Havyaka Sammelana: ಮೂರು ಮಕ್ಕಳ ಹೊಂದಿ, ಹೆಚ್ಚಾದರೆ ಮಠಕ್ಕೆ ಕೊಡಿ: ಸ್ವರ್ಣವಲ್ಲಿ ಶ್ರೀ
ಹವ್ಯಕ ಸಮಾಜದ ಉಳಿವಿಗೆ ಸೂಕ್ತ ವಯಸ್ಸಿಗೆ ಶಾಸ್ತ್ರೋಕ್ತ ವಿವಾಹ, ಗೀತ ಪಾರಾಯಣದಿಂದ ಸಾಧ್ಯ
Team Udayavani, Dec 30, 2024, 2:35 AM IST
ಬೆಂಗಳೂರು: ಹವ್ಯಕ ಬ್ರಾಹ್ಮಣರು ಬ್ರಾಹ್ಮಣರಾಗಿಯೇ ಉಳಿಯಬೇಕು. ಜತೆಗೆ ಹವ್ಯಕ ಸಮುದಾಯದ ಉಳಿವಿಗಾಗಿ ಸೂಕ್ತ ವಯಸ್ಸಿಗೆ ಶಾಸ್ತ್ರೋಕ್ತ ವಿವಾಹ ಹಾಗೂ ಗೀತ ಪಾರಾಯಣ ಸೂತ್ರವನ್ನು ಎಲ್ಲರೂ ಪಾಲಿಸಬೇಕು ಎಂದು ಸೋಂದ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಅರಮನೆ ಮೈದಾನದಲ್ಲಿ ರವಿವಾರ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಹಸ್ರಚಂದ್ರ ಸಭೆಯಲ್ಲಿ ಅವರು ಮಾತನಾಡಿ, ನೈತಿಕತೆಯ ಪತನ, ಜನಸಂಖ್ಯೆಯ ಕ್ಷೀಣತೆಯ ಜ್ವಲಂತ ಸಮಸ್ಯೆ ಎದುರಿಸುತ್ತಿರುವ ಹವ್ಯಕ ಸಮಾಜದ ಉಳಿವಿಗೆ ಸೂಕ್ತ ವಯಸ್ಸಿಗೆ ಶಾಸ್ತ್ರೋಕ್ತ ವಿವಾಹ ಹಾಗೂ ಗೀತ ಪಾರಾಯಣದಿಂದ ಮಾತ್ರ ಸಾಧ್ಯ ಎಂದರು.
ಬಹುತೇಕರು ಅವರ ಸಂತತಿಯನ್ನು ನಿಯಂತ್ರಣ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಮಠದಲ್ಲಿ ದಂಪತಿಗಳಿಗೆ ಮಾರ್ಗದರ್ಶನ ಶಿಬಿರಗಳನ್ನು ನಡೆಸಲಾಗುತ್ತದೆ. ಪ್ರತಿ ದಂಪತಿಗೆ ಕನಿಷ್ಠ ಮೂರು ಮಕ್ಕಳು ಇರಬೇಕು. ಇನ್ನೂ ಹೆಚ್ಚಾದರೆ ಮಠಕ್ಕೆ ಕೊಡಿ. ನಾವು ಸಾಕುತ್ತೇವೆ ಎಂದು ಒತ್ತಿ ಹೇಳಿದರು. ಇಷ್ಟೇ ಅಲ್ಲದೆ, ದಾರಿ ತಪ್ಪಿದ ಹೆಣ್ಣು ಮಕ್ಕಳನ್ನು ಸಂರಕ್ಷಿಸುವ ಕೆಲಸವನ್ನು ಶ್ರೀ ಮಠದ ಜಾಗೃತ ಕೇಂದ್ರದಿಂದ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ 24 ಹೆಣ್ಣು ಮಕ್ಕಳನ್ನು ರಕ್ಷಿಸಿ, ಮನಃಪರಿವರ್ತನೆ ಮಾಡಲಾಗಿದೆ. ಈಗ ಅವರು ಸುಖ ಜೀವನ ನಡೆಸುತ್ತಿದ್ದಾರೆ ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.
ಇದೇ ವೇಳೆ ಮಾತನಾಡಿದ ಸ್ವರ್ಣವಲ್ಲಿ ಮಠದ ಕಿರಿಯ ಶ್ರೀಗಳಾದ ಶ್ರೀಆನಂದಭೋದೇಂದ್ರ ಸರಸ್ವತಿ ಸ್ವಾಮೀಜಿ, ಹಳ್ಳಿ ಜೀವನ ಶ್ರೇಷ್ಠ ಜೀವನ ಎಂದು ತೋರಿಸಿದವರೇ ಹವ್ಯಕರು. ಆದರೆ, ಇಂದು ಹಳ್ಳಿಯಿಂದ ಪಟ್ಟಣದತ್ತ ವಲಸೆ ಹೆಚ್ಚಾಗುತ್ತಿದೆ. ನಮ್ಮ ಧರ್ಮದ ರಕ್ಷಣೆಯ ಜತೆಗೆ ಕೃಷಿ ಪದ್ಧತಿ, ಹಳ್ಳಿಗಳನ್ನು ಉಳಿಸುವತ್ತ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ
BBK11: ಕೋಪದಿಂದ ಅರ್ಧದಲ್ಲೇ ಬಿಗ್ ಬಾಸ್ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್
Twist; ಛತ್ತೀಸ್ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!
Kannada Movie: ನಿರಂಜನ್ ಶೆಟ್ಟಿಯ ʼ31 ಡೇಸ್ʼ ಚಿತ್ರ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.