Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

ಪುರುಷ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಬರೆ, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಾರ್ಟಿ ಫಂಡ್‌ಗೆ ದರ ಹೆಚ್ಚಳ ಎಂದು ಬಿಜೆಪಿ ಟೀಕೆ

Team Udayavani, Jan 4, 2025, 9:37 PM IST

KSRTC

ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿ ಸರಕಾರಿ ಸ್ವಾಮ್ಯದ ಬಿಎಂಟಿಸಿ, ಎನ್​ಡಬ್ಲ್ಯುಕೆಆರ್​ಟಿಸಿ ಹಾಗೂ ಕೆಕೆಆರ್​ಟಿಸಿಯ 4 ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರ ಶೇ. 15ರಷ್ಟು ಹೆಚ್ಚಳದ ಆದೇಶ ಶನಿವಾರ (ಜ.4) ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಸುವಿಹಾರಿ ಬಸ್‌ ಹೊರತುಪಡಿಸಿ ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಿಗೆ ದರ ಹೆಚ್ಚಳ ಮಾಡಲಾಗಿದ್ದು, ಪುರುಷ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಬರೆ ಬಿದ್ದಿದೆ.

ವೋಲ್ವೋ ಸೇರಿ ಪ್ರತಿಷ್ಠಿತ (ಸುವಿಹಾರಿ) ಸೇವೆಗಳಿಗೆ ದರ ಪರಿಷ್ಕರಣೆ ಅನ್ವಯವಾಗುವುದಿಲ್ಲ. ಇದು ನಿಗಮದ ಮಟ್ಟದಲ್ಲೇ ಕಾಲಕಾಲಕ್ಕೆ ನಿರ್ಣಯ ಆಗಲಿದೆ. ಈ ಮಧ್ಯೆ ಬಿಎಂಟಿಸಿಯಲ್ಲಿ ಸಾಮಾನ್ಯ ಬಸ್‌ ದರಗಳ ಏರಿಕೆ ಹೊರತಾಗಿಯೂ ಹವಾನಿಯಂತ್ರಿತ ವಜ್ರ, ವಾಯುವಜ್ರ ಬಸ್‌ಗಳ ಯಾನ ದರಗಳನ್ನು ಏರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಳೆದ ಗುರುವಾರ ನಡೆದ ಸಚಿವ ಸಂಪುಟದ ತೀರ್ಮಾನದಂತೆ ಯಾನದರ ಪರಿಷ್ಕರಣೆಗೊಳಿಸಿದ ಅಧಿಕೃತ ಆದೇಶ ಶನಿವಾರ ಹೊರಬಿದ್ದಿದೆ. ಟಿಕೆಟ್‌ ಮೂಲ ಪ್ರಯಾಣ ದರದಲ್ಲಿ 7 ರೂ.ಗಳಿಂದ 115 ರೂ. ವರೆಗೂ ಹೆಚ್ಚಳವಾಗಿದೆ. ಸಿಬಂದಿ ವೇತನ, ಇಂಧನ ಮತ್ತು ನಿರ್ವಹಣೆ ವೆಚ್ಚದ ಹೆಚ್ಚಳವನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ನೌಕರರ ವೇತನ ಪರಿಷ್ಕರಣೆಯಿಂದಾಗಿ ದೈನಂದಿನ ವೇತನದ ವೆಚ್ಚವು 12.85 ಕೋಟಿ ರೂ.ಗಳಿಂದ 18.36 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಇದರಿಂದಾಗಿ ಪ್ರತೀ ದಿನ 5.51 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್​ಡಬ್ಲ್ಯುಕೆಆರ್​ಟಿಸಿ) ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (ಕೆಕೆಆರ್​ಟಿಸಿ)ಗಳಲ್ಲಿ 2020ರಲ್ಲಿ ಪ್ರಯಾಣದ ದರ ಪರಿಷ್ಕರಣೆ ಮಾಡಲಾಗಿತ್ತು.

