ಜಗತ್ತಿಗೆ ಭಯ ಮೂಡಿಸಿದ ಹೊಸ ವೈರಸ್; ಕೋವಿಡ್ ಬಳಿಕ ಮತ್ತೊಂದು ವೈರಸ್ ಆತಂಕ
ಆಸ್ಪತ್ರೆಗಳಲ್ಲಿ ಜನ ತುಂಬಿರುವ ಚಿತ್ರ ವೈರಲ್‌ನಿಂದ ಆತಂಕ
Team Udayavani, Jan 4, 2025, 6:50 AM IST
ಜಗತ್ತನ್ನು 5 ವರ್ಷಗಳ ಕಾಲ ಕಾಡಿದ ಕೋವಿಡ್ ಸೋಂಕಿನ ಬಳಿಕ, ಚೀನದಲ್ಲಿ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ ಎಂಬ ವರದಿಗಳು ಇಡೀ ಜಗತ್ತಿಗೆ ಭಯ ಮೂಡಿಸಿದೆ. ಹೆಚ್ಚಿನ ಸಂಖ್ಯೆಯ ಜನ ಈ ಎಚ್‌ಎಂಪಿವಿ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏನಿದು ಸೋಂಕು, ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬೆಲ್ಲ ವಿವರಗಳು ಇಲ್ಲಿವೆ.
ಏನಿದು ಎಚ್‌ಎಂಪಿವಿ?
ಹ್ಯೂಮನ್ ಮೆಟಾನ್ಯುಮೋ ವೈರಸ್ (ಎಚ್‌ಎಂಪಿವಿ) ಎಂದು ಕರೆಯಲ್ಪಡುವ ಈ ವೈರಸ್, ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕನ್ನು ಹರಡುತ್ತದೆ. ಎಲ್ಲ ವಯೋಮಾನದವರಲ್ಲೂ ಈ ಸೋಂಕು ಕಂಡುಬಂದರೂ ಮಕ್ಕಳು ಮತ್ತು ಅನಾರೋಗ್ಯ ಹೊಂದಿರುವ ಹಿರಿಯರಲ್ಲಿ ಇದು ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತದೆ.
ಎಚ್‌ಎಂಪಿವಿ ಹೇಗೆ ಹರಡುತ್ತದೆ?
ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸೀನು ಮತ್ತು ಕೆಮ್ಮಿನ ಮೂಲಕ ಗಾಳಿ ಮುಖಾಂತರ ಇದು ಮತ್ತೂಬ್ಬ ವ್ಯಕ್ತಿಗೆ ಹರಡುತ್ತದೆ. ಕೈ ಕುಲುಕುವುದರಿಂದ, ಕಲುಷಿತ ಸ್ಥಳಗಳನ್ನು ಮುಟ್ಟಿದ ಬಳಿಕ ಮೂಗು, ಬಾಯಿ ಮುಟ್ಟಿಕೊಳ್ಳುವ ಮೂಲಕ ಈ ಸೋಂಕು ಹರಡುತ್ತದೆ.
ಈ ಸೋಂಕಿನ ಲಕ್ಷಣಗಳೇನು?
ಈ ಸೋಂಕಿಗೆ ತುತ್ತಾದವರು ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಉಬ್ಬಸ, ಉಸಿರಾಟ ತೊಂದರೆಗೆ ತುತ್ತಾಗಲಿದ್ದಾರೆ.
ಸೋಂಕು ತಡೆಗಟ್ಟುವುದು ಹೇಗೆ?
ಕೋವಿಡ್ ಸೋಂಕು ಕಾಣಿಸಿಕೊಂಡಿದ್ದ ಸಮಯದಲ್ಲಿ ಆಚರಣೆಗೆ ತಂದಿದ್ದ, ಆಗಾಗ್ಗೆ ಕೈ ತೊಳೆಯುವುದು, ತೊಳೆಯದ ಕೈಗಳಲ್ಲಿ ಮೂಗು ಮುಟ್ಟದಿರುವುದು, ಸೋಂಕಿಗೆ ತುತ್ತಾಗಿರುವವರಿದಂದ ಅಂತರ ಕಾಯ್ದುಕೊಳ್ಳುವುದರ ಮೂಲಕ ಸೋಂಕು ಹರಡದಂತೆ ತಡೆಗಟ್ಟಬಹುದು.
ಈ ವೈರಸ್‌ಗೆ ಲಸಿಕೆ ಇದೆಯೇ?
2001ರಲ್ಲಿ ಮೊದಲ ಬಾರಿಗೆ ಈ ವೈರಸ್ಸನ್ನು ಗುರುತಿಸಲಾಗಿತ್ತು. ಆದರೂ ಇಲ್ಲಿಯವರೆಗೆ ಇದಕ್ಕೆ ಯಾವುದೇ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ರೋಗ ಲಕ್ಷಣಗಳಿಗೆ ನೀಡುವ ಔಷಧವನ್ನೇ ಇದಕ್ಕೆ ನೀಡಲಾಗುತ್ತದೆ.
ಇದು ಸಾಮಾನ್ಯ: ಚೀನ
ಕೋವಿಡ್ ಮಾದರಿ ಸೋಂಕು ಹರಡುತ್ತಿದೆ ಎಂಬುದನ್ನು ಚೀನ ಸರಕಾರ ಅಲ್ಲಗಳೆದಿದೆ. ಅಲ್ಲದೇ ಚಳಿಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಸಾಮಾನ್ಯ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸೋಂಕಿನ ಪ್ರಮಾಣ ಕಡಿಮೆ ಇದೆ. ವಿದೇಶಿ ಗರು ಧೈರ್ಯವಾಗಿ ಚೀನಕ್ಕೆ ಆಗಮಿಸಬಹುದು ಎಂದು ಚೀನ ಸರಕಾರ ಹೇಳಿದೆ.
ಏಷ್ಯಾದಲ್ಲಿ ಕಟ್ಟೆಚ್ಚರ
ಚೀನದಲ್ಲಿ ಹೊಸ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಷ್ಯಾ ಖಂಡದ ಬಹುತೇಕ ರಾಷ್ಟ್ರಗಳು
ಕಟ್ಟೆಚ್ಚರ ಕೈಗೊಂಡಿವೆ. ಜಪಾನ್, ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್ ದೇಶಗಳು ಎಚ್ಚರ ವಹಿಸುವಂತೆ ಸೂಚನೆ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಾದಕ ವಸ್ತು ಸೇವನೆ ಆರೋಪ: ಯುವಕ ವಶಕ್ಕೆ
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.