ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಕ್ಯಾನ್ಸರ್‌ ಗೆದ್ದ ಶಿವಣ್ಣ..

Team Udayavani, Jan 1, 2025, 1:43 PM IST

ಇನ್ಮುಂದೆ ಶಿವಣ್ಣನಿಗೆ ಡಬಲ್‌ ಪವರ್‌ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್‌ ಹೀರೋ ಮಾತು

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ (Shivaraj Kumar) ಅವರು ಸರ್ಜರಿಯಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಅಮೆರಿಕದ ಮಿಯಾಮಿ ಆಸ್ಪತ್ರೆಯಲ್ಲಿ ಶಿವರಾಜ್‌ ಕುಮಾರ್ ಸರ್ಜರಿಗೆ ಒಳಗಾಗಿದ್ದರು. ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನು ತೆಗೆಯುವ ಮೂಲಕ ಸರ್ಜರಿ ಮಾಡಲಾಗಿತ್ತು.ಇದೀಗ ಚಿಕಿತ್ಸೆ ಪಡೆದ ಬಳಿಕ ಇದೇ ಮೊದಲ ಬಾರಿ ಶಿವರಾಜ್‌ ಕುಮಾರ್‌ ಮಾತನಾಡಿದ್ದಾರೆ.

ವಿಡಿಯೋ ಮಾಡಿ ಮಾತನಾಡಿರುವ ಅವರು,  “ಎಲ್ಲರಿಗೂ  ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ಸ್ವಲ್ಪ ಭಯ ಆಗುತ್ತದೆ ಮಾತನಾಡುವಾಗ ಸ್ವಲ್ಪ ಎಮೋಷನಲ್‌ ಆಗುತ್ತೇನೆ ಅಂಥ. ಹೊರಡುವಾಗ ಸ್ವಲ್ಪ ಭಾವುಕನಾಗಿದ್ದೆ. ಭಯ ಅನ್ನುವಂಥದ್ದು ಮನುಷ್ಯನಿಗೆ ಇದ್ದೇ ಇರುತ್ತದೆ. ಭಯ ನೀಗಿಸಲು ಕೆಲ ಅಭಿಮಾನಿಗಳು ಇದ್ದೇ ಇರುತ್ತಾರೆ. ಕೆಲ ಸಹ ಕಲಾವಿದರು ಇರುತ್ತಾರೆ. ಕೆಲ ಸ್ನೇಹಿತರು ಇರುತ್ತಾರೆ. ಸಂಬಂಧಿಕರು ಇರುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ವೈದ್ಯರು ಇರುತ್ತಾರೆ. ಪ್ರತಿಯೊಬ್ಬರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದಿದ್ದಾರೆ.

ʼ45ʼ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಆರಾಮವಾಗಿ ಇರ್ತಾ ಇದ್ದೆ. ಅದು ಯಾವ ಜೋಶೋ ಗೊತ್ತಿಲ್ಲ. 45  ಸಿನಿಮಾದ ಕ್ಲೈಮ್ಯಾಕ್ಸ್‌ ಇಡೀ ನಾನು ಕಿಮೋಥೆರಪಿಯಲ್ಲೇ ಕಳದೆ. ಹೊರಡುವ ಡೇಟ್‌ ಹತ್ರ ಬರುತ್ತಿದ್ದಂತೆ ಟೆನ್ಷನ್‌ ಜಾಸ್ತಿ ಆಗ್ತಾ ಬಂತು. ನನಗೆ ನನ್ನ ಸ್ನೇಹಿತರು, ಪತ್ನಿ, ಮಗಳು ತುಂಬಾ ಸರ್ಪೋರ್ಟ್‌ ಮಾಡಿದರು. ನಾನು ಯಾರನ್ನು ಮರೆಯಲ್ಲ ಎಂದು ಶಿವಣ್ಣ ಹೇಳಿದ್ದಾರೆ.

