Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!

ಕೆರಾಡಿಯ ಕಾರಿಬೈಲು, ಹಳ್ಳಿಹೊಳೆ ಗ್ರಾಮದ ಇರಿಗೆಗೆ ಹೆಸರಿಗಷ್ಟೇ ಟವರು!

Team Udayavani, Jan 5, 2025, 2:21 PM IST

3

ಕುಂದಾಪುರ: ಎಷ್ಟೋ ಊರುಗಳಲ್ಲಿ ಇನ್ನೂ ಕೂಡ ಮೊಬೈಲ್‌ ಟವರ್‌ಗಳೇ ಇಲ್ಲದೆ ನೆಟ್ವರ್ಕ್‌ ಇಲ್ಲ ಎಂಬ ಪರಿಸ್ಥಿತಿ ಇದೆ. ಆದರೆ ಇರಿಗೆ ಹಾಗೂ ಕಾರೆಬೈಲು ಎನ್ನುವ ಊರುಗಳ ಸಮಸ್ಯೆಯೇ ವಿಭಿನ್ನವಾಗಿದೆ. ಇಲ್ಲಿ ಟವರ್‌ ಆಗಿದೆ. ಕಾರ್ಯಾರಂಭವೂ ಆಗಿದೆ. ಆದರೆ ನೆಟ್ವರ್ಕ್‌ಗೆ ಸಂಬಂಧಿಸಿದ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ.

ಕೆರಾಡಿ ಗ್ರಾಮದ ಕಾರಿಬೈಲು ಹಾಗೂ ಹಳ್ಳಿಹೊಳೆ ಗ್ರಾಮದ ಇರಿಗೆ ಪ್ರದೇಶದ ನೂರಾರು ಮನೆಗಳು ಟವರ್‌ ಇದ್ದರೂ ನೆಟ್ವರ್ಕ್‌ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬೇರೆ ಕಡೆಗಳಲ್ಲಿ ಟವರ್‌ ಇಲ್ಲದೇ ಒಂದು ಸಮಸ್ಯೆಯಾಗಿದ್ದರೆ, ಇಲ್ಲಿ ಟವರ್‌ ಇದ್ದರೂ, ಹತ್ತಾರು ಸಮಸ್ಯೆ ಅನುಭವಿಸುವಂತಾಗಿದೆ ಕಾಡಂಚಿನ ಜನರ ಪರಿಸ್ಥಿತಿ. ಪರಿಸ್ಥಿತಿ ಹೇಗಿದೆ ಎಂದರೆ ಟವರ್‌ನ ಬುಡದಲ್ಲೇ ಇಲ್ಲಿ ನೆಟ್ವರ್ಕ್‌ ಇಲ್ಲ!

ಟವರ್‌ ಬಂದರೂ ಬದಲಾಗದ ಸ್ಥಿತಿ
ಇರಿಗೆ ಹಾಗೂ ಕಾರಿಬೈಲಿನಲ್ಲಿ ಅನೇಕ ವರ್ಷಗಳ ಬೇಡಿಕೆ, ಹೋರಾಟ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ 2 ವರ್ಷಗಳ ಹಿಂದೆ ಎರಡು ಬಿಸ್ಸೆನ್ನೆಲ್‌ ಟವರ್‌ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಸಂಸದರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ಟವರ್‌ ಕಾಮಗಾರಿ ತ್ವರಿತಗತಿಗೆ ಆಗಾಗ್ಗೆ ಸೂಚನೆ ನೀಡುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿ ವರ್ಗದವರು ಗಂಭೀರವಾಗಿ ಪರಿಗಣಿಸದೇ ವಿಳಂಬ ಆಗಿತ್ತು. ಕೊನೆಗೂ ಕಳೆದ ವರ್ಷದ ಆ. 15ಕ್ಕೆ ಈ ಎರಡೂ ಟವರ್‌ಗಳು ಕಾರ್ಯಾರಂಭ ಮಾಡಿದವು. ಆದರೆ ಸರಿಯಾದ ರೀತಿಯಲ್ಲಿ ಸಂಬಂಧಪಟ್ಟ ಬಿಸ್ಸೆನ್ನೆಲ್‌ ಸಂಸ್ಥೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಕಾರಣ ಟವರ್‌ ಆದರೂ ಇಲ್ಲಿನ ಜನರ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಟವರ್‌ ಹೆಸರಿಗಷ್ಟೇ ಅನ್ನುವ ಮಾತುಗಳು ಇಲ್ಲಿನ ಜನರಿಂದ ವ್ಯಕ್ತವಾಗುತ್ತಿವೆ.

