರದ ಅಧಿಕಾರಿಗಳೇ ಇಲ್ಲದೆ ಈ ಸೌಲಭ್ಯ ವ್ಯತ್ಯಯವಾಗುತ್ತಿದೆ. ಕೆಲವು ಪಂಚಾಯತ್‌ಗಳಲ್ಲಿ ಪ್ರಭಾರ ನಿಯೋಜನೆ ಇದ್ದರೂ ಕೆಲಸದ ಒತ್ತಡದಿಂದ ಜನಸಾಮಾನ್ಯರ ಕೆಲಸಕ್ಕೆ ಅಲ್ಲಿಯೂ ತೊಡಕು ತಪ್ಪಿಲ್ಲ!

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನೇಮಕಕ್ಕೆ ಸಂಬಂಧಿಸಿ ಬಹು ಸಮಯದ ಬಳಿಕ ಇದೇ ಮೊದಲ ಬಾರಿಗೆ ಲೋಕಸೇವಾ ಅಯೋಗದಿಂದ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಇದು ಅಂತಿಮವಾಗಿ ನೇಮಕಾತಿ ನಡೆಯಲಿದೆ. ಉಳಿದ ಹುದ್ದೆಗಳ ನೇಮಕವನ್ನು ನಿಯಮಗಳ ಅನುಸಾರ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಸರಕಾರದಿಂದ ನಿರ್ದೇಶನ ಇದೆ.
ಡಾ| ಆನಂದ್‌ ಕೆ.,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ

 ದಿನೇಶ್‌ ಇರಾ

ಟಾಪ್ ನ್ಯೂಸ್

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

14-aranthodu

Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

12

ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.