INDvAUS; ಮೆಲ್ಬರ್ನ್‌ನಲ್ಲಿ ಬ್ಯಾಟಿಂಗ್ ಮರೆತ ಭಾರತ; ವರ್ಷದ ಕೊನೆಗೆ ಸೋಲಿನ ವಿದಾಯ
Team Udayavani, Dec 30, 2024, 12:06 PM IST
ಮೆಲ್ಬೋರ್ನ್: ಅತ್ಯಂತ ಕುತೂಹಲ ಕೆರಳಿಸಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 184 ರನ್ ಅಂತರದ ಸೋಲು ಕಂಡಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಗೆದ್ದ ಆಸ್ಟ್ರೇಲಿಯಾ ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ 234 ರನ್ ಗಳಿಗೆ ಆಸೀಸ್ ತಂಡವು ಆಲೌಟಾಯಿತು. ಭಾರತದ ಗೆಲುವಿಗೆ 340 ರನ್ ಗುರಿ ನೀಡಿತು. ಆದರೆ ಭಾರತ ತಂಡವು ಇನ್ನೂ 13 ಓವರ್ ಬಾಕಿ ಇರುವಂತೆ 155 ರನ್ ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ನಾಲ್ಕನೇ ದಿನ 9 ವಿಕೆಟ್ ಗೆ 228 ರನ್ ಮಾಡಿದ್ದ ಆಸೀಸ್ 234 ರನ್ ಮಾತ್ರ ಗಳಿಸಿತು. ಕೊನೆಯ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಮತ್ತೊಂದು ಐದು ವಿಕೆಟ್ ಗೊಂಚಲು ಪಡೆದರು.
ಕೊನೆಯ ದಿನದ ಚೇಸ್ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಮತ್ತೊಂದು ಉತ್ತಮ ಆರಂಭ ನೀಡಿದರು. 208 ಎಸೆತ ಎದುರಿಸಿದ ಜೈಸ್ವಾಲ್ 84 ರನ್ ಮಾಡಿದರು. ಆದರೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರದ್ದು ಅದೇ ಹಾಡು ಅದೇ ರಾಗ. ರಾಹುಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ರಿಷಭ್ ಪಂತ್ 30 ರನ್ ಮಾಡಿದರು. ಉತ್ತಮವಾಗಿ ಕಾಣುತ್ತಿದ್ದ ಪಂತ್ 104 ಎಸೆತ ಎದುರಿಸಿ ಬಳಿಕ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು. ಉಳಿದೆಲ್ಲಾ ಆಟಗಾರರದ್ದು ಪೆವಿಲಿಯನ್ ಪರೇಡ್. ವಿಪರ್ಯಾಸ ಎಂದರೆ ಪ್ರಮುಖ ಇನ್ನಿಂಗ್ಸ್ ನಲ್ಲಿ ಎರಡಂಕಿ ಮೊತ್ತ ದಾಖಲಿಸಿದ್ದು ಜೈಸ್ವಾಲ್ ಮತ್ತು ಪಂತ್ ಮಾತ್ರ.
ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ ಬೋಲ್ಯಾಂಡ್ ತಲಾ ಮೂರು ವಿಕೆಟ್ ಕಿತ್ತರು. ನಾಥನ್ ಲಿಯಾನ್ ಎರಡು ಮತ್ತು ಟ್ರಾವಿಸ್ ಹೆಡ್ ಒಂದು ವಿಕೆಟ್ ಪಡೆದರು.
ಈ ಜಯದೊಂದಿಗೆ ಆಸೀಸ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿತು. ಈ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ತಲುಪುವ ಭಾರತದ ಹಾದಿ ಮತ್ತಷ್ಟು ಕಠಿಣವಾಗಿದೆ. ಮುಂದಿನ ಪಂದ್ಯವು ಸಿಡ್ನಿಯಲ್ಲಿ ಜನವರಿ 3ರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ
SA vs Pak, 2nd Test: ರಿಕಲ್ಟನ್ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.