Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಸವರ್ಣೀಯರಿಂದ ಸವರ್ಣೀಯರಿಗೆ ಬಹಿಷ್ಕಾರ ; ಚಾ.ನಗರ ಜಿಲ್ಲೇಲಿ ಘಟನೆ : ಪೊಲೀಸ್ ಠಾಣೆಗೆ 3 ಬಾರಿ ದೂರು ಕೊಟ್ಟರೂ ಕ್ರಮವಿಲ್ಲ ; ನ್ಯಾಯಕ್ಕೆ ಮೊರೆ
Team Udayavani, Jan 4, 2025, 1:27 PM IST
ಯಳಂದೂರು (ಚಾಮರಾಜ ನಗರ): ಪರಿಶಿಷ್ಟ ವರ್ಗಕ್ಕೆ ಸೇರಿದ ಕುಟುಂಬಕ್ಕೆ ಮನೆ ಬಾಡಿಗೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮದ ಸವರ್ಣೀಯ ಮುಖಂಡರು, ಸವರ್ಣೀಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಪ್ರಕರಣ ತಾಲೂಕಿನ ಅಗರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಲಿಂಗಾಯಿತ ಬಡಾ ವಣೆಯ ಮಠದ ಬೀದಿಯಲ್ಲಿ ವಾಸವಾಗಿರುವ ವೀರಣ್ಣ, ಗೌರಮ್ಮ ಹಾಗೂ ಇವರ ಮಗ ವಿ. ಸುರೇಶ ಎಂಬುವರೇ ಬಹಿಷ್ಕಾರಕ್ಕೆ ಒಳಗಾದವರು.
ಕಳೆದ 10 ತಿಂಗಳ ಹಿಂದೆ ವೀರಣ್ಣ ಪಾಲಿಗೆ ಬಂದ ಮನೆಯೊಂದನ್ನು ಪರಿಶಿಷ್ಟ ಪಂಗಡದ ನಾಯಕ ಜನಾಂಗಕ್ಕೆ ಸೇರಿದ ಕುಟುಂಬಕ್ಕೆ ಮನೆ ಬಾಡಿಗೆಗೆ ನೀಡಿದ್ದಾರೆ. ಅಲ್ಲಿಂದಾಚೆ ವೀರಣ್ಣ ಕುಟುಂಬವನ್ನು ಇವರದ್ದೇ ಜನಾಂಗದವರು ಸೇರುವ ಧಾರ್ಮಿಕ ಸಭೆ ಸಮಾರಂಭಗಳು ಹಾಗೂ ದೇಗುಲಕ್ಕೆ ಬಾರದಂತೆ ತಡೆ ಯೊಡ್ಡುತ್ತಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಈ ಬಗ್ಗೆ ವೀರಣ್ಣ ಅವರ ಪುತ್ರ ವಿ.ಸುರೇಶ್ ಅಗರ-ಮಾಂಬಳ್ಳಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ಮೂರು ಬಾರಿ ಗ್ರಾಮದ ಯಜಮಾನರು ಹಾಗೂ ಕೆಲ ಮುಖಂಡರ ವಿರುದ್ಧ ದೂರು ಕೂಡ ಸಲ್ಲಿಸಿದ್ದಾರೆ.
ಅಲ್ಲಿ ಇವರಿಗೆ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ದೂರಿನ ಪ್ರತಿಯಲ್ಲಿ “ತಿಳಿವಳಿಕೆ ನೀಡಿ ದೂರನ್ನು ಮುಕ್ತಾಯಗೊಳಿಸಲಾಗಿದೆ’ ಎಂದು ಮಾಹಿತಿ ನೀಡಲಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.