600ಕ್ಕೂ ಮಿಕ್ಕಿ ಮನೆ
ಇರಿಗೆ ಸಹಿತ ಸುತ್ತಮುತ್ತಲಿನ ಪ್ರದೇಶಗಳಾದ ಕಲ್ಸಂಕ, ಕೊಳೆಕೊಡು, ಬಿಂಜ್ರಿ, ಭಗವಂತನಪಾಲು, ಬಿರಿಗೆ, ಮಾವಿನಕುಂಬ್ರಿ, ದೊಡಬೀಸು, ಕುದ್ರಕಾಡು, ತೆಂಕನಮಕ್ಕಿ ಸಹಿತ ಹತ್ತಾರು ಊರುಗಳಿಗೆ ನೆಟ್ವರ್ಕ್‌ ಸಮಸ್ಯೆಯಿದೆ. ಇಲ್ಲಿನ ಸುಮಾರು 300 ರಿಂದ 350 ಮನೆಗಳಿಗೆ ನೆಟ್ವರ್ಕ್‌ ಸರಿಯಾಗಿ ಸಿಗುತ್ತಿಲ್ಲ. ಇನ್ನು ಕಾರಿಬೈಲು ಆಸುಪಾಸಿನ ಮಾವಿನಜೆಡ್ಡು, ಹೊಸಮಠ, ನಂದಿಕೊಡ್ಲು, ಮೇಳ್ಯಾ ಮುದ್ರಾಣಿ, ಕುಂದಲಬೈಲು, ವಾಟೆಬಚ್ಚಲು, ದಾಸನಕೊಡ್ಲು, ಗರಡಿಪಾಲು ಭಾಗದ ಸುಮಾರು 300ಕ್ಕೂ ಮಿಕ್ಕಿ ಮನೆಗಳಿಗೆ ಟವರ್‌ ಇದ್ದರೂ, ನೆಟ್ವರ್ಕ್‌ ಸಿಗುತ್ತಿಲ್ಲ.

ಮೊಬೈಲ್‌ ಬದಲಿಸುವ ಅನಿವಾರ್ಯತೆ
ಇನ್ನೊಂದು ಬಹುಮುಖ್ಯ ಸಮಸ್ಯೆಯೆಂದರೆ ಇಲ್ಲಿ 4ಜಿ ಹಾಗೂ 5ಜಿ ಟವರ್‌ಗಳನ್ನು ಮಾಡಲಾಗಿದೆ. ಇರಿಗೆ ಹಾಗೂ ಕಾರಿಬೈಲು ಪ್ರದೇಶದ ಬಹುತೇಕ ಅಂದರೆ ಶೇ. 75ರಷ್ಟು ಜನರಲ್ಲಿ ಇರುವುದು ಬೇಸಿಕ್‌ ಮೊಬೈಲ್‌. ಹಳ್ಳಿ ಪ್ರದೇಶವೇ ಜಾಸ್ತಿ ಇರುವುದರಿಂದ ಆ್ಯಂಡ್ರಾಯ್ಡ ಮೊಬೈಲ್‌ ಬಹುತೇಕರಲ್ಲಿ ಇಲ್ಲ. ಅದರ ಬಳಕೆಯೂ ಗೊತ್ತಿಲ್ಲದವರೇ ಹೆಚ್ಚಿನವರು ಇದ್ದಾರೆ. ಬೇಸಿಕ್‌ ಮೊಬೈಲ್‌ಗೆ ಈ ಟವರ್‌ ನೆಟ್ವರ್ಕ್‌ ಬಳಸಲು ಅವಕಾಶವಿಲ್ಲ. ಬೇಸಿಕ್‌ ಮೊಬೈಲ್‌ ಬಳಸುವವರು ಹೊಸದಾಗಿ ಅಂದರೆ ಕನಿಷ್ಠ 4,500 ರೂ. ಗಿಂತ ಹೆಚ್ಚಿನ ಹಣ ನೀಡಿ, ಹೊಸ ಮೊಬೈಲ್‌ ಖರೀದಿಸಬೇಕಿದೆ. ಒಟ್ಟಿನಲ್ಲಿ ಟವರ್‌ ಆಯಿತೆಂದು ಖುಷಿಯಲ್ಲಿದ್ದ ಜನ ಈಗ ಟವರ್‌ಗಾಗಿ ಮೊಬೈಲ್‌ ಬದಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದಂತಾಗಿದೆ. ಇನ್ನು ಇದು 5ಜಿ ಟವರ್‌ ಆಗಿದ್ದರೂ ಕನಿಷ್ಠ 2ಜಿ ಸಹ ಸಿಗುತ್ತಿಲ್ಲ ಅನ್ನುವುದು 4ಜಿ ಮೊಬೈಲ್‌ ಬಳಸುವವರ ವಾದ.

