Story Of Generations: ಪೀಳಿಗೆಗಳ ವೃತ್ತಾಂತ


Team Udayavani, Jan 3, 2025, 12:35 PM IST

6-spcl

ಒಂದು ಕಾಲ ಘಟ್ಟದ ಪೀಳಿಗೆಯನ್ನು ಆಯಾ ಕಾಲದ ಸಾಮಾಜಿಕ ಅಂಶಗಳಿಗೆ ಅನುಗುಣವಾಗಿ ಹೆಸರಿಸಿ, ಸಮಾಜಶಾಸ್ತ್ರಜ್ಞರು ಅಧ್ಯಯನ ಕೈಗೊಳ್ಳುತ್ತಾರೆ.

1901ರಿಂದ 2025ರ ವರೆಗೆ ಒಟ್ಟು 7 ಪೀಳಿಗೆಗಳನ್ನು ಗುರುತಿಸಲಾಗಿದೆ. ಈಗ 8ನೇ ಪೀಳಿಗೆ, ಅಂದರೆ 2025ರ ನೂತನ ವರ್ಷದ ಪ್ರಾರಂಭದೊಂದಿಗೆ ಹುಟ್ಟಲಿರುವ ಮಕ್ಕಳನ್ನು “ಜನರೇಶನ್‌ ಬೀಟಾ’ ಎಂದು ಕರೆಯಲಾಗುತ್ತಿದೆ.

ಹಾಗಾದರೆ ಏನಿದು ವಿವಿಧ ಪೀಳಿಗೆಗಳು? ನೀವು ಯಾವ ಪೀಳಿಗೆಗೆ ಸೇರಿದ್ದೀರಿ? ವಿವಿಧ ಪೀಳಿಗೆಯ ಗುಣಲಕ್ಷಣಗಳೇನು? ಭಾರತೀಯ ಸಂದರ್ಭದಲ್ಲಿ ಈ ತಲೆಮಾರಿನ ಮೇಲೆ ಪ್ರಭಾವ ಬೀರಿದ ಅಂಶಗಳು ಯಾವುವು?

8 ಪೀಳಿಗೆಗಳಲ್ಲಿ ನಿಮ್ಮದು ಯಾವುದು? ಗುಣಲಕ್ಷಣಗಳೇನು?

ಭಾರತೀಯ ದೃಷಿಕೋನದಲ್ಲಿ ತಲೆಮಾರುಗಳು ಎಂದರೇನು?

ಜಾಗತಿಕವಾಗಿ ತಲೆಮಾರುಗಳು ಸುಮಾರು 10-20 ವರ್ಷಗಳ ಅವಧಿಯಲ್ಲಿ ಬದಲಾಗುವಂತಹದ್ದು. 20ನೇ ಶತಮಾನದ ಪ್ರಾರಂಭದ ಅನಂತರ ಜನಿಸಿದವರನ್ನು ಆಯಾ ಕಾಲಘಟ್ಟದ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಸೇರಿದಂತೆ ವಿವಿಧ ಅಂಶಗಳು ಬೀರಬಹುದಾದ ಪ್ರಭಾವಗಳನ್ನು ಅನುಸರಿಸಿ ವಿವಿಧ ಪೀಳಿಗೆಗಳಾಗಿ ಸಮಾಜ ಶಾಸ್ತ್ರಜ್ಞರು ವಿಭಾಗಿಸಿದ್ದಾರೆ. ಹೀಗೆ ಬದಲಾಗುವ ಪೀಳಿಗೆಯ ಗುಣ ಲಕ್ಷಣ, ಸಾಮರ್ಥ್ಯ, ಆಯಾ ಕಾಲ ಅವರ ಮೇಲೆ ಬೀರಿರುವ ಪರಿಣಾಮಗಳು ಮಹತ್ವದ್ದಾಗಿವೆ. ಸಾಮಾನ್ಯವಾಗಿ ಪಾಶ್ಚಾತ್ಯ ಸಂದರ್ಭವನ್ನು ಆಧರಿಸಿ ಈ ತಲೆಮಾರುಗಳ ಅಧ್ಯಯನ ಮಾಡಲಾಗುತ್ತದೆ. ಆದರೆ ಇಲ್ಲಿ ಇದೇ ತಲೆಮಾರುಗಳನ್ನು ಭಾರತೀಯ ಸಾಮಾಜಿಕ, ರಾಜಕೀಯ, ಆರ್ಥಿಕ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ಮಾಡಲಾಗಿದೆ.

