UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ


Team Udayavani, Jan 5, 2025, 11:44 AM IST

7-

ಗಗನಚುಂಬಿಸುವ ಐಷಾರಾಮಿ ಕಟ್ಟಡಗಳಲ್ಲಿ ವಾಸಿಸುವ ಜನರು ಒಂದೆಡೆಯಾದರೆ, ತುತ್ತು ಅನ್ನಕ್ಕೂ ದಿನದ ದುಡಿಮೆ ನಂಬಿ ಮಂಡಿ ಚಾಚಿಯೂ ಮಲಗಲು ಅಸಾಧ್ಯವಾದ ಮನೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಮತ್ತೂಂದೆಡೆ. ಇದು ಒಂದೇ ನಾಣ್ಯದ ಎರಡು ಮುಖದ ರೀತಿ ಕಾಣುವ ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ಎಂಬ ಬೃಹತ್‌ ನಗರದ ಪರಿಸ್ಥಿತಿ. ಮುಂಬಯಿ ಮಹಾನಗರದ ಹೃದಯ ಭಾಗದಲ್ಲಿರುವ ಏಷ್ಯಾದ ಅತೀದೊಡ್ಡ ಕೊಳಗೇರಿ ಎಂದೇ ಕರೆಯುವ ಧಾರಾವಿ ಪ್ರದೇಶವು ಸುಮಾರು 590 ಎಕರೆ ಜಾಗದಲ್ಲಿ ಹೊಂದಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ.

ಇಸಿಹಾಸವನ್ನು ತಿರುಗಿ ನೋಡಿದಾಗ ಧಾರಾವಿ ಕೊಳಗೇರಿಗೆ ಅದರದ್ದೇ ಆದ ಬೆಳೆದುಬಂದ ಹಾದಿಯುಂಟು. ಸಮುದ್ರ ತಟದಲ್ಲಿರುವ ನಗರಕ್ಕೆ ಸ್ವಾತಂತ್ರ್ಯೋತ್ತರ ಭಾರತದಲ್ಲೇ ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದವು.ಅನಂತರ ಕೈಗಾರಿಕಾ ಕ್ರಾಂತಿಯಿಂದ ಕೋಲ್ಕತಾ ಹಾಗೂ ಮುಂಬಯಿ ನಗರಗಳಲ್ಲಿ ಮಾತ್ರವೇ ಕೈಗಾರಿಕೆಗಳು ಸ್ಥಾಪನೆಯಾದವು. ವಿವಿಧ ರೀತಿಯ ಉದ್ಯಮಗಳು ಉದ್ಯಮಿಗಳ ಬಂಡವಾಳದಿಂದ ಪ್ರಾರಂಭವಾದವು.

ಅದರಲ್ಲಿ ಮುಂಬಯಿ ನಗರವು ಅತೀ ಹೆಚ್ಚು ಮಹತ್ವವನ್ನು ಪಡೆಯುವಲ್ಲಿ ಸಾಧ್ಯವಾಯಿತು ಅದಕ್ಕೇ ಕಾರಣ ದೇಶದ ಮಧ್ಯ ಭಾಗದಲ್ಲಿರುವ ಕಾರಣಕ್ಕೆ ಕೆಲಸಗಳನ್ನು ಅರಸಿಕೊಂಡು ದಕ್ಷಿಣ ಹಾಗೂ ಉತರ್ತ ಭಾರತದಿಂದ ವಲಸಿಗರು ಬರಲು ಪ್ರಾರಂಭಿಸಿದರು. ಅಂತಹ ಐಷಾರಾಮಿ ನಗರಕ್ಕೆ ಅರಸಿ ಬಂದ ಕಾರ್ಮಿಕರಿಗೆ ಬರುವ ದಿನಗೂಲಿಯಲ್ಲಿ ವಾಸಿಸಲು ಜಾಗವಿರದೇ ಜೀವನ ಸಾಗಿಸಲು ದುಸ್ತರವಾದಾಗ 1883ರಲ್ಲಿ ರೂಪಗೊಂಡ ಕೊಳಗೇರಿ ಪ್ರದೇಶವೇ ಧಾರಾವಿ.

