Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ


Team Udayavani, Jan 4, 2025, 9:53 AM IST

2-vitla

ವಿಟ್ಲ: ದರೋಡೆಕೋರರು ಇಡಿ ಅಧಿಕಾರಿಗಳ ಶೈಲಿಯಲ್ಲಿ ಬೋಳಂತೂರು ಸಮೀಪದ ನಾರ್ಶದ ಉದ್ಯಮಿಯ ಮನೆಗೆ ದಾಳಿ ನಡೆಸಿ ಸುಮಾರು 30 ಲಕ್ಷ ರೂ. ದೋಚಿದ ಘಟನೆ ಜ.3 ರ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ದಾಳಿ ನಡೆಸಿದಂತೆ ನಟಿಸಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದ ನಾಟಕ ಮಾಡಿ ಮನೆಯಲ್ಲಿ ಸಿಕ್ಕಿದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ.

ದೃಢಕಾಯದವರು, ಚಿನ್ನ ಮುಟ್ಟಲಿಲ್ಲ
ಮನೆಯವರು ಹೇಳುವ ಪ್ರಕಾರ ಆರು ಮಂದಿ ದರೋಡೆಕೋರರು ದೃಢಕಾಯದವರಾಗಿದ್ದರು. ದರೋಡೆಕೋರರು ಮನೆ ತುಂಬಾ ಹುಡುಕಾಡಿದಾಗ ಚಿನ್ನ, ಹಣ ಎಲ್ಲವೂ ಸಿಕ್ಕಿತ್ತು. ಆಗ ಚಿನ್ನ ಸಾಕಷ್ಟಿದ್ದರೂ ಸುಮಾರು 30 ಲಕ್ಷ ರೂ.ಗಳಷ್ಟು ನಗದು ಸಿಕ್ಕಿದ ಕಾರಣ ಅದರೊಂದಿಗೆ ಪರಾರಿಯಾಗಿದ್ದಾರೆ. ಚಿನ್ನವನ್ನು ಹೊತ್ತೂಯ್ಯುವ ಮನಸ್ಸು ಮಾಡಿಲ್ಲ. ಬಹುಶಃ ಚಿನ್ನವನ್ನು ನಗದೀಕರಿಸಿಕೊಳ್ಳುವಾಗ ಎಲ್ಲಾದರೂ ಸುಳಿವು ಸಿಗಬಹುದು ಎಂಬ ಭೀತಿ ದರೋಡೆಕೋರರಿಗಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲೇ ಚಿನ್ನದ ಬದಲಿಗೆ ಹಣವನ್ನೇ ಕೊಂಡೊಯ್ದರು ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕ ಯತೀಶ್‌ ಎನ್‌. ಭೇಟಿ ನೀಡಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಹಲವು ರಸ್ತೆಗಳ ಗೊಂದಲದ ದುರ್ಲಾಭ
ಸುಲೈಮಾನ್‌ ಹಾಜಿಯವರ ಮನೆಯಿಂದ ಸ್ವಲ್ಪ ಮುಂದೆ ಮೂರು ಕಡೆಗಳಿಗೆ ರಸ್ತೆ ಕವಲೊಡೆಯುತ್ತದೆ. ಒಂದು ಕಲ್ಲಡ್ಕಕ್ಕೆ, ಇನ್ನೊಂದು ಮಾದಕಟ್ಟೆಗೆ, ಮತ್ತೂಂದು ವಿಟ್ಲಕ್ಕೆ ಸಾಗುತ್ತದೆ. ಹೀಗೆ ಸಾಕಷ್ಟು ಹೊಂಚು ಹಾಕಿ ಸ್ಥಳೀಯರಿಗೇ ಗೊಂದಲ ಮೂಡಿಸಬಹುದಾದ ರಸ್ತೆಗಳ ದುರ್ಲಾಭವನ್ನು ದರೋಡೆಕೋರರು ಪಡೆದಿದ್ದಾರೆ ಎನ್ನುವ ಅನುಮಾನವಿದೆ.

