ನಾಳೆಯಿಂದ ಜೆನ್ ಬೀಟಾ ತಲೆಮಾರಿನ ಯುಗ!
2025ರಿಂದ 2039ರವರೆಗಿನ ತಲೆಮಾರಿಗೆ ಈ ಹೆಸರಿಟ್ಟ ಸಮಾಜಶಾಸ್ತ್ರಜ್ಞರು
Team Udayavani, Dec 31, 2024, 7:00 AM IST
ಹೊಸದಿಲ್ಲಿ: ಸಮಾಜದಲ್ಲಿ “ಜೆನ್-ಝಡ್’ ತಲೆಮಾರಿನ ಬಗ್ಗೆಯೇ ಮಾತುಕತೆಗಳಾಗುತ್ತಿರುವ ನಡುವೆಯೇ 2025ರ ಜ. 1ರಿಂದ ಹುಟ್ಟುವ ಮಕ್ಕಳು ಹೊಸ ತಲೆಮಾರಿಗೆ ಸೇರಲಿದ್ದಾರೆ ಎಂದು ಸಮಾಜಶಾಸ್ತ್ರಜ್ಞರು ಹೇಳಿದ್ದಾರೆ. ಈ ತಲೆಮಾರನ್ನು “ಜೆನ್- ಬೀಟಾ’ ಹೆಸರಿನಿಂದ ಗುರುತಿಸಲಾಗುತ್ತದೆ.
2025ರಿಂದ 2039ರವರೆಗೆ ಹುಟ್ಟುವ ಮಕ್ಕಳು ಈ ತಲೆಮಾರಿಗೆ ಸೇರಲಿದ್ದು, ಇವರಲ್ಲಿ ಬಹುತೇಕರು 22ನೇ ಶತಮಾನದ ಆರಂಭವನ್ನು ನೋಡಲಿದ್ದಾರೆ ಎಂದು ಸಮಾಜ ಶಾಸ್ತ್ರಜ್ಞ ಮಾರ್ಕ್ ಮೆಕ್‌ಕ್ರಿಂಡಲ್ ಅವರು ಹೇಳಿದ್ದಾರೆ. ಅಲ್ಲದೆ ಮುಂದಿನ 10 ವರ್ಷದಲ್ಲಿ ಜೆನ್- ಬೀಟಾ ತಲೆಮಾರು ಜಗತ್ತಿನ ಜನಸಂಖ್ಯೆಯ ಶೇ.16ರಷ್ಟಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಲ್ಲಿಂದ ತಲೆಮಾರು ಲೆಕ್ಕಾಚಾರ ಆರಂಭ?
1925ರಿಂದ ಈ ತಲೆಮಾರು ಲೆಕ್ಕಚಾರವನ್ನು ಆರಂಭಿಸಲಾಗಿದ್ದು, 1925-45ರವರೆಗೆ ತಲೆಮಾರನ್ನು “ಬಿಲ್ಡರ್’, 1946- 64ರವರೆಗಿನ ತಲೆಮಾರನ್ನು “ಬೂಮರ್’, ಇದಾದ ಬಳಿಕ 1965-80 “ಜೆನ್-ಎಕ್ಸ್’, 1981-1994 “ಜೆನ್-ವೈ’, 1995-2009 “ಜೆನ್-ಝಡ್’, 2010-2024ರ ನಡುವಿನ ತಲೆಮಾರನ್ನು “ಜೆನ್ ಆಲ್ಫಾ’ ಎಂದು ಗುರುತಿಸಲಾಗುತ್ತದೆ.
ಹೊಸ ತಲೆಮಾರಿನ ಮಕ್ಕಳನ್ನು ಬೀಟಾ ಬೇಬೀಸ್ ಎಂದು ಗುರುತಿಸಲಿದ್ದು, ಇವರು ಯುವ ಜೆನ್-ವೈ ಮತ್ತು ಹಿರಿಯ ಜೆನ್-ಝಡ್‌ನ ಮಕ್ಕಳಾಗಿರಲಿದ್ದಾರೆ ಎಂದು ಮೆಕ್‌ಕ್ರಿಂಡಲ್ ಹೇಳಿದ್ದಾರೆ.
ಎಐ ಜತೆಗೆ ಬೀಟಾ ಬೇಬಿ ಬೆಳವಣಿಗೆ
ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಜೆನ್- ಬೀಟಾ ತಲೆಮಾರಿನ ಮಕ್ಕಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜತೆಗೆ ಬೆಳವಣಿಗೆ ಹೊಂದಲಿದ್ದಾರೆ. ಈ ಮಕ್ಕಳ ಕಾಲದಲ್ಲಿ ಜೀವನದ ಪ್ರತಿಯೊಂದು ಘಳಿಗೆಯನ್ನು ಎಐ ವಶಪಡಿಸಿಕೊಳ್ಳಲಿದೆ. ಇವರ ಶಿಕ್ಷಣ, ಆರೋಗ್ಯ, ಕೆಲಸ ಎಲ್ಲವನ್ನೂ ಎಐ ನಿರ್ಧಾರ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
IIT Madras: ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ಭಿನ್ನ? ಉತ್ತರ ನೀಡಿದ ರಾಹುಲ್ ಗಾಂಧಿ
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.