Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಪರಾರಿಯಾಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ, ಪ್ರಾಚಾರ್ಯರಿಂದ ದೂರು ದಾಖಲು
Team Udayavani, Dec 31, 2024, 8:45 PM IST
ಕುಷ್ಟಗಿ: ಕಲಿಯುವಿಕೆಯಲ್ಲಿ ಹಿಂದೆ ಬಿದ್ದಿದ್ದ ನಾಲ್ವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮೆಣೆದಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣ ಗೋಡೆ ಜಿಗಿದು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಷ್ಟಗಿ ತಾಲೂಕಿನ ಎಂ.ರಾಂಪುರ ಗ್ರಾಮದ ಮನು ದೇವಪ್ಪ, ಗುಮಗೇರಾ ಗ್ರಾಮದ ನೀಲಕಮಠಪ್ಪ ನಿಂಗಪ್ಪ ಹೊಸಮನಿ, ಯಲಬುರ್ಗಾ ತಾಲೂಕಿನ ಚಿಕ್ಕ ವಂಕಲಕುಂಟ ಗ್ರಾಮದ ಗುರುರಾಜ್ ಹನಮಂತಪ್ಪ ಪರಿಯವರ. ಯಲಬುರ್ಗಾ ಪಟ್ಟಣದ ವಿಶ್ವ ಮಾರುತೆಪ್ಪ ಕಳೆದ ಸೋಮವಾರ ರಾತ್ರಿ 10ಕ್ಕೆ ನಾಪತ್ತೆಯಾದ ವಿದ್ಯಾರ್ಥಿಗಳು. ಈ ಪ್ರಕರಣದ ಹಿನ್ನೆಲೆಯಲ್ಲಿ ಪ್ರಾಚಾರ್ಯ ಕೊಟ್ರೇಶ ತಳವಾರ ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಗಿದ್ದೇನು?:
ಮಾ.20ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಯಾದ ಹಿನ್ನೆಲೆಯಲ್ಲಿ ಓದಿನ ಕಡೆಗೆ ಆಸಕ್ತಿ ಕಡಿಮೆ ಇದ್ದ ಈ ವಿದ್ಯಾರ್ಥಿಗಳು, ಪರೀಕ್ಷೆ ಎದುರಿಸಲಾಗದೇ, ಅನುತ್ತೀರ್ಣರಾಗುವ ಭೀತಿಗೆ ವಸತಿ ನಿಲಯದಿಂದ ಕಾಲ್ಕಿತ್ತಿದ್ದಾರೆ. ಈ ನಾಲ್ವರು ತಮ್ಮ ಬ್ಯಾಗಿನಲ್ಲಿ ಬಟ್ಟೆಗಳೊಂದಿಗೆ ಕಾಲ್ಕಿತ್ತರೆ ಅನುಮಾನ ಮರೆ ಮಾಚಲು ಒಂದೇ ಬ್ಯಾಗಿನಲ್ಲಿ ಬಟ್ಟೆಗಳ ಇಟ್ಟುಕೊಂಡು ನಾಪತ್ತೆಯಾಗಿದ್ದಾರೆ.
ವಸತಿ ನಿಲಯದ ಆವರಣದ ಗೋಡೆ ಜಿಗಿದು, ಪರಾರಿಯಾಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಓದಿನಲ್ಲಿ ಹಿಂದೆ ಇದ್ದ ಈ ನಾಲ್ವರು ವಿದ್ಯಾರ್ಥಿಗಳು ದುಡಿಯುವ ಬಗ್ಗೆ ಮಾತಾಡಿಕೊಳ್ಳುತ್ತಿದ್ದರೆಂದು ಗೊತ್ತಾಗಿದೆ. ಈ ನಾಲ್ವರು ವಿದ್ಯಾರ್ಥಿಗಳು ವಸತಿ ನಿಲಯದ ಪಕ್ಕದ ತೋಟದ ಪೇರಲ ಹಣ್ಣುಗಳ ಕಿತ್ತುಕೊಂಡು ಬರಲು ಆಗಾಗ್ಗೆ ಆವರಣ ಗೋಡೆ ಹಾರಿದ್ದರು. ಅದೇ ರೀತಿ ಹೋಗಿದ್ದಾರೆಂದು ಊಹಿಸಲಾಗಿತ್ತು.
ಪ್ರಾಚಾರ್ಯ ಕೊಟ್ರೇಶ ತಳವಾರ ದೂರಿನ ಮೇರೆಗೆ ತಾವರಗೇರಾ ಪೊಲೀಸರು ಸದರಿ ವಿದ್ಯಾರ್ಥಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ವಿದ್ಯಾರ್ಥಿಗಳ ಸುಳಿವು ಸಿಕ್ಕಲ್ಲಿ 9480803258 ಸಂಪರ್ಕಿಸುವಂತೆ ತಾವರಗೇರಾ ಪಿಎಸ್‌ಐ ನಾಗರಾಜ ಕೋಟಗಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣ ವಿದ್ಯಾರ್ಥಿಗಳ ಪಾಲಕರಲ್ಲಿ ಕಳವಳ ಹೆಚ್ಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.