BBK11: ಸಂಭ್ರಮದ ಮನೆಯಾದ ಬಿಗ್ ಬಾಸ್ ಮನೆ: ಸ್ಪರ್ಧಿಗಳು ಫುಲ್ ಖುಷ್
Team Udayavani, Dec 31, 2024, 11:03 PM IST
ಬೆಂಗಳೂರು: ಬಿಗ್ ಬಾಸ್ ಮನೆಗೆ ಮನೆಯವರ ಬಂದು ಸ್ಪರ್ಧಿಗಳ ಉತ್ಸಾಹ – ಹುಮ್ಮಸ್ಸನ್ನು ಹೆಚ್ಚಿಸಿದ್ದಾರೆ. ಮನೆಮಂದಿಯ ಆಗಮನದಿಂದ ಸ್ಪರ್ಧಿಗಳ ಆತ್ಮವಿಶ್ವಾಸ ಹೆಚ್ಚಾಗಿದೆ.
ಡಾಕ್ಟರ್ ಅವರಂತೆ ಕನ್ಫೆಷನ್ ಕೋಣೆಗೆ ಭವ್ಯ ಅವರ ಅಕ್ಕ ದಿವ್ಯ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರನ್ನು ನೋಡಿ ಮನೆಮಂದಿ ಖುಷ್ ಆಗಿದ್ದಾರೆ.
ಭವ್ಯ ಮನೆಮಂದಿಯ ಎಲ್ಲರನ್ನು ಪರಿಚಯಿಸಿದ್ದಾರೆ. ಇತ್ತ ತ್ರಿವಿಕ್ರಮ್ ಅವರಿಗೆ ರಜತ್ ಹಾಗೂ ಇತರರು ತಮಾಷೆ ಮಾಡಿದ್ದಾರೆ.
ಎಲ್ಲರ ಜತೆ ಬೆರೆತು ಆಟ ಆಡು. ವೈಯಕ್ತಿಕವಾಗಿ ಹೇಗೆ ಆಡಬೇಕೆನ್ನುವುದನ್ನು ನೋಡು. ಗೇಮ್ ಕಡೆ ಫೋಕಸ್ ಮಾಡು. ನಿನ್ನ ನಿರ್ಧಾರವನ್ನು ನೀನು ತೆಗೆದುಕೊಳ್ಳುವುದನ್ನು ಕಲಿ ಎಂದು ದಿವ್ಯ ತಂಗಿಗೆ ಸಲಹೆ ನೀಡಿದ್ದಾರೆ.
ನನಗಾಗಿ ನನ್ನ ಅಕ್ಕ ತುಙ ತ್ಯಾಗ ಮಾಡಿದ್ದಾಳೆ. ಜನ ಇವತ್ತು ನನ್ನನ್ನು ಕಲಾವಿದೆ ಅಂಥ ಗುರುತಿಸಿವುದಕ್ಕೆ ನನ್ನ ಅಕ್ಕನೇ ಕಾರಣವೆಂದು ಭವ್ಯ ಭಾವುಕರಾಗಿದ್ದಾರೆ.
ಭವ್ಯ ಅವರ ಅಕ್ಕನ ಮಗಳು ಬಂದು ಎಲ್ಲರಿಗೂ ಪತ್ರಕೊಟ್ಟು ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.
ಭವ್ಯ ತನ್ನ ಅಮ್ಮನನ್ನು ತಬ್ಬಿಕೊಂಡು ಆನಂದಬಾಷ್ಪ ಸುರಿಸಿದ್ದಾರೆ. ತಾಯಿಯನ್ನು ನೋಡಿ ಪುಟ್ಟ ಮಗುವಿನಂತೆ ಭವ್ಯ ಅತ್ತಿದ್ದಾರೆ.
ಭವ್ಯ ಅವರ ಮನೆಯಿಂದ ರುಚಿಕರವಾದ ಊಟ – ತಿಂಡಿಯನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಕೊಡಲಾಗಿದೆ.
ತ್ರಿವಿಕ್ರಮ್ ಅವರ ಅಮ್ಮ ಬಿಗ್ ಬಾಸ್ ಮನೆಗೆ ಬಂದಿದ್ದು, ಅವರನ್ನು ಭೇಟಿ ಆಗಬೇಕೆಂದರೆ ತ್ರಿವಿಕ್ರಮ್ ಅವರು ಫೋಟೋವುಳ್ಳ ಪಜಲ್‌ನ್ನು ಜೋಡಿಸಬೇಕು. 10 ನಿಮಿಷದೊಳಗಡೆ ಪಜಲ್ ಪೂರ್ಣಗೊಳಿಸುವಲ್ಲಿ ತ್ರಿವಿಕ್ರಮ್ ಅವರು ವಿಫಲರಾಗಿದ್ದಾರೆ. ಆ ಕಾರಣದಿಂದ ಅವರು ಕಣ್ಣೀರಿಟ್ಟು ಇನ್ನೊಂದು ಚಾನ್ಸ್ ಕೊಡಿ ಬಿಗ್ ಬಾಸ್ ಎಂದು ಮನವಿ ಮಾಡಿದ್ದಾರೆ.
