Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video


Team Udayavani, Jan 5, 2025, 12:06 PM IST

Sydney Test: Virat reminds Australian audience of sandpaper case

ಸಿಡ್ನಿ: ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವು 3-1 ಅಂತರದಿಂದ ಸೋಲು ಕಂಡಿದೆ. ಸಿಡ್ನಿಯಲ್ಲಿ ಪಂದ್ಯವನ್ನು ಸೋಲುವುದರ ಮೂಲಕ ಭಾರತವು ಬಿಜಿಟಿ ಸರಣಿಯನ್ನು ದಶಕದ ಬಳಿಕ ಕಳೆದುಕೊಂಡಿದೆ. 162 ರನ್‌ ಗುರಿ ಪಡೆದ ಆಸ್ಟ್ರೇಲಿಯಾ ತಂಡವು ನಾಲ್ಕು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

ರೋಹಿತ್‌ ಶರ್ಮಾ ಮತ್ತು ಜಸ್ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಮೈದಾನದಲ್ಲಿ ನಾಯಕತ್ವ ಜವಾಬ್ದಾರಿ ಹೊತ್ತಿದ್ದ ವಿರಾಟ್‌ ಕೊಹ್ಲಿ (Virat Kohli) ಅವರು ಆಸ್ಟ್ರೇಲಿಯನ್ನರಿಗೆ ಸ್ಯಾಂಡ್‌ ಪೇಪರ್‌ ಹಗರಣದ (Sandpaper Case) ನೆನಪು ಮಾಡಿದರು. ಸಿಡ್ನಿಯಲ್ಲಿ ಭಾರತ ತಂಡವನ್ನು ಅಣಕವಾಡಿದ ಪ್ರೇಕ್ಷಕರನ್ನು ಸ್ಯಾಂಡ್‌ ಪೇಪರ್‌ ಹಗರಣದ ನೆನಪು ಮಾಡಿಸಿ ಬಾಯಿ ಮುಚ್ಚಿಸಿದರು.

ಆಸ್ಟ್ರೇಲಿಯನ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು 2018 ರಲ್ಲಿ ‘ಸ್ಯಾಂಡ್ ಪೇಪರ್ ಹಗರಣ’ದಲ್ಲಿ ಭಾಗಿಯಾಗಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಸಿಡ್ನಿ ಟೆಸ್ಟ್‌ನ 2 ನೇ ದಿನದ ಆಟದ ನಂತರ, ಕೆಲವು ಅಭಿಮಾನಿಗಳು ಭಾರತ ತಂಡವು ಇದೇ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆಟಗಾರನ ಬೂಟುಗಳಿಂದ ಹೊರಬರುವ ಕಾಗದದ/ಬಟ್ಟೆಯ ತುಣುಕುಗಳ ವೀಡಿಯೊಗಳು ಹೊರಹೊಮ್ಮಿದ ನಂತರ ಇದೇ ರೀತಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು.

ಮೂರನೇ ದಿನದಾಟದಲ್ಲಿ ಸಿಡ್ನಿ ಪ್ರೇಕ್ಷಕರು ಇದೇ ವಿಚಾರವಾಗಿ ಅಣಕವಾಡಿದಾಗ ವಿರಾಟ್‌ ಕೊಹ್ಲಿ ಮೈದಾನದಲ್ಲಿಯೇ ಉತ್ತರ ನೀಡಿದ್ದಾರೆ.

ತನ್ನ ಪ್ಯಾಂಟ್‌ ಕಿಸೆಯನ್ನು ಹೊರಕ್ಕೆಳೆದು ಅದರಲ್ಲಿ ಏನೂ ಇಲ್ಲ ಎಂದು ತೋರಿಸಿದರು. ಅಲ್ಲದೆ ನನ್ನಲ್ಲಿ ಏನೂ ಇಲ್ಲ, ನಾವು ಸ್ಯಾಂಡ್‌ ಪೇಪರ್‌ ಬಳಕೆ ಮಾಡುವುದಿಲ್ಲ ಎಂದು ಸಂಜ್ಞೆಯ ಮೂಲಕ ತೋರಿಸಿದರು. ಇಂತಹ ಕೃತ್ಯಗಳ ವಿಚಾರದಲ್ಲಿ ಭಾರತೀಯರು ಆಸ್ಟ್ರೇಲಿಯನ್ನರಂತೆ ಅಲ್ಲ ಎಂದು ಸನ್ನೆ ಮಾಡಿದರು.

2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು ಸ್ಯಾಂಡ್‌ ಪೇಪರ್‌ ಬಳಸಿ ಚೆಂಡನ್ನು ವಿರೂಪ ಮಾಡಿ ಕಳ್ಳಾಟವಾಡಿದ್ದರು. ಇದನ್ನು ಕ್ಯಾಮರಾ ಸೆರೆ ಹಿಡಿದಿದ್ದರು. ಬಳಿಕ ಆಗ ನಾಯಕರಾಗಿದ್ದ ಸ್ಟೀವ್‌ ಸ್ಮಿತ್‌, ಉಪ ನಾಯಕ ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ರನ್ನು ಎರಡು ವರ್ಷಗಳ ಕಾಲ ಕ್ರಿಕೆಟ್‌ ಆಸ್ಟ್ರೇಲಿಯಾ ಬ್ಯಾನ್‌ ಮಾಡಿತ್ತು.

ಟಾಪ್ ನ್ಯೂಸ್

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Home whitewash more shocking than Australia defeat: Yuvraj

Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್‌ ಆಘಾತಕಾರಿ: ಯುವಿ

ICC Champions Trophy: England boycott match against Afghanistan?

ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್‌ ಬಹಿಷ್ಕಾರ?

Bumrah in the race for ICC Player of the Month award

Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ

South Africa plan to play one Test before WTC Final

WTC “ಟೆಸ್ಟ್‌  ಫೈನಲ್‌’ಗೂ ಮುನ್ನ ಒಂದು ಟೆಸ್ಟ್‌ ಆಡಲು ದ. ಆಫ್ರಿಕಾ ಯೋಜನೆ

Everything was fine when Dravid was there: Harbhajan

Team India; ದ್ರಾವಿಡ್‌ ಇದ್ದಾಗ ಎಲ್ಲ  ಸರಿಯಿತ್ತು: ಹರ್ಭಜನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.