ಪ್ರತಿಷ್ಠಿತ ಬಸ್‌ಗಳಿಗೆ ದರ ಏರಿಕೆ ಅನ್ವಯಿಸುವುದಿಲ್ಲ
ಜಿಎಸ್‌ಟಿ (ಸರಕು ಸೇವಾ ತೆರಿಗೆ) ಹವಾನಿಯಂತ್ರಿತ (ಎಸಿ) ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಜತೆಗೆ ಪ್ರತಿಷ್ಠಿತ ಬಸ್‌ಗಳ ಪ್ರಯಾ ಣ ದರ ಏರಿಕೆಯು ನಿಗಮದ ಮಟ್ಟದಲ್ಲೇ ಕಾಲ ಕಾಲಕ್ಕೆ ನಡೆಯುವ ಪ್ರಕ್ರಿಯೆ ಆಗಿರುತ್ತದೆ. ಆ ಹಿನ್ನೆಲೆಯಲ್ಲಿ ಈಗ ಏರಿಕೆ ಮಾಡಲಾಗಿರುವ ಟಿಕೆಟ್‌ ದರವು ಅವುಗಳಿಗೆ ಅನ್ವಯಿಸುವುದಿಲ್ಲ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಸರಕಾರಿ ಬಸ್‌ಗಳ ಟಿಕೆಟ್‌ ದರವನ್ನು ಹೋಲಿಸಿದಲ್ಲಿ ಕರ್ನಾಟಕದಲ್ಲಿ ಸಾರಿಗೆ ಬಸ್‌ದ ಕಡಿಮೆಯಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣ ದರ ಏರಿಕೆ: ಎಲ್ಲಿಗೆ ಎಷ್ಟು?
ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರದ ಘಟಕಗಳಿಗೆ ತೆರಳುವ ಕೆಎಸ್ಸಾರ್ಟಿಸಿ ವೇಗದೂತ ಬಸ್‌ ಪ್ರಯಾಣದ ದರ ಪಟ್ಟಿ ಈ ಕೆಳಕಂಡಂತಿದೆ.

ಊರು –            ಹಿಂದಿನ ಪ್ರಯಾಣ ದರ     –      ಪರಿಷ್ಕೃತ ಪ್ರಯಾಣ ದರ
ತುಮಕೂರು               80                                           91