ಸಾಮಾನ್ಯವಾಗಿ ಮನೆ ಬಾಡಿಗೆಗಳು 15 ರಿಂದ 20 ಸಾವಿರದವರೆಗೆ ಇದ್ದರೆ, ಧಾರಾವಿಯಲ್ಲಿ ಕೇವಲ ಎರಡೂ¾ರು ಸಾವಿರ ರೂಪಾಯಿಯಲ್ಲಿ ಮನೆಗಳು ಬಾಡಿಗೆಯ ರೂಪದಲ್ಲಿ ದೊರೆಯುತ್ತವೆ. ಇದೇ ಕಾರಣಕ್ಕೆ ದೇಶದ ನಾನಾ ಮೂಲೆಗಳಿಂದ ಬರುವ ಕೂಲಿ ಕಾರ್ಮಿಕರು ಧಾರಾವಿ ಪ್ರದೇಶದಲ್ಲಿ ತಂಗುತ್ತಾರೆ. ಮುಂಬಯಿ ಎಂಬ ಮಹಾನಗರದಲ್ಲಿ ಮನುಷ್ಯನು ಹಗಲು ರಾತ್ರಿ ಎನ್ನದೇ ಯಂತ್ರದಂತೆ ದುಡಿಯುತ್ತಾನೆ. ವಿಶ್ವದಲ್ಲೇ ಅತೀ ಹೆಚ್ಚು ಜನ ಸಾಂದ್ರತೆ ಇರುವ ಪ್ರದೇಶವೆಂದು ಇದನ್ನು ಕರೆಯಲಾಗುತ್ತದೆ.

ಮಿಥಿಯ ನದಿ ದಡದಲ್ಲಿರುವ ಧಾರಾವಿ ಪ್ರದೇಶವು ಚರ್ಮೋದ್ಯಮ, ಬಟ್ಟೆ ತಯಾರಿಕೆ, ಚಿನ್ನ ತಯಾರಿ ಸೇರಿದಂತೆ 5 ಸಾವಿರಕ್ಕೂ ಅಧಿಕ ಗುಡಿ ಕೈಗಾರಿಕೆಗಳು ಇಲ್ಲಿ ನಡೆಯುತ್ತವೆ. ಪ್ರತಿ ವರ್ಷಕ್ಕ 650 ರಿಂದ 1000 ಬಿಲಿಯನ್‌ ಡಾಲರ್‌ನಷುx ವ್ಯಾಪಾರ ವಹಿವಾಟು ಇಲ್ಲಿ ನಡೆಯುತ್ತದೆ ಎಂದು ಅಂದಾಜಿಸಲಾಗುತ್ತದೆ. ದೇಶದ ಆರ್ಥಿಕ ಪ್ರಗತಿ ಧಾರಾವಿ ಪ್ರದೇಶವೂ ಒಮದು ಪ್ರಮುಖ ಭಾಗವೇ ಎಂದು ಹೇಳಿದರೆ ತಪ್ಪಾಗಲಾರದು.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನಿಯಂತ್ರಣಕ್ಕೆ ಮಹಾರಾಷ್ಟÅ ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದು ಸುಳ್ಳಲ್ಲ. ಈ ಹಿಂದೆ 1786ರಲ್ಲಿ ಧಾರಾವಿ ಪ್ರದೇಶಕ್ಕೆ ಪ್ಲೇಗ್‌ ಎಂಬ ಮಹಾಮಾರಿ ಒಕ್ಕರಿಸಿ ಇಡೀ ಅರ್ಧದಷುx ಜನರನ್ನೇ ಬಲಿತೆಗೆದುಕೊಂಡಿತ್ತು. ಇದೇ ಕಾರಣಕ್ಕೆ ಸರಕಾರಗಳಿಗೆ ನಿಯಂತ್ರಣದ ಸವಾಲಾಗಿತ್ತು. ಆದರೆ ಅಂತಹ ಅನಾಹುತ ಆಗಲಿಲ್ಲ ಎಂದು ಇಡೀ ದೇಶವೆ ನಿಟ್ಟುಸಿರು ಬಿಟ್ಟಿತ್ತು.

ಕೇವಲ ವಾಸಿಸಲು ಪ್ರದೇಶವಾಗಿರದೇ ಅನೇಕ ವಿದೇಶಿಗರು ಧಾರಾವಿ ವೀಕ್ಷಿಸಲು ಬರುತ್ತಾರೆ. ಗೈಡ್‌ಗಳ ಸಹಾಯದಿಂದ ಅಲ್ಲಿನ ಸಂಪೂರ್ಣ ಚಿತ್ರಣವನ್ನು ಪಡೆಯುತ್ತಾರೆ. ದಿವಾರ್‌, ಸಲಾಂ ಬಾಂಬೆ ಸೇರಿದಂತೆ ಹಲವಾರು ಸಿನೆಮಾಗಳ ಚಿತ್ರಿಕರಣವೂ ಇಲ್ಲಿ ನಡೆದಿದೆ.

-ವಿಜಯಕುಮಾರ ಎಚ್‌.

ಗದಗ

ಟಾಪ್ ನ್ಯೂಸ್

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.