ಶ್ರೇಷ್ಠ ಪೀಳಿಗೆ 1901-1927

  1. ಅಮೆರಿಕ ಸೇನೆಯ ಜನರಲ್‌ ಆಗಿದ್ದ ಜೇಮ್ಸ್‌ ವ್ಯಾನ್‌ ಫ್ಲೀಟ್‌ ಅವರು 1901ರಿಂದ 1927ರ ವರೆಗಿನ ಅವಧಿಯಲ್ಲಿ ಜನಿಸಿದ ಪೀಳಿಗೆಯನ್ನು ಶ್ರೇಷ್ಠ ಪೀಳಿಗೆ (The Greatest Generation) ಎಂದು ಕರೆದರು.
  • ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ಪ್ರಾರಂಭದ ದಿನಗಳಿಗೆ ಸಾಕ್ಷಿಯಾದವರು. ವಿಶ್ವದೆಲ್ಲೆಡೆ ಹೊಸ ಆವಿಷ್ಕಾರಗಳಿಗೆ ಸಂಕ್ರಮಣ ಕಾಲವಿದು.
  • ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಗೋಪಾಲಕೃಷ್ಣ ಗೋಖಲೆ, ಸುಭಾಷ್‌ ಚಂದ್ರ ಬೋಸ್‌ ಸೇರಿ ಅನೇಕ ಮುತ್ಸದ್ಧಿಗಳಿಂದ ಪ್ರಭಾವಿತರಾದವರು.
  • ವಿಶ್ವಯುದ್ಧದಲ್ಲಿ ಭಾರತ ನೇರವಾಗಿ ಭಾಗವಹಿಸದಿದ್ದರೂ, ಅದರಿಂದ ಸೃಷ್ಟಿಯಾದ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದವರು.
  • ಕಠಿಣ ಪರಿಶ್ರಮಿಗಳು ಮತ್ತು ಯಾವುದೇ ತ್ಯಾಗದ ಮೂಲಕವಾದರೂ ರಾಷ್ಟ್ರ ಕಟ್ಟುವ ಬದ್ಧತೆ ಉಳ್ಳವರು. ಮಿತವ್ಯಯಿ, ಕೃಷಿ ಆಧಾರಿತ ಹಾಗೂ ಸಾಂಪ್ರದಾಯಿಕ ಕುಟುಂಬಗಳಲ್ಲಿ ಬೆಳೆದವರು.
  • ಹೆಚ್ಚಿನ ಜನರು ಗ್ರಾಮೀಣ ಭಾಗದಲ್ಲಿ ಜನಿಸಿದರು, ವಿದ್ಯುತ್ಛಕ್ತಿ ಸೇರಿದಂತೆ ಹಲವು ತಾಂತ್ರಿಕ ಔನ್ನತ್ಯಗಳನ್ನು ಪ್ರಾಥಮಿಕ ದಿನಗಳಲ್ಲಿ ಕಾಣದವರು.

