Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Team Udayavani, Jan 3, 2025, 4:57 PM IST
ಸಿಡ್ನಿ: ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಸಿಡ್ನಿ ಟೆಸ್ಟ್ (Sydney Test) ಪಂದ್ಯದಿಂದ ಹೊರಗುಳಿದಿದ್ದಾರೆ. ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಿರ್ಣಾಯಕ, ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ನಾಯಕನಾಗಿದ್ದಾರೆ. ರೋಹಿತ್ ಬದಲಿಗೆ ತಂಡಕ್ಕೆ ಶುಭಮನ್ ಗಿಲ್ ಅವರಿಗೆ ಜಾಗ ನೀಡಲಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರು ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಯೋಜನೆಗಳ ಭಾಗವಾಗಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅವರಿಗೆ ತಿಳಿಸಿದೆ. ಹೀಗಾಗಿ ಆಸೀಸ್ ಪ್ರವಾಸದ ಬಳಿಕ ರೋಹಿತ್ ರನ್ನು ವೈಟ್ ಜೆರ್ಸಿಯಲ್ಲಿ ಕಾಣುವುದು ಅಸಾಧ್ಯ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಗೆ ಅರ್ಹತೆ ಪಡೆಯಲು ಭಾರತವು ಕಠಿಣ ಹಾದಿ ಹೊಂದಿದೆ. ಒಂದು ವೇಳೆ ಭಾರತವು ಫೈನಲ್ ತಲುಪಲು ಯಶಸ್ವಿಯಾದರೆ, ಜಸ್ಪ್ರೀತ್ ಬುಮ್ರಾ ಅವರು ನಾಯಕತ್ವ ವಹಿಸುತ್ತಾರೆ ಎಂದು ವರದಿ ಹೇಳುತ್ತಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಭವಿಷ್ಯದ ಬಗ್ಗೆ ಚರ್ಚಿಸಲು ಬಿಸಿಸಿಐ ಆಯ್ಕೆಗಾರರು ವಿರಾಟ್ ಕೊಹ್ಲಿಯೊಂದಿಗೆ ಕೂಡಾ ಸಭೆ ನಡೆಸಲಿದ್ದಾರೆ ಎಂದು ವರದಿ ಹೇಳಿದೆ. ಆದರೆ, ಸೀನಿಯರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಭವಿಷ್ಯದ ಸರಣಿಯಲ್ಲಿ ಕೂಡಾ ತಂಡದಲ್ಲಿ ಉಳಿಯುತ್ತಾರೆ ಎಂದು ನಂಬಲಾಗಿದೆ.
ಮೆಲ್ಬರ್ನ್ ಪಂದ್ಯವೇ ರೋಹಿತ್ ಶರ್ಮಾ ಅವರ ಕೊನೆಯ ಟೆಸ್ಟ್ ಪಂದ್ಯ ಎಂಬ ಸುದ್ದಿಯ ನಡುವೆ, ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಈ ಕ್ರಮವನ್ನು’ಭಾವನಾತ್ಮಕ ನಿರ್ಧಾರ’ ಎಂದು ಹೇಳಿದ್ದಾರೆ.
“ಇದು ಅತ್ಯಂತ ಭಾವನಾತ್ಮಕ ನಿರ್ಧಾರ. ಯಾಕೆಂದರೆ ಅವರು ತುಂಬಾ ಸಮಯದಿಂದ ನಮ್ಮ ನಾಯಕನಾಗಿದ್ದರು. ನಾವು ಅವರನ್ನು ತಂಡದ ನಾಯಕನಾಗಿ ನೋಡಿದ್ದೇವೆ. ಕೆಲವು ನಿರ್ಧಾರಗಳಲ್ಲಿ ನೀವು ಭಾಗಿಯಾಗಿರುವುದಿಲ್ಲ; ಇದು ತಂಡದ ಮ್ಯಾನೇಜ್ ಮೆಂಟ್ ನಿರ್ಧಾರ. ಹೆಚ್ಚಿನ ವಿಚಾರ ಹೇಳಲು ನಾನು ಆ ಚರ್ಚೆಯಲ್ಲಿ ಭಾಗಿಯಾಗಿರಲಿಲ್ಲ” ಎಂದು ಪಂತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?