Farmers Protest: ರೈತ ದಲ್ಲೇವಾಲ್ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್ನ ನಡೆಗೆ ಸುಪ್ರೀಂ ಗರಂ
Team Udayavani, Jan 2, 2025, 9:38 PM IST
ನವದೆಹಲಿ: ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರ ಪ್ರತಿಭಟನೆ ಮುರಿಯಲು ನ್ಯಾಯಾಲಯವೇ ಪ್ರಯತ್ನಿಸುತ್ತಿದೆ ಎಂಬಂತೆ ಪಂಜಾಬ್ ಸರ್ಕಾರ ಬಿಂಬಿಸುತ್ತಿದೆ. ಸರ್ಕಾರದ ಧೋರಣೆಯು ಸಮನ್ವಯ ಸಾಧಿಸುವ ಬದಲು, ಸಮಸ್ಯೆ ಸೃಷ್ಟಿಸುವಂತಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಸರ್ಕಾರಕ್ಕೆ ಚಾಟಿ ಬೀಸಿದೆ.
ದಲ್ಲೇವಾಲ್ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಕೋರ್ಟ್ ನಿರ್ದೇಶಿಸಿತ್ತು. ಆದರೆ, ಸರ್ಕಾರದ ಕೆಲವು ಅಧಿಕಾರಿಗಳು ಸಿಂಗ್ ಅವರ ಉಪವಾಸ ಮುರಿಸಲು ಕೋರ್ಟ್ ಯತ್ನಿಸುತ್ತಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ವೈದ್ಯಕೀಯ ನೆರವಿನೊಂದಿಗೂ ಸಿಂಗ್ ಉಪವಾಸ ಮುಂದುವರಿಸಬಹುದು. ಅವರ ಜೀವದ ಹಿತದೃಷ್ಟಿ ಅಷ್ಟೇ ನಮ್ಮ ಆದ್ಯತೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾ.ಉಜ್ಜಲ್ ಭುಯಾನ್ ಅವರ ಪೀಠವು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.