RSS: 85 ವರ್ಷಗಳ ಹಿಂದೆ ಅಂಬೇಡ್ಕರ್ ನಮ್ಮ ಶಾಖೆಗೆ ಬಂದಿದ್ದರು
ಭಿನ್ನಾಭಿಪ್ರಾಯ ಇದ್ದರೂ ಸಂಘದ ಬಗ್ಗೆ ಮೆಚ್ಚುಗೆ: ಮಾಧ್ಯಮ ವಿಭಾಗ
Team Udayavani, Jan 3, 2025, 6:41 AM IST
ನಾಗಪುರ: ಸಂವಿಧಾನಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರು 85 ವರ್ಷ ಗಳ ಹಿಂದೆ ಅಂದರೆ 1940ರಲ್ಲಿ ಆರ್ಎಸ್ಎಸ್ನ ಶಾಖೆಗೆ ಭೇಟಿ ನೀಡಿದ್ದರು ಎಂದು ಸಂಘಟನೆಯ ಮಾಧ್ಯಮ ವಿಭಾಗ “ವಿಶ್ವ ಸಂವಾದ ಕೇಂದ್ರ’ ಗುರುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಹಲವು ವಿಚಾರಗಳಲ್ಲಿ ಆರ್ಎಸ್ಎಸ್ ಜತೆಗೆ ಅಂಬೇಡ್ಕರ್ ಭಿನ್ನಾಭಿಪ್ರಾಯ ಹೊಂದಿದ್ದರೂ ಸಂಘಟನೆಯ ಬಗ್ಗೆ ಅವರು ಮೆಚ್ಚುಗೆಯ ಭಾವನೆ ಹೊಂದಿದ್ದರು ಎಂದು ಹೇಳಿಕೊಂಡಿದೆ.
“ಸಂಘಟನೆ ದಲಿತ ವಿರೋಧಿ ಎಂದು ಸುಳ್ಳು ಹೇಳ ಲಾಗುತ್ತಿತ್ತು. ಸಂವಿಧಾನಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರು 1940 ಜ.2ರಂದು ಮಹಾರಾಷ್ಟ್ರದ ಸತಾರಾದಲ್ಲಿ ಆಯೋಜಿಸಲಾಗಿದ್ದ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿ ದ್ದರು. ಭಿನ್ನಾಭಿಪ್ರಾಯದ ಹೊರತಾಗಿಯೂ ಅಲ್ಲಿಗೆ ಬಂದು ಸಂಘವನ್ನು ಶ್ಲಾಘಿಸಿದ್ದರು.
ಅಂಬೇಡ್ಕರ್ ಮೆಚ್ಚುಗೆ ಮಾತುಗಳ ಬಗ್ಗೆ 1940 ಜ.9ರಂದು ಮರಾಠಿ ಪತ್ರಿಕೆ “ಕೇಸರಿ’ ಯಲ್ಲಿ ವರದಿ ಪ್ರಕಟವಾಗಿದೆ. ಸಂಘದ ನಾಯಕರಾಗಿದ್ದ ದತ್ತೋಂಪತ್ ಥೇಂಗಡಿ ಬರೆದಿದ್ದ “ಡಾ| ಅಂಬೇಡ್ಕರ್ ಔರ್ ಸಾಮಾಜಿಕ್ ಕ್ರಾಂತಿ ಕೀ ಯಾತ್ರಾ’ ಪುಸ್ತಕದ 8ನೇ ಅಧ್ಯಾಯದಲ್ಲಿ ಅಂಬೇ ಡ್ಕರ್ ಮತ್ತು ಸಂಘದ ನಡುವಿನ ಬಾಂಧವ್ಯದ ಬಗ್ಗೆ ಬರೆದಿದ್ದರು ಎಂದೂ ವಿಶ್ವ ಸಂವಾದ ಕೇಂದ್ರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Karnataka: ವಿದ್ಯುತ್ ದರದಂತೆ ವರ್ಷವೂ ಬಸ್ ಯಾನ ದರ ಹೆಚ್ಚಳ?
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.