ಮೌನ ಪೀಳಿಗೆ 1928-1945

  1. 1928ರಿಂದ 1945ರ ವರೆಗಿನ ಅವಧಿಯಲ್ಲಿ ಜನಿಸಿದ ಪೀಳಿಗೆ ಕುರಿತು 1951ರಲ್ಲಿ ಟೈಮ್ಸ್‌ ನಿಯತಕಾಲಿಕೆಯು ಅಧ್ಯಯನ ನಡೆಸಿ “ಮೌನ ಪೀಳಿಗೆ’ (The Silent Generation) ಎಂದು ವಿಶ್ಲೇಷಣೆ ಮಾಡಿತು.
  • ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ಅಂತಿಮ ದಿನಗಳನ್ನು ಕಂಡ ಈ ಪೀಳಿಗೆಯು ಈ ಅವಧಿಯಲ್ಲಿ ಅನೇಕ ಕೋಮು ಸಂಘರ್ಷಗಳಿಗೂ ಸಾಕ್ಷಿಯಾಯಿತು.
  • ಸ್ವಾತಂತ್ರ್ಯ ಅನಂತರ ರಾಷ್ಟ್ರ ನಿರ್ಮಾಣ, ಆರ್ಥಿಕ ಅಭಿವೃದ್ಧಿ, ಆಹಾರ ಭದ್ರತೆ, ಸಾಂವಿಧಾನಿಕ ಸಂಸ್ಥೆಗಳ ರಚನೆಗಳು ಇವರ ಮುಂದಿದ್ದ ಸವಾಲುಗಳು.
  • ದೇಶಭಕ್ತರು ಹಾಗೂ ರಾಷ್ಟ್ರೀಯವಾದಿಗಳು, ಶಿಸ್ತುಬದ್ಧ ಜೀವನ ನಡೆಸುವ ಇವರು ಸಂಪ್ರದಾಯವಾದಿಗಳು, ಕಠಿನ ಪರಿಶ್ರಮಿಗಳು, ಕುಟುಂಬ ವ್ಯವಸ್ಥೆಯ ಮೇಲೆ ನಂಬಿಕೆಯುಳ್ಳವರು.
  • ರೈಲ್ವೇ ವ್ಯವಸ್ಥೆಯ ಪರಿಚಯ, ಆರಂಭಿಕ ಕೈಗಾರಿಕ ಹಾಗೂ ಶೈಕ್ಷಣಿಕ ಸುಧಾರಣೆಗಳಿಗೆ ಸಾಕ್ಷಿಯಾದವರು.
  • ಜಾಗತಿಕವಾಗಿ 2 ವಿಶ್ವ ಯುದ್ಧಗಳ ನಡುವೆ ಹಾಗೂ ಕಮ್ಯುನಿಸ್ಟ್‌ ಸಿದ್ಧಾಂತಗಳು ಪ್ರವರ್ಧಮಾನಕ್ಕೆ ಬರುತ್ತಿದ್ದ ವೇಳೆ ಜನಿಸಿದ ಕಾರಣ ಈ ತಲೆಮಾರು ತಮ್ಮ ಸಾರ್ವಜನಿಕ ಜೀವನದ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದರು.