ತ್ರಿವಿಕ್ರಮ್ ಅವರ ಅಮ್ಮ ಭವ್ಯ ಅವರ ಜತೆ ಮಾತನಾಡಿ, ನನ್ನ ಮಗನನ್ನು ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ. ರಾಧಾ – ಕೃಷ್ಣನ ತರ ಇದ್ದೀರಾ. ಅಂದ್ರೆ ಲವರ್ ಅಲ್ಲ. ಅವನು ಯಾರಿಗೆ ಪ್ರೀತಿ ತೋರಿಸುತ್ತಾನೆ ಅವರಿಗೆ ಪ್ರೀತಿ ತೋರಿಸುತ್ತಾನೆ ಎಂದು ಹೇಳಿದ್ದಾರೆ.
ಅಮ್ಮನ ಫೋಟೋ ಜೋಡಿಸೋಕೆ ಕೊಟ್ಟಿದ್ರು ನನ್ನಿಂದ ಮಾಡೋಕೆ ಆಗಿಲ್ಲವೆಂದು ಮನೆಮಂದಿ ಮುಂದೆ ತ್ರಿವಿಕ್ರಮ್ ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದಾದ ಬಳಿಕ ತ್ರಿವಿಕ್ರಮ್ ಅವರ ತಾಯಿಯನ್ನು ಮನೆಯೊಳಗೆ ಪುನಃ ಕರೆಸಲಾಗಿದೆ. ತಾಯಿ ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ.
ಚೆನ್ನಾಗಿ ಆಡುತ್ತಾ ಇದ್ದೀಯಾ ಇನ್ನೂ ಚೆನ್ನಾಗಿ ಆಡು. ನಿನ್ನ ಆಟವನ್ನು ಮಾತ್ರ ಆಡು. ನಿನ್ನ ಜನಗಳಿಗೋಸ್ಕರ ಆಡು. ನಿರಾಶೆ ಮಾಡ್ಬೇಡ. ನಿನ್ನ ಆಟವನ್ನು ಬೇರೆ ಅವರಿಗೆ ಬಿಟ್ಟುಕೊಡಬೇಡ. ಇದು ಕ್ರಿಕೆಟ್ ಆಟವಲ್ಲ ಒಬ್ಬರು ಗೆದ್ದು ಎಲ್ಲರೂ ಗೆದ್ದಂಗೆ ಅಲ್ಲ. ಟ್ರೋಫಿ ಗೆದ್ದುಕೊಂಡು ಬಾ. ನನ್ನ ಹರಕೆ ಪೂರ್ತಿ ಆಗಬೇಕು. ಮಂತ್ರಾಲಯಕ್ಕೆ ಹೋಗಿ ಬರ್ತಿನಿ ಎಂದು ತ್ರಿವಿಕ್ರಮ್ ಗೆ ಅವರ ತಾಯಿ ಹೇಳಿದ್ದಾರೆ.
ರಜತ್ ಅವರ ಪತ್ನಿ ಮಕ್ಕಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ನನ್ನ ಮಕ್ಕಳು ಎಲ್ಲಿದ್ದಾರೆ ಎಂದು ಪತ್ನಿಯ ಬಳಿ ಕೇಳಿದ್ದಾರೆ. ನನ್ನ ಮಕ್ಕಳನ್ನು ಕಳುಹಿಸಿ ಕೊಡಿ ಬಿಗ್ ಬಾಸ್ ಎಂದು ರಜತ್ ಕೇಳಿದ್ದಾರೆ.
ಚೆನ್ನಾಗಿ ಆಡ್ತಾ ಇದ್ದೀಯಾ ಆದರೆ ಒಂದೇ ಕ್ಷಣದಲ್ಲಿ ನೀನು ಕೋಪ ಮಾಡಿಕೊಂಡು ಎಲ್ಲವನ್ನು ಕಳೆದುಕೊಳ್ಳುತ್ತೀಯಾ ಎಂದು ಪತ್ನಿ ರಜತ್ ಗೆ ಹೇಳಿದ್ದಾರೆ.
ತನ್ನ ಮುದ್ದು ಮಕ್ಕಳನ್ನು ನೋಡಿ ರಜತ್ ಅಪ್ಪಿಕೊಂಡು ಖುಷಿಯಿಂದ ಕಣ್ಣೀರಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!
BBK11: ಕೋಪದಿಂದ ಅರ್ಧದಲ್ಲೇ ಬಿಗ್ ಬಾಸ್ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್
BBK11: ನೀವೆಷ್ಟು ಕಳಪೆ ಕೊಟ್ರು ನನ್ನ ಮಗಳು ನಮಗೆ ಉತ್ತಮನೇ- ಚೈತ್ರಾ ತಾಯಿ ಭಾವುಕ ನುಡಿ
ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.