ಮಂಗಳೂರು            398                                          454

ಉಡುಪಿ                    452                                          516

ಪುತ್ತೂರು                   401                                          457

ಮಡಿಕೇರಿ                   265                                          313

ಶಿವಮೊಗ್ಗ                    312                                          356

ಕಾರವಾರ                  614                                           699

ಮಂಡ್ಯ                      116                                            131

ಹಾಸನ                     217                                            246

ಚಿಕ್ಕಬಳ್ಳಾಪುರ            72                                              81

ದಾವಣಗೆರೆ               320                                             362

ಮೈಸೂರು                141                                             162

ಚಿಕ್ಕಮಗಳೂರು        284                                             323

ಚಿತ್ರದುರ್ಗ              242                                              274

ರಾಮನಗರ             45                                                 52

ಚಾಮರಾಜನಗರ     179                                              206

ಕೋಲಾರ               74                                                 85

ಕಲಬುರಗಿ              706                                             805

ಬೀದರ್‌                 821                                             936

ರಾಯಚೂರು          560                                           638

ಯಾದಗಿರಿ              662                                           755

ಬಳ್ಳಾರಿ                 374                                            424

ಹೊಸಪೇಟೆ           402                                             455

ಕೊಪ್ಪಳ                   447                                          506

ವಿಜಯಪುರ            691                                             779

ಬೆಳಗಾವಿ                617                                            697

ಚಿಕ್ಕೋಡಿ                 708                                           801

ಬಾಗಲಕೋಟೆ         605                                             685

ಧಾರವಾಡ              523                                              591

ಹುಬ್ಬಳ್ಳಿ                   499                                              563

ಶಿರಸಿ                      455                                               520

ಗದಗ                      525                                                593

ಹಾವೇರಿ                  420                                                474

ಬಿಜೆಪಿ ಟೀಕೆ: 
ಪರ ರಾಜ್ಯಗಳ ಚುನಾವಣೆ ಖರ್ಚಿಗಾಗಿ ಕನ್ನಡಿಗರ ಜೇಬಿಗೆ ಕನ್ನ ಹಾಕುವ ಸಂಪ್ರದಾಯವನ್ನು ಭ್ರಷ್ಟ ಕಾಂಗ್ರೆಸ್‌  ಸರ್ಕಾರ ಮುಂದುವರಿಸಿದೆ!! ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ಸುಳ್ಳು ಹೇಳಿ ಈಗ ಏಕಾಏಕಿ ಬಸ್‌ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿರುವುದು ಸಹ ಮುಂಬರುವ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಪಾರ್ಟಿ ಫಂಡ್‌ಗೆ!! ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿ.ಕೆ.ಶಿವಕುಮಾರ್‌ ಅವರೇ ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರಿಗೆ ಇನ್ನೆಷ್ಟು ತೊಂದರೆ ನೀಡುವಿರಿ..??!! ಎಂದು ಬಿಜೆಪಿ ಟೀಕಿಸಿದೆ. 

ಟಾಪ್ ನ್ಯೂಸ್

South Africa plan to play one Test before WTC Final

WTC “ಟೆಸ್ಟ್‌  ಫೈನಲ್‌’ಗೂ ಮುನ್ನ ಒಂದು ಟೆಸ್ಟ್‌ ಆಡಲು ದ. ಆಫ್ರಿಕಾ ಯೋಜನೆ

Indian astronomers discover the creation of a new galaxy!

Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

BJP Leader; ಇಂಡಿಯಾ ಗೇಟ್‌ಗೆ “ಭಾರತ್‌ ಮಾತಾ ದ್ವಾರ’ ಹೆಸರಿಡಿ: ಮೋದಿಗೆ ಪತ್ರ

BJP Leader; ಇಂಡಿಯಾ ಗೇಟ್‌ಗೆ “ಭಾರತ್‌ ಮಾತಾ ದ್ವಾರ’ ಹೆಸರಿಡಿ: ಮೋದಿಗೆ ಪತ್ರ

Pakistan; 6 brothers marry 6 sisters to save expenses!

Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!

EVM’s cannot be tampered with, they are safe: Rajiv Kumar

EVM: ಮತಯಂತ್ರ ತಿರುಚಲು ಸಾಧ್ಯವಿಲ್ಲ, ಅವು ಸುರಕ್ಷಿತ: ರಾಜೀವ್‌ಕುಮಾರ್‌

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

HD-swamy

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

South Africa plan to play one Test before WTC Final

WTC “ಟೆಸ್ಟ್‌  ಫೈನಲ್‌’ಗೂ ಮುನ್ನ ಒಂದು ಟೆಸ್ಟ್‌ ಆಡಲು ದ. ಆಫ್ರಿಕಾ ಯೋಜನೆ

Indian astronomers discover the creation of a new galaxy!

Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!

Shahrukh’s wife Gauri converted?: Deep fake photo viral

AI: ಶಾರುಖ್‌ ಪತ್ನಿ ಗೌರಿ ಮತಾಂತರ?: ಡೀಪ್‌ ಫೇಕ್‌ ಫೋಟೋ ವೈರಲ್‌

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

Mangaluru ಎಚ್‌ಎಂಪಿ ವೈರಸ್‌; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ

BJP Leader; ಇಂಡಿಯಾ ಗೇಟ್‌ಗೆ “ಭಾರತ್‌ ಮಾತಾ ದ್ವಾರ’ ಹೆಸರಿಡಿ: ಮೋದಿಗೆ ಪತ್ರ

BJP Leader; ಇಂಡಿಯಾ ಗೇಟ್‌ಗೆ “ಭಾರತ್‌ ಮಾತಾ ದ್ವಾರ’ ಹೆಸರಿಡಿ: ಮೋದಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.