Mangaluru: ಮುಂಗಾರಿನಂತೆ ಹಿಂಗಾರಿನಲ್ಲೂ ಅತ್ಯಧಿಕ ವರ್ಷಧಾರೆ
Team Udayavani, Jan 1, 2024, 6:55 AM IST
ಮಂಗಳೂರು: ಈ ಬಾರಿಯ ಹಿಂಗಾರು ಅವಧಿ ಪೂರ್ಣಗೊಂಡಿದ್ದು, ಕರಾವಳಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ಸುರಿದಿದೆ.
ವಾಡಿಕೆಯಂತೆ 259.3 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 392.7 ಮಿ.ಮೀ. ಮಳೆಯಾಗಿ ಶೇ.51ರಷ್ಟು ಮಳೆ ಹೆಚ್ಚಾಗಿದೆ.
ಕರಾವಳಿಯಲ್ಲಿ ಕಳೆದ ವರ್ಷವೂ ಉತ್ತಮ ಹಿಂಗಾರು ಮಳೆಯಾಗಿ ಶೇ.6ರಷ್ಟು ಮಳೆ ಏರಿಕೆ ಕಂಡಿತ್ತು. ಈ ಬಾರಿ ಶೇ.51ರಷ್ಟು ಹೆಚ್ಚಾಗಿದೆ.
ರಾಜ್ಯಕ್ಕೆ ಹೋಲಿಸಿದರೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.45 ಹೆಚ್ಚಳ, ಉತ್ತರ ಒಳನಾಡಿನಲ್ಲಿ ಶೇ.5 ಹೆಚ್ಚಳ, ಮಲೆನಾಡಿನಲ್ಲಿ ಶೇ.42 ಮತ್ತು ಕರಾವಳಿಯಲ್ಲಿ ಶೇ.51ರಷ್ಟು ಮಳೆ ಹೆಚ್ಚಳವಾಗಿದೆ. ಒಟ್ಟಾರೆ ರಾಜ್ಯದಲ್ಲಿ ಶೇ.31ರಷ್ಟು ಮಳೆ ಏರಿಕೆ ಕಂಡಿದೆ.
ಅಕ್ಟೋಬರ್ 1 ರಿಂದ ಡಿಸೆಂಬರ್ ಅಂತ್ಯದವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 376 ಮಿ.ಮೀ. ಮಳೆ ಸುರಿಯಬೇಕು. 523 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ.39 ರಷ್ಟು ಅಧಿಕ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ 312 ಮಿ.ಮಿ. ವಾಡಿಕೆ ಗುರಿಯಲ್ಲಿ 473 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.52 ಹೆಚ್ಚಾಗಿದೆ.
ತಾಲೂಕುಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಶೇ.27, ಬಂಟ್ವಾಳದಲ್ಲಿ ಶೇ.37, ಮಂಗಳೂರಿನಲ್ಲಿ ಶೇ.20, ಪುತ್ತೂರಿನಲ್ಲಿ ಶೇ.41, ಸುಳ್ಯದಲ್ಲಿ ಶೇ.53, ಮೂಡುಬಿದಿರೆ ಶೇ.51, ಕಡಬ ಶೇ.58, ಮುಲ್ಕಿ ಶೇ.26, ಉಳ್ಳಾಲ ಶೇ.53, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶೇ.29, ಕುಂದಾಪುರ ಶೇ.102, ಉಡುಪಿ ಶೇ.43, ಬೈಂದೂರು ಶೇ.51, ಬ್ರಹ್ಮಾವರ ಶೇ.10, ಕಾಪು ಶೇ.17, ಹೆಬ್ರಿ ಶೇ.92 ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ.
ಮುಂಗಾರಿನಲ್ಲಿ ಅಧಿಕ ಮಳೆ
ಕರಾವಳಿಯಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮುಂಗಾರು ಋತುವಿನಲ್ಲಿ 3101 ಮಿ.ಮೀ. ವಾಡಿಕೆ ಮಳೆಯಲ್ಲಿ 3736 ಮಿ.ಮೀ. ಮಳೆಯಾಗಿತ್ತು. ದ.ಕ. ಜಿಲ್ಲೆಯಲ್ಲಿ ಶೇ.11, ಉಡುಪಿ ಜಿಲ್ಲೆಯಲ್ಲಿ ಶೇ.13 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.31ರಷ್ಟು ಮಳೆ ವಾಡಿಕೆಗಿಂತ ಅಧಿಕ ಸುರಿದಿತ್ತು. ಒಟ್ಟಾರೆ ಕರಾವಳಿ ಭಾಗದಲ್ಲಿ ಶೇ.20ರಷ್ಟು ಅಧಿಕ ಸುರಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