FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
Team Udayavani, Jan 2, 2025, 11:15 PM IST
ಬೆಂಗಳೂರು: ಪದಾರ್ಪಣೆಗೈದ ಪಂದ್ಯ ದಲ್ಲಿಯೇ ಫಾರ್ವರ್ಡ್ ಆಟಗಾರ್ತಿ ಲಿಂಗ್ಡೆಕಿಮ್ ಅವರ ನಾಲ್ಕು ಗೋಲುಗಳ ನೆರವಿನಿಂದ ಭಾರತೀಯ ವನಿತಾ ತಂಡವು ಎರಡನೇ ಫಿಫಾ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ಮಾಲ್ದೀವ್ಸ್ ತಂಡವನ್ನು 11-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ 2025ರ ವರ್ಷದಲ್ಲಿ ತನ್ನ ಗೆಲುವಿನ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ.
ಪಂದ್ಯದ ಪ್ರತಿಯೊಂದು ಹಂತದಲ್ಲಿ ಲಿಂಗ್ಡೆಕಿಮ್ ಗೋಲನ್ನು ದಾಖಲಿಸಿ ತಂಡಕ್ಕೆ ಉತ್ತಮ ನೆರವು ನೀಡಿದರು. ಅವರ ಜತೆ ಈ ಪಂದ್ಯದ ಮೂಲಕ ಪದಾರ್ಪಣೆಗೈದ ನಂಗ್ಮೆಕಪಮ್ ಸಿಬಾನಿ ದೇವಿ ಒಂದು ಗೋಲು ಹೊಡೆದರೆ ಸಿಮ್ರಾನ್ ಗುರಂಗ್ ಅವಳಿ ಗೋಲು ಹೊಡೆದು ಮಿಂಚಿದರು.
ಡಿ. 30ರಂದು ನಡೆದ ಮೊದಲ ಸೌಹಾರ್ದ ಪಂದ್ಯವನ್ನು ಭಾರತ 14-0 ಅಂತರದಿಂದ ಗೆದ್ದುಕೊಂಡಿತ್ತು. ಈ ಕಾರಣಕ್ಕಾಗಿ ತಂಡದ ಮುಖ್ಯ ಕೋಚ್ ಜೋಕಿಮ್ ಅಲೆಕ್ಸಾಂಡರ್ಸನ್ ಅವರು ಈ ಪಂದ್ಯಕ್ಕಾಗಿ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಿದರು. ತಂಡದ ಎಲ್ಲರಿಗೂ ಆಡುವ ಅವಕಾಶ ಲಭಿಸಲಿ ಎಂಬ ಕಾರಣಕ್ಕಾಗಿ ಕೋಚ್ ಈ ನಿರ್ಧಾರ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.