ಏನೆಲ್ಲ ಸಮಸ್ಯೆಗಳು?
ಕಳೆದ ಆ.15 ರಿಂದ ಟವರ್‌ ಕಾರ್ಯಾರಂಭ ಮಾಡಿದೆ. ಆದರೆ ಆಗಾಗ್ಗೆ ನೆಟ್ವರ್ಕ್‌ ಕೈಕೊಡುತ್ತಿದ್ದು, ಒಮೊಮ್ಮೆ ನೆಟ್ವರ್ಕ್‌ ಹೋದರೆ 4 ದಿನ, 2 ದಿನ ಮತ್ತೆ ಇರುವುದೇ ಇಲ್ಲ. ಜನ ಕಾದು – ಕಾದು ಸುಸ್ತಾಗಿ ಬೇಸತ್ತು ಹೋಗುವಂತಾಗಿದೆ. ಇನ್ನುಈ ಟವರ್‌ಗಳಿಗೆ ವಿದ್ಯುತ್‌ ಬದಲು ಸೋಲಾರ್‌ ಪ್ಯಾನೆಲ್‌ ಅಳವಡಿಸಿದ್ದು, ಅದು ಎಲ್ಲ ಕಾಲದಲ್ಲೂ ಸಾಕಾಗುತ್ತಾ ಅಥವಾ ಸಾಕಾಗದೇ ಆಗಾಗ್ಗೆ ನೆಟ್ವರ್ಕ್‌ ಕೈಕೊಡುತ್ತಿದೆಯೇ ಅನ್ನುವ ಅನುಮಾನ ಜನರದ್ದು.

ದೂರು ಕೊಟ್ಟರೂ ಆಗಿಲ್ಲ
ಇರಿಗೆಯಲ್ಲಿ ಟವರ್‌ ಆದರೂ ಏನೂ ಪ್ರಯೋಜನವಾಗಿಲ್ಲ, ನಮ್ಮ ಮನೆಯಿಂದ ಒಂದು ಫರ್ಲಾಂಗು ದೂರವಿಲ್ಲ, ಆದರೂ ನೆಟ್ವರ್ಕ್‌ ಸಿಗುತ್ತಿಲ್ಲ. ಟವರ್‌ ಅಡಿಯಲ್ಲೇ ಹಾಲಿನ ಡೈರಿಯಿದೆ. ಅವರಿಗೂ ನೆಟ್ವರ್ಕ್‌ ಸಿಗುತ್ತಿಲ್ಲ. ನಮ್ಮ ಬಹಳಷ್ಟು ಹೋರಾಟದ ಫಲವಾಗಿ ಟವರ್‌ ಆಗಿದೆ. ತಾಳ್ಮೆಯಿಂದ ಕಾದು, ಟವರ್‌ ಆಗಿದ್ದಷ್ಟೇ ಖುಷಿ. ರಾತ್ರಿ ಟವರ್‌ದು ಲೈಟ್‌ ನೋಡಲು ಮಾತ್ರ ಇದ್ದಂತಿದೆ. ಶಾಸಕರಿಗೆ, ಬಿಸ್ಸೆನ್ನೆಲ್‌ ಪ್ರಮುಖರಿಗೆ ದೂರು ಕೊಟ್ಟಿದ್ದೇವೆ. 4ಜಿ ಸಿಮ್‌ ಇದ್ದರೂ ಸಿಗುತ್ತಿಲ್ಲ.
– ರಾಘವೇಂದ್ರ ರಾವ್‌ ಇರಿಗೆ, ಸ್ಥಳೀಯರು

ಟವರ್‌ ಇದ್ದೂ ಏನೂ ಪ್ರಯೋಜನ?
ಇರಿಗೆ ಹಾಗೂ ಕಾರಿಬೈಲಿನಲ್ಲಿ ಟವರ್‌ ಆದ ನಂತರವೂ ಮೊದಲಿದ್ದ ಪರಿಸ್ಥಿತಿ ಏನು ಬದಲಾಗಿಲ್ಲ. ಯಾವ ಮೊಬೈಲ್‌ನಿಂದಲೂ ಕನಿಷ್ಠ ಒಂದು ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಅಂದರೆ ಟವರ್‌ ಇದ್ದರೂ ಏನೂ ಪ್ರಯೋಜನ? ಇಲ್ಲಿನ ಬಹುತೇಕ ಎಲ್ಲರಿಗೂ ಇದೇ ಸಮಸ್ಯೆ. 3 ಶಾಲೆಗಳಿದ್ದು, ಬಿಸಿಯೂಟದ ದಾಖಲಾತಿ ಮಾಡಿ ಕಳುಹಿಸಲು ಆಗುತ್ತಿಲ್ಲ. ಎಲ್ಲದಕ್ಕೂ ಸಮಸ್ಯೆಯಾಗಿದೆ. ಆದಷ್ಟು ಬೇಗ ಈ ಸಮಸ್ಯೆ ನಿವಾರಿಸಲಿ.
-ನವೀನ್‌ ಕೆ.ಸಿ., ಕಾರಿಬೈಲು ಶಾಲೆ ಶಿಕ್ಷಕರು

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹೊಸ ಸೇರ್ಪಡೆ

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.