ಬೇಬಿ ಬೂಮರ್ಸ್‌ 1946-1964

  1. 1963ರಲ್ಲಿ “ಡೈಲಿ ಪ್ರಸ್‌’ ಪತ್ರಿಕೆಯಲ್ಲಿ ಪ್ರಕಟವಾದ ಲೆಸ್ಲಿ ಜೆ.ನಾಸನ್‌ ಎಂಬವರ ಲೇಖನದಲ್ಲಿ ಬೇಬಿ ಬೂಮರ್ಸ್‌ (Baby Boom Generation) ಎಂಬ ಈ ಪದವನ್ನು ಮೊದಲು ಬಳಸಲು ಆರಂಭಿಸಲಾಯಿತು.
  • ವಿಶ್ವಯುದ್ಧ ಹಾಗೂ ಸ್ವಾತಂತ್ರ್ಯ ಚಳವಳಿಗಳು ಅಂತ್ಯಗೊಂಡ ಬಳಿಕ ಜಾಗತಿಕವಾಗಿ ಜನಸಂಖ್ಯಾ ಬೆಳವಣಿಗೆಯ ವೇಗ ಹೆಚ್ಚಳವಾಯಿತು.
  • ಸ್ವಾತಂತ್ರ್ಯ ಅನಂತರ ಎದುರಾದ ವಿಭಜನೆ ಹಾಗೂ ಕೋಮು ಸಂಘರ್ಷಗಳ ನಡುವೆಯೇ ಭಾರತವನ್ನು ಯಶಸ್ವಿ ರಾಷ್ಟ್ರವನ್ನಾಗಿ ರೂಪಿಸುವ ಸವಾಲುಗಳ ನಡುವೆ ಈ ತಲೆಮಾರಿನವರು ಜನಿಸಿದವರು.
  • ಜವಾಹರ್‌ ಲಾಲ್‌ ನೆಹರೂ ಅವರ ಸಮಾಜವಾದಿ ಸರಕಾರ ಹಾಗೂ ಅಂದಿನ ಅಲಿಪ್ತ ನೀತಿ ಪರಿಕಲ್ಪನೆಗಳಿಗೆ ಸಾಕ್ಷಿಯಾದ ಪೀಳಿಗೆ ಇವರು.
  • ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಈ ಪೀಳಿಗೆಯು ಉದ್ಯೋಗ ದಲ್ಲಿ ಸದಾ ಸ್ಥಿರತೆಯನ್ನು ಬಯಸುವವರು. ಹೆಚ್ಚಾಗಿ ಸರಕಾರಿ ಉದ್ಯೋಗ ಪಡೆಯುವತ್ತ ಗಮನ ಹರಿಸಿದವರು.
  • ಕುಟುಂಬ ವ್ಯವಸ್ಥೆಯೊಳಗೆ ಸಂವಹನದ ಮೌಲ್ಯ ಅರಿತ ಇವರು ತಮ್ಮ ಮಕ್ಕಳ ಭವಿಷ್ಯದ ಕುರಿತು ಕನಸು ಕಾಣಲು ಆರಂಭಿಸಿದ ಮೊದಲಿಗರೂ ಹೌದು.

ಜನರೇಶನ್‌ ಎಕ್ಸ್‌ 1965-1980

  1. 1950ರಲ್ಲಿ ಮೊದಲ ಬಾರಿ ಹಂಗೇರಿಯ ಛಾಯಾಚಿತ್ರಗಾರ ರಾಬರ್ಟ್‌ ಕೇಪಾ ಅವರು ಜನರೇಶನ್‌ ಎಕ್ಸ್‌ (Generation X) ಎಂಬ ಈ ಪದವನ್ನು ಬಳಸಿದರು. 1965ರಿಂದ ಜನಿಸಿದ ಮಕ್ಕಳು ಈ ತಲೆಮಾರಿಗೆ ಸೇರಿದವರು.
  • ಕಂಪ್ಯೂಟರ್‌ಗಳ ಆರಂಭವಾದ ಕಾಲ. ಅದರ ಬಳಕೆಯ ವ್ಯಾಪಕತೆ ಹಾಗೂ ಇಂಟರ್ನೆಟ್‌ ಕ್ರಾಂತಿಯ ಪ್ರಾಥಮಿಕ ದಿನಗಳನ್ನು ಕಂಡ ಈ ಪೀಳಿಗೆಯು ತಂತ್ರಜ್ಞಾನವನ್ನು ಅಪ್ಪಿಕೊಂಡಿತು.
  • ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯ ನೀಡಿದ ಈ ಪೀಳಿಗೆಯು ಕೆಲಸ ಮತ್ತು ವೈಯಕ್ತಿಕ ತೃಪ್ತಿಯ ಮಧ್ಯೆ ಸಮತೋಲನವನ್ನು ಬಯಸಿದವರು.
  • ಜಾಗತಿಕವಾಗಿ ಗಮನಿಸಿದಾಗ ಈ ಪೀಳಿಗೆಗೆ ಸೇರಿದ ಹೆಚ್ಚು ಮಂದಿ ಸಾಲದ ಸುಳಿಗೆ ಸಿಲುಕಿದವರು.
  • ಸಾಮಾಜಿಕವಾಗಿ ಸಾಂಪ್ರದಾಯಿಕ ಪದ್ಧತಿಗಳಿಂದ ನಿಧಾನವಾಗಿ ಆಧುನಿಕತೆ ಹಾಗೂ ಪಾಶ್ಚಾತ್ಯದೆಡೆಗೆ ವಾಲಲು ಆರಂಭಿಸಿದ್ದು ಈ ಪೀಳಿಗೆ.
  • 1991ರಲ್ಲಿ ಭಾರತವು ತೆರೆದುಕೊಂಡ ಜಾಗತೀಕರಣಕ್ಕೆ ಸಾಕ್ಷಿಯಾದ ಈ ತಲೆಮಾರು ನಿಧಾನವಾಗಿ ವಿದೇಶದ ಮೋಹಕ್ಕೆ ಒಳಗಾಗಿರುವುದನ್ನು ಗಮನಿಸಬಹುದು.
  • ಆರ್ಥಿಕತೆಯ ಹೊರೆ ಅನುಭವಿಸಿದ ಈ ಪೀಳಿಗೆ ಉಳಿತಾಯದ ಕುರಿತು ಕಾಳಜಿಯುಳ್ಳವರು.