ವೃದ್ಧ ದಂಪತಿ, ಅವಿವಾಹಿತ ಮಗ: 80 ವರ್ಷದ ವೀರಣ್ಣ ಅವರ ಜತೆ ಪತ್ನಿ ಗೌರಮ್ಮ ಹಾಗೂ ಮಗ ಸುರೇಶ ವಾಸವಾಗಿದ್ದಾರೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಸುರೇಶ ಅವಿವಾಹಿತ. ಪೂರ್ವಜರ ಕಾಲದಿಂದಲೂ ನಾವು ಇಲ್ಲೇ ವಾಸವಾಗಿದ್ದೇವೆ. ಪ್ರತೀ ತಿಂಗಳೂ ನಮ್ಮ ಜಾತಿಯ ಸಭೆ, ಪೂಜೆ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಎಲ್ಲರಂತೆ ನಮಗೂ ಆಹ್ವಾನ ನೀಡಲಾಗುತ್ತಿತ್ತು. ಆಸ್ತಿ ಭಾಗದ ನಂತರ ಪಾಲಿಗೆ ಬಂದ ಮನೆಯೊಂದನ್ನು 10 ತಿಂಗಳ ಹಿಂದೆ ದುರಸ್ತಿ ಮಾಡಿಸಿ, ನಾಯಕ ಜನಾಂಗದ ಕುಟುಂಬವೊಂದಕ್ಕೆ ಬಾಡಿಗೆ ನೀಡಲಾಯಿತು. ಅಲ್ಲಿಂದ ಪರಿಶಿಷ್ಟರಿಗೆ ಮನೆ ನೀಡಬಾರದು ಎಂಬ ಆಕ್ಷೇಪ ವ್ಯಕ್ತವಾಯಿತು. ಇದಕ್ಕೆ ಸುರೇಶ ಒಪ್ಪದಿದ್ದಾಗ ನಮ್ಮನ್ನು ಧಾರ್ಮಿಕ ಕಾರ್ಯಕ್ರಮಗಳಿಂದ ದೂರು ಇಡಲಾಯಿತು ಎಂಬುದು ವೀರಣ್ಣ ಕುಟುಂಬದ ಆರೋಪ.
ಪೊಲೀಸರಿಂದಲೂ ನ್ಯಾಯ ಸಿಕ್ಕಿಲ್ಲ: ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ನಾನು 3 ಬಾರಿ ದೂರು ನೀಡಿದ್ದೇನೆ. ಡಿವೈಎಸ್‌ಪಿಗೂ ದೂರು ನೀಡಿದ್ದೇನೆ. ಠಾಣೆಗೂ ಹೋಗಿದ್ದೇನೆ. ಅಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಬದಲು ನನಗೆ ತಿಳಿವಳಿಕೆ ನೀಡಿ ಕಳುಹಿಸಲಾಗಿದೆ. ನಮ್ಮ ಜಾತಿಯವರು ನಡೆಸುವ ಸಭೆಗಳಿಗೆ ಹೋದಾಗ ನಿಂದಿಸಿ ಆಚೆ ಕಳುಹಿಸಲಾಗಿದೆ. ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಾಯಿಯ ಆರೋಗ್ಯವೂ ಸರಿಯಿಲ್ಲ. ಘಟನೆ ಬಳಿಕ ಪೋಷಕರ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ನಾನೂ ಅಸಹಾಯಕನಾಗಿದ್ದೇನೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಸುರೇಶ ಅಳಲು ತೋಡಿಕೊಂಡರು.
ಯಾಕೆ ಬಹಿಷ್ಕಾರ? ಎಸ್‌ಟಿ ನಾಯಕ ಜನಾಂಗಕ್ಕೆ ಸೇರಿದ ಕುಟುಂ ಬಕ್ಕೆ ವೀರಣ್ಣ ಮನೆ ಬಾಡಿಗೆ ನೀಡಿದರು. ಇದಕ್ಕೆ ಇವರದ್ದೇ ಜನಾಂಗದವರು ಆಕ್ಷೇಪ ವ್ಯಕ್ತಪಡಿಸಿ, ಇಡೀ ಕುಟುಂಬ ವನ್ನು ಸಭೆ, ಧಾರ್ಮಿಕ ಕಾರ್ಯಕ್ರ ಮ ಗಳಿಂದ ದೂರ ಇಡಲಾಯಿತು.
ಮಾಹಿತಿ ಪಡೆದು ಕ್ರಮ ಸುರೇಶ ಎಂಬುವವರು ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ನಾನು ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ವಹಿಸುತ್ತೇನೆ. ಈ ಬಗ್ಗೆ ದೂರುದಾರರು ಜಿಲ್ಲಾಧಿಕಾರಿಗಳಿಗೂ ದೂರು ನೀಡಲಿ. ●ಡಾ.ಬಿ.ಟಿ.ಕವಿತಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.