Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Team Udayavani, Jan 5, 2025, 11:06 AM IST
ಮುಂಬಯಿ: ಬಹುತೇಕರಿಗೆ ಆನ್ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ ರುಚಿ ಸವಿಯುವ ಅಭ್ಯಾಸ ಇರುತ್ತದೆ. ಆದರೆ ಆರ್ಡರ್ ಮಾಡಿದ ಪಿಜ್ಜಾ ಸೇವಿಸುವ ಮುನ್ನ ಎಚ್ಚರವಾಗಿರಿ.!
ಈ ಮಾತನ್ನು ಹೇಳುವುದಕ್ಕೆ ಒಂದು ಕಾರಣವಿದೆ. ವ್ಯಕ್ತಿಯೊಬ್ಬರಿಗೆ ಪಿಜ್ಜಾದಲ್ಲಿ ಚಾಕುವಿನ ತುಂಡು ಸಿಕ್ಕಿದೆ.
ಪುಣೆ ಮೂಲದ ನಿವಾಸಿ ಅರುಣ್ ಕಾಪ್ಸೆ ಎನ್ನುವವರು ಇತ್ತೀಚೆಗೆ ಸ್ಪೈನ್ ರೋಡ್‌ನ ಜೈ ಗಣೇಶ್ ಎಂಪೈರ್‌ನಲ್ಲಿರುವ ಔಟ್‌ಲೆಟ್‌ನಿಂದ 596 ರೂಪಾಯಿ ಕೊಟ್ಟು ಪಿಜ್ಜಾವನ್ನು ಆರ್ಡರ್ ಮಾಡಿದ್ದಾರೆ.
ಇದನ್ನೂ ಓದಿ: UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ಆರ್ಡರ್ ಮನೆಗೆ ಬಂದ ಕೂಡಲೇ ಅರುಣ್ ಅದರ ರುಚಿ ನೋಡಲು ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಅರುಣ್ ಅವರಿಗೆ ಪಿಜ್ಜಾದಲ್ಲಿ ಏನೋ ಒಂದು ರೀತಿಯ ತುಂಡು ಕಾಣಲು ಸಿಕ್ಕಿದೆ. ಸೂಕ್ಷ್ಮವಾಗಿ ಇದನ್ನು ನೋಡಿದಾಗ ಅದು ಚೂಪಾದ ಚಾಕುವಿನ ತುಂಡಾಗಿತ್ತು. ಇದನ್ನು ನೋಡಿ ಅರುಣ್ ಶಾಕ್ ಆಗಿದ್ದಾರೆ.
ಇದಾದ ಬಳಿಕ ಅರುಣ್ ಈ ವಿಚಾರವನ್ನು ಔಟ್ಲೆಟ್ ಮ್ಯಾನೇಜರ್ ತಿಳಿಸಿದ್ದಾರೆ. ಆರಂಭದಲ್ಲಿ ಮ್ಯಾನೇಜರ್ ಹೀಗೆ ಆಗಿರಲು ಸಾಧ್ಯವಿಲ್ಲವೆಂದಿದ್ದಾರೆ. ಆ ಬಳಿಕ ಪಿಜ್ಜಾದಲ್ಲಿರುವ ಚಾಕುವಿನ ಫೋಟೋವನ್ನು ಕಳುಹಿಸಿದ್ದಾರೆ. ಕೂಡಲೇ ಮ್ಯಾನೇಜರ್ ಅರುಣ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಮ್ಯಾನೇಜರ್ ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡು, ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ. ಪಿಜ್ಜಾಕ್ಕೆ ಯಾವುದೇ ಹಣವನ್ನು ನೀಡುವುದು ಬೇಡವೆಂದು ಹೇಳಿದ್ದಾರೆ.
“ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಗಂಭೀರ ಸುರಕ್ಷತೆಯ ಅಪಾಯವಾಗಿದೆ. ಆ ಔಟ್‌ಲೆಟ್‌ನಿಂದ ಪಿಜ್ಜಾಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ’” ಎಂದು ಅರುಣ್ ಹೇಳಿದ್ದಾರೆ.
ಕಾಪ್ಸೆ ಅವರು ಈ ಸಂಬಂಧ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ದೂರು ನೀಡಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?
Bharatpol: ಅಂತಾರಾಷ್ಟ್ರೀಯ ಪೊಲೀಸ್ ಸಹಕಾರಕ್ಕೆ “ಭಾರತ್‌ಪೋಲ್’
Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.