ಮಿಲೇನಿಯಲ್‌ ಜನರೇಶನ್‌ 1981-96

  1. 21ನೇ ಶತಮಾನದ ಪ್ರಾರಂಭದ ಆಸುಪಾಸಿನಲ್ಲಿ ವಯಸ್ಕರಾದ ಹಿನ್ನೆಲೆಯಲ್ಲಿ ಇವರನ್ನು ಮಿಲೇನಿಯಲ್‌ ಜನರೇಶನ್‌/ ಜನರೇಶನ್‌ ವೈ (Millennial Generation) ಎಂದು ಕರೆಯಲಾಯಿತು.
  • ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ವೇಳೆ ಜನಿಸಿದ ಇವರು ಜಾಗತೀಕರಣದ ಪ್ರಭಾವಕ್ಕೆ ಒಳಗಾದವರು. ನಗರಗಳಿಗೆ ವಲಸೆ ಹೆಚ್ಚಳ. ಹೆಚ್ಚಿನವರು ಅವಿಭಕ್ತ ಕುಟುಂಬಗಳಲ್ಲಿ ಜನಿಸಿದರು.
  • ಮಕ್ಕಳ ಮೇಲೆ ಅತೀವ ಕಾಳಜಿ ಹೊಂದಿರುವ ಈ ಪೀಳಿಗೆಯು, ತಮ್ಮ ಮಕ್ಕಳ ಉನ್ನತಿಯಾಗಬೇಕೆಂದು ಮಕ್ಕಳ ಮೇಲೂ ಒತ್ತಡ ಹಾಕಿ, ತಾವೂ ಒತ್ತಡ ತಂದುಕೊಳ್ಳುವಂಥವರು.
  • ತಾಂತ್ರಿಕ ಕ್ಷೇತ್ರಗಳಲ್ಲಿ ವೇಗವಾಗಿ ಸಾಗುತ್ತಿದ್ದ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ. ಪರಿಸರ, ಹವಾಮಾನ ಸುಸ್ಥಿರ ಅಭಿವೃದ್ಧಿಯೆಡೆಗೆ ಕಾಳಜಿ ತೋರಿದವರು.
  • ವೃತ್ತಿಯೆಡೆಗೆ ಹೆಚ್ಚು ಗಮನಹರಿಸಿ, ವೈಯಕ್ತಿಕ ಜೀವನದೆಡೆಗೆ ಕಾಳಜಿಯನ್ನು ನಿಧಾನವಾಗಿ ಕಳೆದುಕೊಂಡ ತಲೆಮಾರು ಇದಾಗಿದೆ.
  • ವೈವಾಹಿಕ ಜೀವನಕ್ಕೆ ಕಾಲಿಡುವ ವಯಸ್ಸನ್ನು ಮುಂದೂಡಲು ನಿರ್ಧರಿಸಿದವರು.