ಮೂಡಿದ ಅನುಮಾನ
ದರೋಡೆಕೋರರು ಮನೆ ಯಿಂದ ಹೊರಹೋಗುವ ವೇಳೆ ಸುಲೈಮಾನ್‌ ಅವರು ಮೊಬೈಲ್‌ ಫೋನ್‌ಗಳನ್ನು ವಾಪಸ್‌ ನೀಡುವಂತೆ ಕೇಳಿಕೊಂಡರು. ಆಗ ತಾವು ಬಿ.ಸಿ. ರೋಡ್‌ನ‌ ಲಾಡ್ಜ್ನಲ್ಲಿ ತಂಗಿದ್ದೇವೆ. ನಮ್ಮನ್ನು ಫಾಲೊ ಮಾಡಿ ಬಂದು ಅಲ್ಲಿ ಮೊಬೈಲ್‌ ಪಡೆದುಕೊಳ್ಳಿ ಎಂದು ದರೋಡೆಕೋರರು ಹೊರಟರು. ಸುಲೈಮಾನ್‌ ಮತ್ತು ಅವರ ಮಗ ಫಾಲೊ ಮಾಡುತ್ತ ಮುಂದೆ ಸಾಗಿದಾಗ ಒಂದು ಹಂತದಲ್ಲಿ ದರೋಡೆಕೋರರಿದ್ದ ವಾಹನ ಇವರ ಕಣ್ಣುತಪ್ಪಿಸಿ ನಾಪತ್ತೆಯಾಯಿತು. ಆಗ ಸುಲೈಮಾನ್‌ ಅವರ ಪುತ್ರ ತನ್ನಲ್ಲಿದ್ದ ಇನ್ನೊಂದು ಮೊಬೈಲ್‌ನಿಂದ ಸುಲೈಮಾನ್‌ ಅವರ ಮೊಬೈಲ್‌ಗೆ ಕರೆ ಮಾಡಿದ್ದು, ಆಗ ಅದು ಸ್ವಿಚ್‌ಆಫ್ ಆಗಿತ್ತು. ಈ ಹಂತದಲ್ಲಿ ಇವರು ಇ.ಡಿ. ಅಧಿಕಾರಿಗಳಲ್ಲ ಎಂಬ ಅನುಮಾನ ಮೂಡಿತ್ತು ಎಂಬುದಾಗಿ ಮನೆಯವರು ತಿಳಿಸಿದ್ದಾರೆ.

ಸುಮಾರು ಎರಡು ತಾಸುಗಳ ಕಾಲ ಎಲ್ಲವನ್ನೂ ಶೋಧಿಸುವ ನಾಟಕವಾಡಿ, 30 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಹಣವನ್ನು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದೆ.

