Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Team Udayavani, Jan 3, 2025, 1:25 PM IST
ಶಿವಮೊಗ್ಗ: ಎಂಎಲ್ ಸಿ ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ಕೊರಿಯರ್ ಮಾಡಿದ ವಿಚಾರಕ್ಕೆ ಡಾ.ಸರ್ಜಿ ಸ್ಪಷ್ಟನೆ ನೀಡಿದ್ದಾರೆ. ತೇಜೋವಧೆ ಮಾಡುವ ಸಲುವಾಗಿ ಈ ರೀತಿ ಮಾಡಿರುವ ಶಂಕೆಯಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಶುಕ್ರವಾರ (ಜ.03) ಮಾತನಾಡಿದ ಅವರು, ಹೊಸ ವರ್ಷದ ಸಂದರ್ಭದಲ್ಲಿ ನನ್ನ ಹೆಸರಿನಲ್ಲಿ ಡಿಟಿಡಿಸಿ ಕೊರಿಯರ್ ಮೂಲಕ ಸ್ವೀಟ್ ಬಾಕ್ಸ್ ಕಳುಹಿಸಿದ್ದಾರೆ. ನನ್ನ ಪೋಟೋ ಇದೆ. ಒಂದು ಲೆಟರ್ ಇದೆ. ಸಂಜೆ ಸ್ವೀಟ್ ಬಾಕ್ಸ್ ಓಪನ್ ಮಾಡಿ ತಿಂದಿದ್ದಾರೆ. ಅದು ಕಹಿ ಆಗಿರುವುದು ಪತ್ತೆಯಾಗಿದೆ. ಮತ್ತೆ ಇಬ್ಬರಿಗೆ ಅದೇ ರೀತಿ ಕೊರಿಯರ್ ಹೋಗಿದೆ. ಇಬ್ಬರು ವೈದ್ಯರಿಗೆ ಕೊರಿಯರ್ ಹೋಗಿದೆ ಎಂದರು.
ಎಫ್ ಐಆರ್ ಮಾಡಿದ್ದೇವೆ ಲ್ಯಾಬ್ ಗೆ ಟೆಸ್ಟ್ ಗೆ ಕಳುಹಿಸಿದ್ದೇವೆ. ಭದ್ರಾವತಿಯಿಂದ ಕೊರಿಯರ್ ಹೋಗಿದೆ. ಸಮಾಜಮುಖಿ ಹೆಸರಿನಲ್ಲಿ ಇಂತಹ ಕೆಲಸ ಮಾಡಿದ್ದು ಬೇಸರ ಆಗಿದೆ. ಅವರು ಸ್ವೀಟ್ ತಿಂದಿಲ್ಲ ಏನು ಆಗಿಲ್ಲ. ಮಕ್ಕಳಿಗೆ ಏನಾದರೂ ಹಂಚಿ ಈ ರೀತಿ ಆಗಿದ್ದರೆ ಏನು ಗತಿ. ಈ ಬಗ್ಗೆ ಎಸ್ ಪಿ ಅವರಿಗೆ ದೂರು ಕೊಟ್ಟಿದ್ದೇನೆ ಈ ಬಗ್ಗೆ ತನಿಖೆ ನಡೆಸುತ್ತೇವೆಂದು ತಿಳಿಸಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ನಾಪತ್ತೆಯಾದ 78 ದಿನದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ, ತನಿಖೆಗೆ ಪತ್ನಿಯ ಆಗ್ರಹ
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