ಜನರೇಶನ್‌ ಜೀ 1997-2010

  1. ಆಸ್ಟ್ರೇಲಿಯಾದ ಸಮಾಜ ಶಾಸ್ತ್ರಜ್ಞ ಮಾರ್ಕ್‌ ಮೆಕ್‌ಕ್ರಿಂಡಲ್‌ ಈ ಹೊಸ ಪೀಳಿಗೆಗೆ ಜನರೇಶನ್‌ ಜೀ (Generation Z) ಎಂದು ನಾಮಕರಣ ಮಾಡಿದರು. ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತರಾದವರು ಇವರು.
  • ಸಾಮಾಜಿಕ ಜಾಲತಾಣಗಳು ಇಲ್ಲದ ಹಾಗೂ ಸಾಮಾಜಿಕ ಜಾಲತಾಣಗಳ ಉಚ್ಫ್ರಾಯ ಕಾಲಕ್ಕೆ ಸಾಕ್ಷಿಯಾದವರು, ಪ್ರಭಾವಕ್ಕೆ ಒಳಗಾದವರು.
  • ವಯಸ್ಕರಾದ ಬಳಿಕ ಕೃತಕ ಬುದ್ಧಿಮತ್ತೆ ಕ್ಷೇತ್ರವು ಪ್ರವರ್ಧಮಾನಕ್ಕೆ ಬಂದಿದ್ದರೂ, ಕೃತಕ ಬುದ್ಧಿಮತ್ತೆಯೆಡೆಗೆ ಒಲವು ಹೊಂದಿರುವವರು.
  • ಸ್ವಯಂ ಉದ್ಯೋಗದೆಡೆಗೆ ಆಸಕ್ತಿ ಹೊಂದಿರುವ ಇವರು, ಸ್ಟಾರ್ಟ್‌ಅಪ್‌ಗ್ಳು ಹಾಗೂ ಹೊಸ ಉದ್ದಿಮೆಗಳ ಸ್ಥಾಪನೆಯೆಡೆಗೆ ಆಸಕ್ತಿ ಹೊಂದಿದವರು.
  • ಸಾಮಾಜಿಕ ಪಿಡುಗುಗಳ ವಿರೋಧಿಗಳಾಗಿರುವ ಇವರು ಪರಿಸರ, ಹವಾಮಾನ ಬದಲಾವಣೆ ಕುರಿತಂತೆ ಹೆಚ್ಚು ಕಾಳಜಿ ಹೊಂದಿದವರು.
  • ಪೋಷಕರ ಹಂಗಿಲ್ಲದೆ ತಮ್ಮದೇ ಆದ ಸಿದ್ಧಾಂತಗಳನ್ನು ಬೆಳೆಸಿಕೊಳ್ಳುವ ಇವರು ರಾಜಕೀಯವಾಗಿ ಪ್ರಬುದ್ಧ ಆಲೋಚನೆಗಳನ್ನು ಹೊಂದಿದವರು.
  • ಆಧುನಿಕತೆಗೆ ತೆರೆದುಕೊಂಡಿದ್ದರೂ, ಸಂಬಂಧಗಳು, ಸಾಂಪ್ರದಾಯಿಕತೆಗೆ ಒಲವು ಹೊಂದಿದವರು.