ಕರೆಘಂಟೆ ಒತ್ತಿದ ದರೋಡೆಕೋರರು
ದರೋಡೆಕೋರರು ಶುಕ್ರವಾರ ರಾತ್ರಿ 7.30-8ರ ಸುಮಾರಿಗೆ ಸುಲೈಮಾನ್‌ ಅವರ ಮನೆಯ ಸಮೀಪ ಸುತ್ತಾಡುತ್ತಿದ್ದರು ಎನ್ನಲಾಗಿದೆ. ಬಳಿಕ 8.30ರಿಂದ 9 ಗಂಟೆಯ ನಡುವೆ ಅವರ ಮನೆಯ ಕರೆಘಂಟೆಯನ್ನು ಒತ್ತಿದರು. ಸುಲೈಮಾನ್‌ ಅವರೇ ಬಾಗಿಲು ತೆರೆದಿದ್ದು, “ಯಾರು’ ಎಂದು ಪ್ರಶ್ನಿಸುವಷ್ಟರಲ್ಲಿ ಒಳನುಗ್ಗಿದ ದರೋಡೆಕೋರರು, “ನಾವು ಇ.ಡಿ. ಯಿಂದ ಬಂದಿದ್ದೇವೆ. ಎಲ್ಲ ಮೊಬೈಲ್‌ಗ‌ಳನ್ನು ಕೊಡಿ’ ಎಂದು ಹೇಳಿ ಕಿತ್ತುಕೊಂಡರು. ಆಗ ಮನೆಯಲ್ಲಿ ಸುಲೈಮಾನ್‌ ಮತ್ತು ಅವರ ಪತ್ನಿ, ಮಗ ಮತ್ತು ಸೊಸೆ ಇದ್ದರು. ಮೊಬೈಲ್‌ ಕಿತ್ತುಕೊಂಡ ಕಾರಣ ಯಾರನ್ನೂ ಸಹಾಯಕ್ಕೆ ಕರೆಯುವ ಸಾಧ್ಯತೆಯೂ ಕ್ಷೀಣಿಸಿತು. ದರೋಡೆಕೋರರು ಸುಮಾರು 2 ಗಂಟೆಗಳ ಕಾಲ ಎಲ್ಲವನ್ನೂ ಹುಡುಕಾಟ ನಡೆಸಿ, ಬಳಿಕ ಸುಮಾರು 30 ಲಕ್ಷ ರೂ.ಗಳಷ್ಟು ಹಣವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಮನೆಯಲ್ಲಿದ್ದ ಐದು ಮೊಬೈಲ್‌ ಫೋನ್‌ ಸಹಿತ ಪರಾರಿಯಾಗಿದ್ದಾರೆ. ತಾವು ಪರಾರಿಯಾಗುವಾಗ ಮನೆಯವರು ಯಾರನ್ನೂ ಸಂಪರ್ಕಿಸ
ಬಾರದು ಎಂಬುದು ದರೋಡೆಕೋರರ ಉದ್ದೇಶವಾಗಿತ್ತು. ಮನೆ ಮಾಲಕರಿಗೆ ಸೇರಿದ ಬಿ.ಸಿ. ರೋಡ್‌ ಬಳಿಯ ಕಟ್ಟಡ
ವೊಂದರ ಮಾರಾಟ ಇತ್ತೀಚೆಗೆ ನಡೆದಿದ್ದು, ಆ ಹಣ ಮನೆಯಲ್ಲಿ ಇರಬಹುದು ಎಂಬ ಊಹೆಯಿಂದ ದರೋಡೆಕೋರರು ಕೃತ್ಯಕ್ಕೆಇಳಿದಿರಬಹುದು ಎಂದೂ ಹೇಳಲಾಗಿದೆ. ಶನಿವಾರ ಆದುದರಿಂದ ಕಾರ್ಮಿಕರ ಮಜೂರಿ ಪಾವತಿ
ಗಾಗಿಯೂ ಅಷ್ಟು ಹಣ ಇತ್ತು ಎನ್ನಲಾಗಿದೆ. ಅಡಿಕೆ ಮಾರಿದ ಹಣ, ಬೀಡಿ ಬೋನಸ್‌ ಪಾವತಿಗಾಗಿ ತಂದಿದ್ದ ಹಣ ಮನೆಯಲ್ಲಿತ್ತು ಎಂಬುದಾಗಿ ಮನೆಯವರು ಹೇಳಿಕೊಂಡಿದ್ದಾರೆ.

ಹತ್ತಿರದಲ್ಲಿಲ್ಲ ಬೇರೆ ಮನೆ
ಸುಲೈಮಾನ್‌ ಹಾಜಿಯವರ ಮನೆಯ ಸಮೀಪ ಬೇರೆ ಮನೆಗಳಿಲ್ಲ. ಕೊಂಚ ದೂರದಲ್ಲಿ ಅವರದೇ ಎರಡು ಬೀಡಿ ಬ್ರ್ಯಾಂಚ್‌ಗಳಿವೆ. ಅದಾದ ಬಳಿಕ ಅವರದೇ ಹಳೆಯ ಮನೆಯೊಂದಿದೆ.

