2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು


Team Udayavani, Jan 1, 2025, 10:27 AM IST

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

ಹೊಸ ವರ್ಷ 2025ರ ಆಗಮನವಾಗಿದೆ. ಕನ್ನಡ ಚಿತ್ರರಂಗ ಕೂಡಾ ಹೊಸ ಕನಸುಗಳೊಂದಿಗೆ ಎದುರು ನೋಡುತ್ತಿದೆ. ಹಾಗೆ ನೋಡಿದರೆ 2024 ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಗೆಲುವು ತಂದುಕೊಟ್ಟ ವರ್ಷವಲ್ಲ. ತ್ರಾಸದಾಯಕ ಗೆಲುವು ಕಂಡ ವರ್ಷ. ಅದೇ ಕಾರಣದಿಂದ 2025ರ ಮೇಲೆ ಚಂದನವನ ಬಹುನಿರೀಕ್ಷೆಯಿಂದ ಕಾಯುತ್ತಿದೆ. ಸಿನಿಮಾ ಪ್ರತಿ ವಿಭಾಗದ ಮಂದಿಯ ಕಣ್ಣಲ್ಲಿ ಕನಸು ಇದೆ. ಸಿನಿಮಾದ ಪ್ರಮುಖ ಆರು ವಿಭಾಗಗಳಾದ ನಿರ್ಮಾಣ, ನಿರ್ದೇಶನ, ನಟನೆ (ನಾಯಕ-ನಾಯಕಿ), ಸಂಗೀತ, ಛಾಯಾಗ್ರಹಣ ಹಾಗೂ ಸಂಕಲನದ ವಿಭಾಗಗಳ ಪರಿಣಿತರು ಹೊಸ ವರ್ಷದ ಕುರಿತಾದ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಎಲ್ಲರದ್ದೂ ಒಂದೇ ಆಶಯ, ಸಿನಿಮಾ ಗೆಲ್ಲಬೇಕು, ಸ್ಯಾಂಡಲ್‌ವುಡ್‌ ಮಿಂಚಬೇಕು ಎನ್ನುವುದು. ಜೊತೆಗೆ ಸಿನಿಮಾ ಪ್ರೇಕ್ಷಕರನ್ನು ದೂರುವ ಬದಲು ತಮ್ಮಲ್ಲಿನ ಲೋಪವನ್ನು ಸರಿಪಡಿಸಿಕೊಂಡೇ ಪ್ರೇಕ್ಷಕರ ಮುಂದೆ ಬರಬೇಕು, ಆಗ ಮಾತ್ರ ಗೆಲುವು ಸಾಧ್ಯ ಎಂಬುದು. ಹೀಗೆ ಹೊಸ ವರ್ಷದ ನಿರೀಕ್ಷೆಯ ಕುರಿತಾದ ಅವರ ಮಾತುಗಳು ಇಲ್ಲಿವೆ…

ಸಿನಿಮಾರಂಗವನ್ನು ದೂಷಿಸಬೇಡಿ:

ಕನ್ನಡ ಚಿತ್ರರಂಗದಲ್ಲಿ ಮೊದಲು ಇದ್ದ ಹಾಗೆ ಯಶಸ್ಸಿನ ಅಲೆ ಇದೆ. ಆದರೆ, ನಿರ್ಮಾಪಕರು ಕೆಲ ನಿರ್ದೇಶಕರ ಮಾತು ಕೇಳಿಕೊಂಡು ತೊಂದರೆಗೆ ಒಳಗಾಗುತ್ತಿದ್ದಾರೆ. ಚಿತ್ರರಂಗದಲ್ಲಿ ಕೆಲವು ಮಧ್ಯವರ್ತಿಗಳು ಒಟಿಟಿ, ಸ್ಯಾಟಲೈಟ್‌ ಬಗ್ಗೆ ನಂಬಿಸಿ, ಹಾದಿ ತಪ್ಪಿಸುತ್ತಿದ್ದಾರೆ. ಇವು ಸ್ಟಾರ್‌ ನಟರಿಗೆ ಮಾತ್ರ ಕೆಲವೊಮ್ಮೆ ಅನ್ವಯವಾಗುತ್ತದೆ. ಡಿಜಿಟಲ್‌, ಒಟಿಟಿ ಇವು ಎಲ್ಲ ಸಮಯದಲ್ಲೂ ವಕೌìಟ್‌ ಆಗಲ್ಲ. ಈ ಜಂಜಡದಿಂದ ನಿರ್ದೇಶಕರು, ನಿರ್ಮಾಪಕರು ಹೊರಬಂದು, ಪ್ರೇಕ್ಷಕರನ್ನು ನಂಬಿ, ಅವರಿಗಾಗಿ ಸಿನಿಮಾ ಮಾಡಬೇಕು. ಡಾ. ರಾಜಕುಮಾರ್‌, ಡಾ. ವಿಷ್ಣುವರ್ಧನ್‌ ಹೇಗೆ ಪ್ರೇಕ್ಷಕ ಮಹಾಪ್ರಭುಗಳನ್ನು ನಂಬಿದ್ದರೋ, ನಾವು ಅವರನ್ನು ನಂಬಬೇಕು. ಅಂದಾಗ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ, ನಮಗೂ ಅನ್ನ ಸಿಗುತ್ತದೆ. ಚಿತ್ರರಂಗವನ್ನು ದೂರುವುದನ್ನು ಬಿಡಬೇಕು. ಕೆ. ಮಂಜು, ನಿರ್ಮಾಪಕ

ಪ್ರೇಕ್ಷಕರ ಮೇಲೆ ಆಪಾದನೆ ಬೇಡ:

ಕನ್ನಡ ಚಿತ್ರಗಳಿಗೆ ಜನ ಬರುತ್ತಿಲ್ಲ ಎಂಬ ಭ್ರಮೆಯಲ್ಲಿ ಸಿನಿಮಾದವರು ಖನ್ನತೆಗೆ ಒಳಗಾಗಬಾರದು. ಜನ ಬಂದು ಬಂದೇ ನಾವೆಲ್ಲ ಬದುಕಿ ರೋದು. ಪ್ರತಿ ವರ್ಷ ಆರಂಭಕ್ಕೆ ಜನ ತುಂಬ ಉತ್ಸಾಹದಲ್ಲಿ ರುತ್ತಾರೆ. ನಾವು ಒಳ್ಳೆಯ ಸಿನಿಮಾ ಮಾಡಿ, ಅವರಿಗೆ ಕೊಡಬೇಕೆ ಹೊರತು, ಅವರ ಮೇಲೆ ನಾವು ಆಪಾದನೆ ಹೇರಬಾರದು. ಯು-ಐ, ಮ್ಯಾಕ್ಸ್‌ ಚೆನ್ನಾಗಿ ಓಡುತ್ತಿವೆ. ಕಾಂತಾರ 2, ಟಾಕ್ಸಿಕ್‌ ಸಿನಿಮಾಗಳ ಬಗ್ಗೆಯೂ ಬಹಳ ಚರ್ಚೆ ಮಾಡುತ್ತಿದ್ದಾರೆ. ಸುಮ್ಮನೆ ಜನರನ್ನು ದೂರುವುದು ಸರಿಯಲ್ಲ. ಯೋಗರಾಜ್‌ ಭಟ್‌, ನಿರ್ದೇಶಕ, ನಿರ್ಮಾಪಕ