ಜನರೇಶನ್‌ ಆಲ್ಫಾ 2010-24

  1. ಆಸ್ಟ್ರೇಲಿಯಾದ ಸಮಾಜ ಶಾಸ್ತ್ರಜ್ಞ ಮಾರ್ಕ್‌ ಮೆಕ್‌ಕ್ರಿಂಡಲ್‌ ಜನರೇಷ್‌ ಆಲ್ಫಾ (Generation Alpha) ಪದವನ್ನು ಸೃಷ್ಟಿಸಿದ್ದಾರೆ. 2010ರ ಅನಂತರದ ಕಾಲಘಟ್ಟದಲ್ಲಿ ಜನಿಸಿದ ಮಕ್ಕಳ ತಲೆಮಾರಿನವರು ಇವರು.
  • ಈ ಪೀಳಿಗೆಯು ಕೃತಕ ಬುದ್ಧಿಮತ್ತೆ, ಸ್ಮಾರ್ಟ್‌ ಸಾಧನಗಳು ಹಾಗೂ ಆನ್‌ಲೈನ್‌ ಕಲಿಕೆಯೆಡೆಗೆ ಹೊರಳಿರುವಂಥದ್ದು. ತಂತ್ರಜ್ಞಾನದ ಬಳಕೆಯ ವಿಚಾರದಲ್ಲಿ ತಮ್ಮ ಹೆತ್ತವರನ್ನು ಮೀರಿಸಬಲ್ಲರು.
  • ಭಾರತದ ಮುಂಬರುವ ತಂತ್ರಜ್ಞಾನ ಆಧಾರಿತ ಭವಿಷ್ಯ ರೂಪಿಸುವಲ್ಲಿ ಇವರ ಪಾತ್ರ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ.
  • ವಿಭಕ್ತ ಕುಟುಂಬದಲ್ಲಿ ಬೆಳೆಯುತ್ತಿರುವ ಈ ಪೀಳಿಗೆ ಯವರ ಪೋಷಕರು ತಮ್ಮ ಮಕ್ಕಳ ಶಿಕ್ಷಣ, ದೈನಂದಿನ ಅಗತ್ಯಗಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಿರುವುದನ್ನು ಗಮನಿಸಹುದು.
  • ಸಾಮಾಜಿಕ ಜಾಲತಾಣಗಳ ಮೂಲಕ ಜಾಗತಿಕ ಆಗು ಹೋಗುಗಳು, ವೈವಿಧ್ಯಮಯ ಸಂಸ್ಕೃತಿಗಳ ಕುರಿತು ತಿಳಿದುಕೊಳ್ಳುವ ಅವಕಾಶಗಳು ಇವರಿಗೆ ಹೆಚ್ಚು.
  • ತಮ್ಮ ಪೋಷಕರ ಸಲಹೆಗಳಿಗೆ ಅವಲಂಬಿತರಾಗದೇ ತಾವೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಹೆಚ್ಚು ಸಾಮರ್ಥ್ಯವನ್ನು ಈ ತಲೆಮಾರು ಹೊಂದಿದೆ.