ಬೂಟು ಧರಿಸಿಯೇ ಪ್ರವೇಶ
ದರೋಡೆಕೋರರು ಮನೆಯೊಳಗೆ ಬೂಟು ಧರಿಸಿಯೇ ಪ್ರವೇಶಿಸಿದ್ದರು ಎಂದು ಮನೆಯವರು ತಿಳಿಸಿದ್ದಾರೆ.
ಪೊಲೀಸರಿಗೆ ದೂರು ತಡರಾತ್ರಿ 11.30ರ ವೇಳೆಗೆ ದರೋಡೆಕೋರರು ತೆರಳಿದ್ದರೂ ಮನೆಯವರೆಲ್ಲರ ಮೊಬೈಲ್‌ ಫೋನ್‌ಗಳನ್ನು ಕಿತ್ತುಕೊಂಡು ಹೋಗಿದ್ದರಿಂದ ತತ್‌ಕ್ಷಣಕ್ಕೆ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮಧ್ಯರಾತ್ರಿ 1 ಗಂಟೆಯ ವೇಳೆಗೆ ವಿಟ್ಲ ಪೊಲೀಸ್‌ ಠಾಣೆಗೆ ತೆರಳಿ ಪ್ರಕರಣದ ಮಾಹಿತಿ ನೀಡಲಾಯಿತು.

ದೂರಿನ ವಿವರ
ಸುಲೈಮಾನ್‌ ಅವರ ಪುತ್ರ ಮಹಮ್ಮದ್‌ ಇಕ್ಬಾಲ್‌ (27) ನೀಡಿರುವ ದೂರಿನ ವಿವರ ಹೀಗಿದೆ: ಶುಕ್ರವಾರ ರಾತ್ರಿ 8.30ರ ಸುಮಾರಿಗೆ ನಮ್ಮ ಮನೆಗೆ ಕಾರಿನಲ್ಲಿ 6 ಜನ ಅಪರಿಚಿತರು ಬಂದು ತಮ್ಮನ್ನು ಇಡಿ ಅಧಿಕಾರಿ ಗಳು ಎಂದು ಪರಿಚಯಿಸಿಕೊಂಡು, ಮನೆ ಪರಿಶೀಲನೆಗೆ ಆದೇಶ ಹೊಂದಿರುವುದಾಗಿ ತಿಳಿಸಿದರು. ಮನೆಯಲ್ಲಿದ್ದ ಎಲ್ಲರ ಮೊಬೈಲ್‌ಗ‌ಳನ್ನು ತಮ್ಮ ವಶಕ್ಕೆ ತೆಗೆದುಕೊಂಡ ಬಳಿಕ ಅವರಲ್ಲಿ ಕೆಲವರು ಮನೆ ಯಲ್ಲಿ ಹುಡುಕತೊಡಗಿದರು. ಬಳಿಕ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25ರಿಂದ 30 ಲಕ್ಷ ರೂ. ಹಣವನ್ನು ತೆಗೆದುಕೊಂಡು, “ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳುವಂತಿಲ್ಲ. ಹಾಗಾಗಿನಿಮ್ಮನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದರು. ಬಳಿಕ 11.30ರ ಸುಮಾರಿಗೆ ದರೋಡೆಕೋರರು ಹೊರಟು, ಈ ಹಣಕ್ಕೆ ಸೂಕ್ತ ದಾಖಲೆಗಳನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಗೆ ನೀಡಿ ಪಡೆದುಕೊಳ್ಳಿ ಎಂದು ಹೇಳಿ ಪರಾರಿಯಾದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಟಾಪ್ ನ್ಯೂಸ್

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Women’s Ashes Series: Big Fight between Australia-England

Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್‌ ಬಿಗ್‌ ಫೈಟ್‌

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

HD-swamy

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್‌ ಧನ್‌ಕರ್‌

Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್‌ ಧನ್‌ಕರ್‌

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

2

Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್‌  ಸೇವೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Two more children test positive for HMP virus: Number of cases in the country rises to 7

HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್‌: ದೇಶದಲ್ಲಿ 7ಕ್ಕೇರಿದ ಕೇಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

Women’s Ashes Series: Big Fight between Australia-England

Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್‌ ಬಿಗ್‌ ಫೈಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.