Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
Team Udayavani, Dec 31, 2024, 6:45 AM IST
ನ್ಯೂಯಾರ್ಕ್: ಜೀನ್ಸ್ ಬದಲಿಸಲು ಒಪ್ಪದ ಕಾರಣ ನ್ಯೂಯಾರ್ಕ್‌ನ ವಿಶ್ವ ರ್ಯಾಪಿಡ್ ಚೆಸ್ ಸ್ಪರ್ಧೆಯಿಂದ ಅನರ್ಹಗೊಂಡಿದ್ದ ನಾರ್ವೆಯ ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್, ಇದೇ ಪಂದ್ಯಾವಳಿಯ ಬ್ಲಿಟ್ಜ್ ವಿಭಾಗದ ಸ್ಪರ್ಧೆಯಲ್ಲಿ ಆಡಲು ಸಿದ್ಧರಾಗಿದ್ದಾರೆ.
ಜೀನ್ಸ್ ಧರಿಸಿ ಆಡಲು ಫಿಡೆ ಅನುಮತಿ ನೀಡಿರುವುದೇ ಇದಕ್ಕೆ ಕಾರಣ.ರ್ಯಾಪಿಡ್ ಚೆಸ್ ವೇಳೆ 9ನೇ ಸುತ್ತಿನಲ್ಲಿ ವಸ್ತ್ರಸಂಹಿತೆ ವಿವಾದದಿಂದಾಗಿ ಕಾರ್ಲ್ಸನ್ ಸ್ಪರ್ಧೆಯಿಂದ ಹೊರಬಿದ್ದಿದ್ದರು. ಜೀನ್ಸ್ ಧರಿಸಿ ಆಡಿದ್ದ ಕಾರ್ಲ್ಸನ್‌ಗೆ ನಿಯಮ ಉಲ್ಲಂ ಸಿದ ಕಾರಣ ನೀಡಿ ಆರಂಭದಲ್ಲಿ 17,000 ರೂ. ದಂಡ ವಿಧಿಸಲಾಯಿತು. ಬಳಿಕ ಕೂಟದಿಂದಲೇ ಅನರ್ಹಗೊಳಿಸಲಾಗಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಫಿಡೆ ಅಧ್ಯಕ್ಷ ಅರ್ಕಾಡಿ ಡ್ವಾರ್ಕೋವಿಕ್, ಪಂದ್ಯಾವಳಿಯ ವೇಳೆ ಅಧಿಕೃತ ವಸ್ತ್ರಸಂಹಿತೆ ಪಾಲಿಸುವ ಅಗತ್ಯವಿದೆ. ಆದರೆ ಸಣ್ಣ ಪುಟ್ಟ ಬದಲಾವಣೆಗೆ (ಅಂದರೆ ಸರಿಯಾದ ಜೀನ್ಸ್‌ಗೆ ಒಪ್ಪುವ ಜಾಕೆಟ್ ಇತ್ಯಾದಿ)ಅವಕಾಶವಿದೆ ಎಂದು ಬರೆದುಕೊಂಡಿದ್ದಾರೆ.
ಆನಂದ್ ಕಾರ್ಲ್ಸನ್ ಕಿಡಿ
ಫಿಡೆಯ ಉಪಾಧ್ಯಕ್ಷ, ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ಕಾರ್ಲ್ಸನ್ ಕಿಡಿ ಕಾರಿದ್ದಾರೆ. ತನ್ನ ಎಲ್ಲ ಒಳ್ಳೆಯ ಗುಣಗಳ ಕಾರಣ, ಆನಂದ್ ತಮ್ಮ ಹುದ್ದೆಗೆ ಸಲ್ಲದವರಾಗಿದ್ದಾರೆ ಎಂದು ನನಗನ್ನಿಸುತ್ತಿದೆ ಎಂದು ಕಾರ್ಲ್ಸನ್ ಹೇಳಿದ್ದಾರೆ. ಆನಂದ್, ತೊಂದರೆ ತೆಗೆದುಕೊಳ್ಳಲು ಸಿದ್ಧರಿಲ್ಲದ ವ್ಯಕ್ತಿ ಎಂಬರ್ಥದಲ್ಲಿ ಕಾರ್ಲ್ಸನ್ ಹೀಗೆ ಹೇಳಿದ್ದಾರೆ. ಜೀನ್ಸ್ ವಿವಾದವಾದಾಗ, ಸಾಮಾನ್ಯವಾಗಿ ಚೆಸ್ ಕೂಟಗಳಲ್ಲಿ ಜೀನ್ಸ್ ಧರಿಸುವುದಿಲ್ಲ ಎಂದು ಆನಂದ್ ಹೇಳಿದರು. ಅದರರ್ಥ, ಕೆಲವು ಸಂದರ್ಭದಲ್ಲಿ ಧರಿಸಬಹುದು ಎಂದಾಗುತ್ತದೆ ಅಲ್ಲವೇ ಎಂದು ಕಾರ್ಲ್ಸನ್ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.