ನನ್ನನ್ನು ನೋಡಿಕೊಂಡ ವೈದ್ಯರು, ಸ್ಟಾಫ್ ಗಳು ಹಾಗೂ ಸ್ನೇಹಿತರು ನನಗೆ ಇನ್ನೊಂದು ತಾಯಿ ತರಾ. ಇದೆಲ್ಲ ಅಷ್ಟು ಸುಲಭವಲ್ಲ ಮಾಡೋದು. ಇದು ದೊಡ್ಡ ಆಪರೇಷನ್. ಮೂತ್ರಪಿಂಡ ಕಸಿ ಅಂಥ ಎಲ್ಲರೂ ಅಂದುಕೊಂಡಿದ್ದಾರೆ ಅದೆಲ್ಲ ಏನು ಇಲ್ಲ. ಮೂತ್ರಕೋಶ ತೆಗೆದು ಹೊಸ ಮೂತ್ರಕೋಶ ಹಾಕಿದ್ದಾರೆ. ಇದೇ ನಡೆದಿರುವುದು. ಡಿಟೈಲ್‌ ಎಲ್ಲ ಹೇಳೋಕೆ ಎಲ್ಲ ಗಾಬರಿ ಅಗ್ತಾರೆ.  ಗಾಬರಿ ಎಲ್ಲ ನಮಗಿರಲಿ. ನಿಮ್ಮೆಲ್ಲರ ಆರ್ಶೀವಾದ ನನ್ನ ಮೇಲಿರಲಿ. ನಾನು ಮತ್ತೆ ಬರ್ತಿನಿ. ವೈದ್ಯರು ಹೇಳಿದ್ದಾರೆ ಮೊದಲ ಒಂದು ತಿಂಗಳು ಸ್ವಲ್ಪ ನಿಧಾನಕ್ಕೆ ಹೋಗಿ ಅಂಥ. ಮಾರ್ಚ್‌ ನಲ್ಲಿ ಬರ್ತಿನಿ. ಶಿವಣ್ಣ ಹೇಗೆ ಇದ್ನೋ ಹಾಗೆ ಇರುತ್ತಾನೆ. ಅದಕ್ಕಿಂತ ಡಬಲ್‌ ಪವರ್‌ ಇದ್ದೇ ಇರುತ್ತದೆ. ಡ್ಯಾನ್ಸಿಂಗ್‌, ಫೈಟಿಂಗ್‌ ಇರಬಹುದು. ನಿಮ್ಮ ಆರ್ಶೀವಾದ ಇರುವವರೆಗೆ ಖಂಡಿತ ಹಾಗೆಯೇ ಇರುತ್ತೇನೆ. ನಿಮ್ಮ ಪ್ರೀತಿ – ವಿಶ್ವಾಸವನ್ನು ಮರೆಯಲ್ಲ ಎಂದು ಶಿವಣ್ಣ ಹೇಳಿದ್ದಾರೆ.

‘ಶಿವರಾಜ್ ಕುಮಾರ್ ಅವರ ಎಲ್ಲ ವೈದ್ಯಕೀಯ ಪರೀಕ್ಷಾ ವರದಿಗಳು ಬಂದಿದ್ದು, ಎಲ್ಲದರಲ್ಲೂ ನೆಗೆಟಿವ್ ಬಂದಿದೆ. ಶಿವಣ್ಣ ಈಗ ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ವೈದ್ಯರು ಅಧಿಕೃತ ಹೇಳಿಕೆ ನೀಡಿದ್ದು, ಅಭಿಮಾನಿಗಳು, ಗುರು-ಹಿರಿಯರ ಪ್ರಾರ್ಥನೆಯ ಫಲವಾಗಿ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂದ ಗುಣಮುಖರಾಗಿದ್ದಾರೆ. ನಿಮಗೆಲ್ಲರಿಗೂ ಧನ್ಯವಾದ ಎಂದು ಗೀತ ಶಿವರಾಜ್ ಕುಮಾರ್ ಹೇಳಿದ್ದಾರೆ.

ಟಾಪ್ ನ್ಯೂಸ್

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

1

Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

6

Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಕೃತ್ಯ ಮಾಡಿದ್ದ ಲಾಯರ್!

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

1

Yakshagana:ಆಗ ರಂಗದಲ್ಲಿ ಸ್ತ್ರೀಯಾಗುತ್ತಿದ್ದ ಬೆರಳೆಣಿಕೆ ಕಲಾವಿದರಿಗೆ ಸುಗ್ಗಿ..ಈಗ ಹಾಗಲ್ಲ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್‌ ಪ್ರಸಾದ್‌ ಸಿನಿಮಾ

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

6

Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.