Sullia; ಆರೋಪಿ ತಾಯಿಯ ಅಪರಾಧ ಸಾಬೀತು; ಜ. 4ರಂದು ಶಿಕ್ಷೆ ಪ್ರಮಾಣ ಘೋಷಣೆ
ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಪ್ರಕರಣ
Team Udayavani, Jan 1, 2025, 6:45 AM IST
ಸುಳ್ಯ: ಸುಳ್ಯದಲ್ಲಿ ನಡೆದಿದ್ದ ತಾಯಿಯೊಬ್ಬಳು ತನ್ನ 5 ವರ್ಷ ಪ್ರಾಯದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ಜ. 4ರಂದು ನ್ಯಾಯಾಲಯ ಶಿಕ್ಷೆ ಪ್ರಮಾಣ ಘೋಷಿಸಲಿದೆ.
ಕಾವ್ಯಶ್ರೀ ಎಂಬವರು 2022ರ ಆ. 16ರಂದು ಸುಳ್ಯ ಗಾಂಧಿ ನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ವೈಯುಕ್ತಿಕ ವಿಚಾರವಾಗಿ ಬಿಸಿ ಮಾಡಿದ ಹಾಲಿನ ಪಾತ್ರೆಯನ್ನು 5 ವರ್ಷದ ತನ್ನ ಮಗಳ ಎಡ ಕೆನ್ನೆಗೆ, ಬಲ ಕೈ ತೋಳಿಗೆ, ಎಡ ಕೈ ಭುಜಕ್ಕೆ, ಎಡ ಕಾಲಿನ ತೊಡೆಗೆ ಸುಟ್ಟು ನೋವುಂಟು ಮಾಡಿ ಸಾದಾ ಸ್ವರೂಪದ ಗಾಯವುಂಟು ಮಾಡಿದ್ದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಂರಕ್ಷಣ ಅ ಧಿಕಾರಿಯಾಗಿದ್ದ ರಶ್ಮಿ ಅವರಿಗೆ ವಿಷಯ ಗೊತ್ತಾಗಿ ಅವರು ಸ್ಥಳಕ್ಕೆ ಭೇಟಿ ಮಾಡಿ ಆ ಬಳಿಕ ಸುಳ್ಯ ಠಾಣೆಯಲ್ಲಿ ತಾಯಿ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಪಾದಿತ ಮಹಿಳೆ ಅಪರಾಧ ಎಸಗಿರುವುದು ಸಾಬಿತಾಗಿದ್ದು, ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಬಿ.ಮೋಹನ್ ಬಾಬು ಅವರು ಆಪಾದಿತೆಯನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ.
ಶಿಕ್ಷೆಯ ಪ್ರಮಾಣವನ್ನು ಜ. 4ರಂದು ನ್ಯಾಯಾಲಯ ಘೋಷಿಸಲಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.