ಜನರೇಶನ್‌ ಬೀಟಾ 2025-39

  1. ಆಸ್ಟ್ರೇಲಿಯಾದ ಸಮಾಜ ಶಾಸ್ತ್ರಜ್ಞ ಮಾರ್ಕ್‌ ಮೆಕ್‌ಕ್ರಿಂಡಲ್‌ ಅವರು ಜನರೇಶನ್‌ ಬೀಟಾ (Generation Beta) ಪದವನ್ನು ಸೃಷ್ಟಿಸಿ, ಪ್ರಚಾರ ಮಾಡಿದ್ದಾರೆ. ಇದು ನಮ್ಮ ಕಾಲಘಟ್ಟದ ಹೊಸ ಪೀಳಿಗೆಯಾಗಿದೆ.
  • ಈ ಅವಧಿಯಲ್ಲಿ ಜನಿಸುವವರ ಪೈಕಿ ಬಹುತೇಕರು 22ನೇ ಶತಮಾನದ ಆರಂಭವನ್ನು ಕಾಣಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿರಲಿದೆ.
  • ಈಗಾಗಲೇ ಮುಂದುವರಿದಿರುವ ತಂತ್ರಜ್ಞಾನದೊಡನೆ ಮುಂಬರುವ ವಿವಿಧ ತಾಂತ್ರಿಕ ಔನ್ನತ್ಯಗಳೊಡನೆ ಇವರು ಬೆಳೆಯಲಿದ್ದಾರೆ. ಇನ್ನೂ ಹೆಚ್ಚಿನ ಆವಿಷ್ಕಾರಕ್ಕೆ ಸಾಕ್ಷಿಯಾಗಲಿದ್ದಾರೆ.
  • ಕೃತಕ ಬುದ್ಧಿಮತ್ತೆ, ವರ್ಚುವಲ್‌ ರಿಯಾಲಿಟಿ, ಆಗ್ಮೆಂಟೆಡ್‌ ರಿಯಾಲಿಟಿ, ರೋಬೋಟಿಕ್ಸ್‌ ಸೇರಿದಂತೆ ಅತ್ಯು ನ್ನತ ತಾಂತ್ರಿಕ ಸೌಲಭ್ಯಗಳು ಇವರಿಗೆ ದೊರೆಯಲಿವೆ.
  • ಕೃತಕ ಬುದ್ಧಿಮತ್ತೆಯೆಡೆಗೆ ಹೆಚ್ಚು ಅವಲಂಬಿತರಾದಲ್ಲಿ ಇವರ ಬೌದ್ಧಿಕ ಸಾಮರ್ಥ್ಯದ ಮೇಲೆ ಬೀರಬಹುದಾದ ಪರಿಣಾಮ ಕುರಿತು ಆತಂಕವಿದೆ.
  • ಈ ಪೀಳಿಗೆಯ ಪ್ರವರ್ಧಮಾನಕ್ಕೆ ಕಾಲಕ್ಕೆ ಕುಟುಂಬ ಸೇರಿದಂತೆ ಸಾಮಾಜಿಕ ಸಂಬಂಧಗಳಲ್ಲಿ ಅನೇಕ ಬದಲಾವಣೆಗಳಾಗಲಿದ್ದು, ಅವುಗಳಿಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.

ಪೀಳಿಗೆ ನಿರ್ಧರಿಸುವ ಪ್ರಮುಖ ಅಂಶಗಳು: ಜಾಗತಿಕ ವರ್ತಮಾನಗಳು: ಯುದ್ಧಗಳು, ಸಾಂಕ್ರಾಮಿಕ ಕಾಯಿಲೆಗಳು

ತಾಂತ್ರಿಕ ಪ್ರಗತಿ: ರೇಡಿಯೋ, ಟಿವಿಗಳಿಂದ ಪ್ರಾರಂಭವಾಗಿ ಇಂದಿನ ಕೃತಕ ಬುದ್ಧಿಮತ್ತೆಗಳವರೆಗೆ ಜಗತ್ತು ಕಂಡ ವಿವಿಧ ಅನ್ವೇಷಣೆಗಳು

ಸಾಮಾಜಿಕ ವ್ಯವಸ್ಥೆ: ಕುಟುಂಬ ವ್ಯವಸ್ಥೆ, ಪೋಷಕರ ಸ್ವಭಾವ, ಸಾಮಾಜಿಕ ಮತ್ತು ಧಾರ್ಮಿಕ ಕಟ್ಟುಪಾಡುಗಳು

ಆರ್ಥಿಕ ವ್ಯವಸ್ಥೆ: ಕೈಗಾರೀಕರಣ, ಉದಾರೀಕರಣ, ತಂತ್ರಜ್ಞಾನ ಆಧಾರಿತ ಆರ್ಥಿಕತೆ

-ಅನುರಾಗ್‌ ಗೌಡ .ಬಿ.ಆರ್‌

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.