ಹೊಸದು ಕೊಡಲು ಪ್ರಯತ್ನಿಸೋಣ: ಇವತ್ತು ಪ್ರೇಕ್ಷಕರಿಗೆ ಬೇಕಾಗಿರೋದು ಹೊಸತನ. ಆ ವಿಚಾರದಲ್ಲಿ ಚಿತ್ರರಂಗ ಗಮನ ಹರಿಸಬೇಕು. ಅದು ಬಿಟ್ಟು ಅಮೆಜಾನ್‌, ನೆಟ್‌ಪ್ಲಿಕ್ಸ್‌ ಎಂದು ತಡಕಾಡಿದರೆ ಅದರಿಂದ ನಮ್ಮ ಕಂಟೆಂಟ್‌ ಕೆಡಬಹುದೇ ಹೊರತು ಬೇರೇನು ಲಾಭವಿಲ್ಲ. ಜನ ಹೊಸ ಕಂಟೆಂಟ್‌ ಕೊಟ್ಟಾಗ ಯಾವತ್ತೂ ರಿಜೆಕ್ಟ್ ಮಾಡಿಲ್ಲ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಜನರ ಕೈಯಲ್ಲೇ ಮನರಂಜನೆ ಇದೆ. ಹೀಗಿರುವಾಗ ನಾವು ಹೊಸದೆಂದು ಹೇಳಿ ಅಲ್ಲಿಂದ ಇಲ್ಲಿಂದ ತೆಗೆದುಕೊಟ್ಟರೆ ನಮಗೆ ತೊಂದರೆಯಾದೀತು. ಆ ನಿಟ್ಟಿನಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ. ದುನಿಯಾ ವಿಜಯ್‌, ನಟ, ನಿರ್ದೇಶಕ

ಗೆಲುವು ಡಬಲ್‌ ಆಗಲಿ:

ಹೊಸ ವರ್ಷಕ್ಕೆ ಚಿತ್ರರಂಗ ಖುಷಿಯಾಗಿರಬೇಕು. ಈ ವರ್ಷವೂ ಭೀಮ, ಕೃಷ್ಣಂ ಪ್ರಣಯ ಸಖೀ, ಯು-ಐ, ಮ್ಯಾಕ್ಸ್‌ ಹೀಗೆ ಹಲವು ಸಿನಿಮಾಗಳು ಗೆದ್ದಿವೆ. ಮುಂದಿನ ವರ್ಷ ಈ ಗೆಲುವು ಡಬಲ್‌ ಆಗಲಿ ಎಂಬುದು ನನ್ನ ಬಯಕೆ. ಪ್ರೇಕ್ಷಕರು ಕನ್ನಡ ಸಿನಿಮಾಗಳಿಗೆ ಕೈ ಹಿಡಿದರೆ, ಕನ್ನಡ ಚಿತ್ರರಂಗ ಬೆಳವಣಿಗೆಯೂ ಉನ್ನತಿಯಾಗುತ್ತದೆ. ನಿರ್ದೇಶಕರು, ತಂತ್ರಜ್ಞರಿಗೆ ಹೊಸ ಹುಮ್ಮಸ್ಸು ಬರುತ್ತೆ. ಕೆ. ಎಂ. ಪ್ರಕಾಶ್‌, ಸಂಕಲನಕಾರ

ಮಾಸ್‌-ಕ್ಲಾಸ್‌ ಎಲ್ಲ ಜಾನರ್‌ ಸಿನಿಮಾ ಬರಲಿ:

2024 ವರ್ಷಾಂತ್ಯಕ್ಕೆ ಯು-ಐ, ಮ್ಯಾಕ್ಸ್‌ ಸಿನಿಮಾಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡು, ಯಶಸ್ವಿ ಪ್ರದರ್ಶನ ಕಾಣುತ್ತಿವೆ. 2025ರಲ್ಲೂ ಈ ಗೆಲುವಿನ ಸಂಭ್ರಮ ಹೀಗೆ ಮುಂದುವರೆಯಲಿ. ಹೊಸ ವರ್ಷಕ್ಕೆ ಹೊಸ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಪ್ರೇಕ್ಷಕರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾ ಆನಂದಿಸಲಿದ್ದಾರೆ. ಈಗ ಕನ್ನಡದಲ್ಲಿ ಒಳ್ಳೆಯ ಕಂಟೆಂಟ್‌ ಸಿನಿಮಾಗಳು ಬರುತ್ತಿವೆ, ಅದಕ್ಕೆ ಪ್ರೇಕ್ಷಕರಿಂದಲೂ ಪ್ರೋತ್ಸಾಹ ಸಿಗುತ್ತಿದೆ. ಕನ್ನಡ ಸಿನಿಮಾ ಅಭಿಮಾನಿಯಾಗಿ ನನಗೆ ರೊಮ್ಯಾಂಟಿಕ್‌ ಡ್ರಾಮಾ ಕಥೆಗಳು ಇಷ್ಟ. ಆ ರೀತಿ ಸಿನಿಮಾ, ಮಾಸ್‌ ಹೀಗೆ ಎಲ್ಲ ಜಾನರ್‌ ಸಿನಿಮಾಗಳು ಬರಲಿ. ರುಕ್ಮಿಣಿ ವಸಂತ್‌, ನಟಿ

