ಕಾರ್ಕಳ ಆನೆಕೆರೆಯಲ್ಲಿ ನೀರಕ್ಕಿಗಳ ಸಂತತಿ ಕ್ಷೀಣ; ಹೆಚ್ಚಿನ ಅಧ್ಯಯನ ಅಗತ್ಯ
ಹೆಚ್ಚಿನ ಅಧ್ಯಯನ ನಡೆದಲ್ಲಿ ನಿಖರವಾದ ಕಾರಣ ತಿಳಿಯಬಹುದು.
Team Udayavani, Dec 30, 2024, 6:02 PM IST
ಕಾರ್ಕಳ: ಕಾರ್ಕಳದ ರಮಣೀಯ ಆನೆಕೆರೆಯಲ್ಲಿ ನೀರಕ್ಕಿಗಳ ಸಂತತಿ ಕ್ಷೀಣಗೊಂಡಿರುವ ಬಗ್ಗೆ ಪಕ್ಷಿ ವೀಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಡಕ್ಸ್, ಗೀಸ್, ಹೆರೋನ್ಸ್ ಹಕ್ಕಿಗಳು ವರ್ಷದಿಂದ ವರ್ಷಕ್ಕೆ ಕ್ಷೀಣವಾಗುತ್ತಿದೆ ಎನ್ನುವುದು ಅವರ ಅಭಿಪ್ರಾಯ.
12ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಏಳು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆ ಸುತ್ತಲಿನ ಅಂತರ್ಜಲ ವೃದ್ಧಿಗೆ, ಜೀವ ವೈವಿಧ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಲವಾರು ವರ್ಷಗಳಿಂದ ನೀರಕ್ಕಿಗಳು ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದವು. ಆದರೆ ಈಗ ವಿರಳವಾಗಿವೆ ಎನ್ನುತ್ತಾರೆ ಪಕ್ಷಿ ವೀಕ್ಷಕರು.
ನಾರ್ದರ್ನ್ ಪಿನ್‌ಟೈಲ್, ಲೆಸ್ಸರ್ ವಿಸ್ಲಿಂಗ್-ಡಕ್, ಕಾಟನ್ ಗ್ಮಿ-ಗೂಸ್, ಲಿಟಲ್ ಗ್ರೀಬ್, ಲಿಟಲ್ ಕಾರ್ಮೊರೆಂಟ್ , ಗ್ರೇಟ್ ಕಾರ್ಮೊರೆಂಟ್, ಗ್ರೇ ಹೆರಾನ್, ಪರ್ಪಲ್ ಹೆರಾನ್, ಲಿಟಲ್ ಎಗ್ರೆಟ್, ಯೆಲ್ಲೊ ಬಿಟರ್ನ್, ಗ್ಲೋಸಿ ಐಬಿಸ್, ಯುರೇಷಿಯನ್ ಸ್ಪೂನ್‌ಬಿಲ್, ವೈಟ್-ಬ್ರೆಸ್ಟೆಡ್ ವಾಟರ್‌ಹೇನ್, ಇ ಕಾಮನ್, ರೆಡ್-ವಾಟಲ್ಡ್ ಲ್ಯಾಪ್ವಿಂಗ್, ಲಿಟಲ್ ರಿಂಗ್ಡ್ ಪ್ಲವರ್, ಕಾಮನ್
ಸ್ಯಾಂಡ್ ಪೈಪರ್, ವುಡ್ ಸ್ಯಾಂಡ್ ಪೈಪರ್ ಸಹಿತ ಮೊದಲಾದ ನೀರಕ್ಕಿಗಳನ್ನು ಕಾರ್ಕಳ ಪರಿಸರದ ಕೆರೆ, ನದಿ, ಜರಿಗಳಲ್ಲಿ ಕಾಣಬಹುದು. ಆದರೆ, ಇವು ಆನೆಕೆರೆಯಲ್ಲಿ ಕಡಿಮೆಯಾಗುತ್ತಿದೆ.
