Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್ ಚೌಟ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಮನವಿ ಸಲ್ಲಿಸಿದ ದಕ್ಷಿಣ ಕನ್ನಡ ಸಂಸದ
Team Udayavani, Jan 4, 2025, 8:37 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸೈನಿಕ ಶಾಲೆ ಹಾಗೂ ಮಿಲಿಟರಿ ನೆಲೆ ಸ್ಥಾಪನೆ ಸೇರಿದಂತೆ ಪ್ರಮುಖ ರಕ್ಷಣಾ ಮೂಲಸೌಕರ್ಯ ಒದಗಿಸುವ ಒಳಗೊಂಡ ಬೇಡಿಕೆಗಳ ಸಂಸದ ಕ್ಯಾ.ಬ್ರಿಜೇಶ್ ಚೌಟ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರನ್ನು ಶನಿವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ಮಂಗಳೂರಿನಲ್ಲಿ ಸೈನಿಕ ಶಾಲೆ ಆರಂಭಿಸುವ ಜೊತೆಗೆ ಈ ಭಾಗದಲ್ಲಿ ಮಿಲಿಟರಿ ಬೇಸ್ ಸ್ಥಾಪಿಸುವುದರಿಂದ ಯುವಜನತೆ ದೇಶ ಸೇವೆಯತ್ತ ಪ್ರೇರೇಪಿಸುವುದಕ್ಕೆ ಅನುಕೂಲವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ವಿಶ್ವ ದರ್ಜೆ ಶಿಕ್ಷಣ ಸಂಸ್ಥೆಗಳಿರುವ ಹಿನ್ನೆಲೆಯಲ್ಲಿ ಸೈನಿಕ ಶಾಲೆ ಸ್ಥಾಪಿಸುವುದು ಶೈಕ್ಷಣಿಕವಾಗಿಯೂ ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ರಕ್ಷಣಾ ಕ್ಷೇತ್ರಕ್ಕೆ ಮಂತ್ರಿಯಾಗಿ ಗಮನಾರ್ಹ ಕೊಡುಗೆ ನೀಡಿರುವ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡೀಸ್, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ಯಾಪ್ಟನ್ ಪ್ರಾಂಜಲ್ ಹಾಗೂ ಕಮಾಂಡರ್ ಜಾರ್ಜ್ ಮಾರ್ಟಿಸ್ ಅವರ ಬಲಿದಾನವನ್ನು ಸದಾ ಸ್ಮರಿಸುವಂತಹ ಕೆಲಸ ಕಾರ್ಯಗಳು ಮಂಗಳೂರಿನಲ್ಲಿ ರಕ್ಷಣಾ ಸಚಿವಾಲಯದಿಂದ ಆಗಬೇಕು ಎಂದು ಕ್ಯಾ.ಚೌಟ ಕೋರಿದ್ದಾರೆ.
ತಮ್ಮ ಭೇಟಿ ವೇಳೆ ಕ್ಯಾ. ಚೌಟ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ತರಬಹುದಾದ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರಾಜನಾಥ್ ಸಿಂಗ್ ರಿಂದ ಮಾರ್ಗದರ್ಶನ ಕೂಡ ಪಡೆದುಕೊಂಡರು. ಇದೇ ವೇಳೆ ಕ್ಯಾ.ಚೌಟ ಅವರು ಸಚಿವ ರಾಜನಾಥ್ ಸಿಂಗ್ ಅವರಿಗೆ ಕರಾವಳಿಯ ಸಂಸ್ಕೃತಿಯ ಸಂಕೇತವಾದ ಕಂಬಳದ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
Team India; ಆಯ್ಕೆಗಾರರ ಕೈಯಲ್ಲಿ ರೋಹಿತ್, ವಿರಾಟ್ ಕೊಹ್ಲಿ ಭವಿಷ್ಯ: ಗಾವಸ್ಕರ್
Thalassery: ಸಿಪಿಎಂ ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್‌ನ 9 ಸದಸ್ಯರಿಗೆ ಜೀವಾವಧಿ ಶಿಕ್ಷೆ
EVM: ಮತಯಂತ್ರ ತಿರುಚಲು ಸಾಧ್ಯವಿಲ್ಲ, ಅವು ಸುರಕ್ಷಿತ: ರಾಜೀವ್‌ಕುಮಾರ್
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.