Delhi polls: ದಿಲ್ಲಿಯಲ್ಲೀಗ ಬಿಜೆಪಿ-ಆಪ್ ಪೋಸ್ಟರ್ ವಾರ್!
Team Udayavani, Jan 3, 2025, 6:55 AM IST
ನವದೆಹಲಿ: ದಿಲ್ಲಿ ಚುನಾವಣೆ ಸಮೀಪವಿರುವಂತೆಯೇ ಬಿಜೆಪಿ ಹಾಗೂ ಆಪ್ ನಡುವಿನ ರಾಜಕೀಯ ತಿಕ್ಕಾಟ ಹೆಚ್ಚಾಗಿದೆ. ಮತದಾರರ ಪಟ್ಟಿ ವಿಚಾರ ಕುರಿತು ಪರಸ್ಪರ ವಾಗ್ಧಾಳಿ ನಡೆಸುತ್ತಿದ್ದ ಪಕ್ಷಗಳು ಈಗ ಪೋಸ್ಟರ್ ವಾರ್‌ಗಿಳಿದಿವೆ. “ಸ್ಕ್ಯಾಮ್ 1992′ ಹಾಗೂ “ಗೋಟ್’ ಸಿನಿಮಾದ ಪೋಸ್ಟರ್ ರಚಿಸಿ ಮೀಮ್ ಮೂಲಕ ಉಭಯ ಪಕ್ಷ ಗಳು ಜಟಾಪಟಿ ಆರಂಭಿಸಿವೆ.
ಷೇರುಪೇಟೆ ಬಿಗ್‌ಬುಲ್ ಹರ್ಷದ್ ಮೆಹ್ತಾನ ಷೇರು ವಂಚನೆ ಕುರಿತಾದ ವೆಬ್ ಸರಣಿ “ಸ್ಕ್ಯಾಮ್ 1992′ ರೀತಿಯಲ್ಲೇ “ಸ್ಕ್ಯಾಮ್ 2024′ ಎನ್ನುವ ಪೋಸ್ಟರ್ ರಚಿಸಿ, ಅದರಲ್ಲಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಫೋಟೋ ಅಳವಡಿಸಿ ಬಿಜೆಪಿ ಮೀಮ್ ಮಾಡಿದೆ. ಮತಗಳನ್ನು ವಂಚಿಸಿ ಅಧಿಕಾರ ಹಿಡಿಯುವ ಹೊಸ ಆಟವನ್ನು ಕೇಜ್ರಿ ಆರಂಭಿಸಿದ್ದಾರೆ ಎಂದು ಟೀಕಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಆಪ್, ನಟ ವಿಜಯ್ ದಳಪತಿ ಅವರ “ಗೋಟ್- ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾ ರೀತಿಯ ಪೋಸ್ಟರ್ ರಚಿಸಿ, ಅದರಲ್ಲಿ ಕೇಜ್ರಿವಾಲ್‌ರ ಅಭಿವೃದ್ಧಿ ಕಾರ್ಯಗಳನ್ನು ಬಿಂಬಿಸುವ ಆಸ್ಪತ್ರೆ, ಶಾಲೆಗಳನ್ನೂ ಚಿತ್ರಿಸಿ, “ಅಭಿವೃದ್ಧಿಗಳ ರಾಜನೀತಿಯಲ್ಲಿ -ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಎಂದು ಬರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Karnataka: ವಿದ್ಯುತ್ ದರದಂತೆ ವರ್ಷವೂ ಬಸ್ ಯಾನ ದರ ಹೆಚ್ಚಳ?
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.