Sri Kukke Subrahmanya ಕ್ಷೇತ್ರದಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ
Team Udayavani, Jan 1, 2025, 6:45 AM IST
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಹೊಸ ವರ್ಷದ ಅಂಗವಾಗಿ ಭಕ್ತರು ಪುಷ್ಪಾಲಂಕಾರ ಸೇವೆ ನೆರವೇರಿಸಿದ್ದಾರೆ.
ಬೆಂಗಳೂರಿನ ಭಕ್ತರು ನಿರಂತರವಾದ 7ನೇ ವರ್ಷದ ತಮ್ಮ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದ್ದಾರೆ. ಸುಮಾರು 9 ಲಕ್ಷ ರೂ. ವೆಚ್ಚದ ಹೂವುಗಳನ್ನು ಉಪಯೋಗಿಸಿಕೊಂಡು ಸಿಂಗಾರ ಮಾಡಿದ್ದಾರೆ. ತೆಂಗಿನ ಸಿರಿ, ತರಕಾರಿ, ಹಣ್ಣುಗಳು ಮತ್ತು 6 ಬಗೆಯ ಹೂವನ್ನು ಉಪಯೋಗಿಸಿಕೊಂಡು ಶ್ರೀ ದೇಗುಲವನ್ನು ಅಲಂಕೃತಗೊಳಿಸಲಾಗಿದೆ.
ಬೆಂಗಳೂರಿನ ಉದ್ಯಮಿಗಳಾದ ಟಿ.ಎನ್.ಮಂಜುನಾಥ್, ಉಮೇಶ್, ಬಾಲಾಜಿ, ಶರತ್ ಬಾಬು ನೇತೃತ್ವದ ತಂಡ ಈ ಸೇವೆ ನೆರವೇರಿಸಿದೆ.
ದೇಗುಲದ ಒಳಾಂಗಣ ಪ್ರವೇಶ ಸ್ಥಳದಲ್ಲಿ ಆಕರ್ಷಕ ದ್ವಾರವನ್ನು ನಿರ್ಮಿಸಿದ್ದಾರೆ. ತೆಂಗಿನ ಸಿರಿ ಮತ್ತು ತೆಂಗಿನ ಗರಿಯನ್ನು ಉಪಯೋಗಿಸಿಕೊಂಡು ಬೃಹತ್ ದ್ವಾರವನ್ನು ರಚಿಸಲಾಗಿದೆ. ಸುಬ್ರಹ್ಮಣ್ಯನ ವಾಹನವಾದ ನವಿಲನ್ನು ಸಿರಿ ಮತ್ತು ಗರಿಯಿಂದ ಮಾಡಿ ದ್ವಾರದ ಇಕ್ಕೆಲದಲ್ಲಿ ಇರಿಸಲಾಗಿದೆ. ದ್ವಾರದ ಎದುರು ಅರ್ಧಚಂದ್ರಾಕೃತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಇದರ ಮೇಲೆ ಷಣ್ಮುಖನ ಪುತ್ಥಳಿಯನ್ನು ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.