ಒಂದೇ ಒಂದು ನೀರಕ್ಕಿ ಕಾಣ ಸಿಕ್ಕಿಲ್ಲ
ಆನೆಕೆರೆಯಲ್ಲಿ ಈ ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ನೀರಕ್ಕಿಗಳು ಕಾಣಸಿಗುತ್ತಿದ್ದವು. ಇತ್ತೀಚಿನ ಮುಂಜಾನೆ ವೀಕ್ಷಣೆಯಲ್ಲಿ ಒಂದೇ ಒಂದು ನೀರಕ್ಕಿ ಕಾಣ ಸಿಕ್ಕಿಲ್ಲ. ಆಹಾರ ಸರಪಳಿಯಲ್ಲಾಗಿರುವ ಅಡಚಣೆಯಿಂದ ಹೀಗಾಗಿರುವ ಸಾಧ್ಯತೆ ಇರಬಹುದು.
ಜೀವ ವೈವಿದ್ಯತೆಗಳು ಸಮೃದ್ಧವಾಗಿದ್ದಲ್ಲಿ ಆರೋಗ್ಯಕರ ಪರಿಸರ ಎಂದು ಪರಿಗಣಿಸಬಹುದು. ಪರಿಸರವನ್ನು
ಸ್ವಚ್ಛವಾಗಿರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ನಡೆದಲ್ಲಿ ನಿಖರವಾದ ಕಾರಣ ತಿಳಿಯಬಹುದು.
*ಶಿವಶಂಕರ್ ಕಾರ್ಕಳ, ಪಕ್ಷಿ ವೀಕ್ಷಕರು ಮತ್ತು ಅಧ್ಯಯನಕಾರರು
ಕೆರೆಗೆ ಸೇರುತ್ತಿದೆ ತ್ಯಾಜ್ಯ
ಆನೆಕೆರೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿಗಳು ಕೆರೆಯಲ್ಲಿ ಕಾಣಸಿಗುತ್ತಿವೆ. ಪಾರ್ಕ್ ನಲ್ಲಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಡಸ್ಟ್‌ಬಿನ್ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವರು ತ್ಯಾಜ್ಯವನ್ನು ಕೆರೆಗೆ ಎಸೆಯುವುದರಿಂದ ಕೆರೆ ಮಾಲಿನ್ಯವಾಗುತ್ತಿದೆ ಎಂಬುದು ಸ್ಥಳೀಯರ ಅಸಮಾಧಾನ.
ವಿರಳವಾಗಲು ಕಾರಣಗಳೇನು?
*ತ್ಯಾಜ್ಯ, ಪ್ಲಾಸ್ಟಿಕ್ನಿಂದಾಗಿ ಜಲಮೂಲ ಕಲುಷಿತವಾಗುತ್ತಿದ್ದು, ಇವು ಜಲಚರಗಳಿಗೆ ಅಪಾಯಕಾರಿ. ಜಲಚರಗಳು ಕಡಿಮೆಯಾದರೆ ನೀರಕ್ಕಿಗಳು ಬರುವುದಿಲ್ಲ!
*ನೀರಕ್ಕಿಗಳಿಗೆ ಪೂರಕವಾಗಿ ಜಲಚರ ಜೀವಿ, ಕೆರೆ, ನದಿ ಪರಿಸರ ಇಲ್ಲದಿದ್ದರೆ ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರಿ ಸಂತತಿ ಕಡಿಮೆ ಆಗುತ್ತದೆ.
ನೀರಕ್ಕಿಗಳ ಪ್ರಮುಖ ಪಾತ್ರವೇನು?
*ಮೀನು, ಹುಳುಗಳನ್ನು ಇವು ಸೇವಿಸುತ್ತವೆ. ಹದ್ದುಗಳು, ನರಿಗಳು, ಹಾವುಗಳಿವೆ ಇವು ಆಹಾರ. ಹೀಗಾಗಿ ಆಹಾರ ಸರಪಳಿಯ ಪ್ರಮುಖ ಕೊಂಡಿ.
*ಕೀಟ, ಜಲಚರ, ಸಸ್ಯಗಳನ್ನು ತಿನ್ನುವ ಮೂಲಕ ಕೊಳಗಳು ಶುದ್ಧವಾಗಿರುತ್ತವೆ.
*ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Viksit Bharat ‘ಯಂಗ್ ಲೀಡರ್ ಡೈಲಾಗ್’:ಉಡುಪಿಯ ಮನು ಶೆಟ್ಟಿ ಆಯ್ಕೆ
ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.