ಹೆಚ್ಚು ಸಿನಿಮಾಗಳು ಗೆಲ್ಬೇಕು :

2025 ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಬೇಕು. ಅದು ಸಣ್ಣ ಅಥವಾ ದೊಡ್ಡ ಸಿನಿಮಾವಿರಲಿ ಚಿತ್ರಮಂದಿ ರದಲ್ಲಿ ಓಡಬೇಕು. ಹೆಚ್ಚು ಜನರನ್ನು ತಲುಪಿದಾಗ, ಓಟಿಟಿಯವರೇ ಹುಡುಕಿಕೊಂಡು ಬರುತ್ತಾರೆ. ಅದ ಕ್ಕಾಗಿ ಒಳ್ಳೆ ಕಥೆ, ಮನರಂಜನೆಯ ಸಿನಿಮಾ ಬರಬೇಕು. ಬಂದಾಗ ಜನ ಅದರ ಬಗ್ಗೆ ಮಾತಾಡಬೇಕು. ಕನಿಷ್ಟ 5-6 ಸಿನಿಮಾ ಗಳು ಬ್ಯಾಕ್‌ ಟು ಬ್ಯಾಕ್‌ ಯಶ ಕಂಡರೆ, ಹೊಸ ಹೂಡಿಕೆದಾರರೂ ಸಿಗುತ್ತಾರೆ. ●ಸತ್ಯ ಹೆಗ್ಡೆ, ಛಾಯಾಗ್ರಾಹಕ

ಯೋಚಿಸುವ ಶೈಲಿಯೇ ಭಿನ್ನವಾಗಿರಲಿ: 

ಸಿನಿಮಾಗಳಲ್ಲಿ ನಟನೆ, ಛಾಯಾಗ್ರಹಣ, ಸಂಕಲನ ಎಲ್ಲದರಲ್ಲೂ ಒಂದು ಜೋಶ್‌ ಇರಬೇಕು. ಸಂಗೀತದಲ್ಲೂ ಹಾಗೆ, ಹಾಡು ಬರೆಯುವು ದರಿಂದ ಸಂಗೀತ ನೀಡುವವರೆಗೆ ಒಂದು ರೀತಿಯ ಆಕ್ರಮಣಶೀಲ ಮನೋಭಾವ ಇರಬೇಕು. ನಾವು ಯೋಚನೆ ಮಾಡುವ ಶೈಲಿ ಕೂಡ ಹಾಗೆ ಇರುವುದರ ಜೊತೆಗೆ, ಸಿನಿಮಾ ಮಾಡುವವರ ಕೌಶಲ್ಯ ಹೆಚ್ಚಬೇಕು. ಕನ್ನಡ ಚಿತ್ರರಂಗಕ್ಕೆ ಹೊಸತನ್ನು ಸ್ವೀಕರಿಸುವ ಸಾಮರ್ಥ್ಯವಿದೆ. ಅದರಂತೆ ಚಿತ್ರಗಳು ನಿರ್ಮಾಣ ವಾಗಬೇಕು. ಅಜನೀಶ್‌ ಲೋಕನಾಥ್‌, ಸಂಗೀತ ನಿರ್ದೇಶಕ

ಟಾಪ್ ನ್ಯೂಸ್

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ

India Cricket: The star all-rounder announced his retirement from limited over cricket

India Cricket: ಸೀಮಿತ ಓವರ್‌ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ ರೌಂಡರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.