Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್
ಸಿಬ್ಬಂದಿಗಳಿಗೆ ಕೆಲಸದ ಒತ್ತಡ, ಮಾನಸಿಕ ಕಿರುಕುಳ; ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಗ್ರಾ.ಪಂ.
Team Udayavani, Jan 1, 2025, 1:26 PM IST
ಹಿರಿಯಡಕ: ಉಡುಪಿ ತಾಲೂಕಿನ 23ನೇ ಬೈರಂಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಗಳಿಲ್ಲದ ಕಾರಣ ಪಂಚಾಯತ್ ಬಾಗಿಲು ಮುಚ್ಚಲಾಗಿದೆ.
ಡಿ. 19 ರ ಗುರುವಾರ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸದ ಒತ್ತಡ, ಮಾನಸಿಕ ಕಿರುಕುಳದಿಂದ ಕಾರ್ಯನಿರ್ವಹಿಸಲು ಸಂಕಷ್ಟವಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪತ್ರ ಸಲ್ಲಿಸಿದ್ದರು.
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ, ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಜ.1ರ ಬುಧವಾರ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಕಚೇರಿಗೆ ಹಾಜರಾಗಿಲ್ಲ.
ಸಿಬ್ಬಂದಿಗಳ ರಾಜೀನಾಮೆ ವಿಷಯ ತಿಳಿಯದೆ ತಮ್ಮ ಕೆಲಸಕ್ಕಾಗಿ ಗ್ರಾಮ ಪಂಚಾಯತ್ ಕಚೇರಿಗೆ ಬಂದು ಸಾರ್ವಜನಿಕರು ಬಾಗಿಲಿಗೆ ಬೀಗ ಹಾಕಿರುವುದು ಕಂಡು ವಾಪಸ್ ಹೋಗುವಂತಾಗಿದೆ.
ಯಾವುದೇ ಮಾಹಿತಿ ನೀಡದೆ ಕಚೇರಿ ಬಾಗಿಲು ತೆರೆಯದೆ ಇರುವುದನ್ನು ಕಂಡ ಸಾರ್ವಜನಿಕರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…
Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.