BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Team Udayavani, Jan 5, 2025, 4:33 PM IST
ಸಿಡ್ನಿ: ಕಳೆದ ಒಂದೂವರೆ ತಿಂಗಳಿನಿಂದ ಸಾಗುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ರವಿವಾರ ಅಂತ್ಯವಾಗಿದೆ. ಭಾರತೀಯ ದಿಗ್ಗಜ ಸುನೀಲ್ ಗಾವಸ್ಕರ್ ಮತ್ತು ಆಸ್ಟ್ರೇಲಿಯನ್ ಲೆಜೆಂಡ್ ಅಲನ್ ಬಾರ್ಡರ್ ಹೆಸರಿನಲ್ಲಿರುವ ಬಾರ್ಡರ್ ಗಾವಸ್ಕರ್ ಟ್ರೋಫಿಯನ್ನು ದಶಕದ ಬಳಿಕ ಆಸ್ಟ್ರೇಲಿಯಾ ಗೆದ್ದುಕೊಂಡಿದೆ.
ಆದರೆ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಅಲನ್ ಬಾರ್ಡರ್ ಅವರನ್ನು ಮಾತ್ರ ಕರೆಯಲಾಗಿತ್ತು. ಸುನೀಲ್ ಗಾವಸ್ಕರ್ ಅವರು ಮೈದಾನದಲ್ಲಿ ಉಪಸ್ಥಿತರಿದ್ದರೂ ಅವರಿಗೆ ಕರೆಯಲಾಗಲಿಲ್ಲ. ಇದಕ್ಕೆ ಗಾವಸ್ಕರ್ ಬೇಸರ ವ್ಯಕ್ತಪಡಿಸಿದರು.
ತನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಜೊತೆಗೆ ಟ್ರೋಫಿಯನ್ನು ಹಸ್ತಾಂತರಿಸಿದ್ದರೆ ಚೆನ್ನಾಗಿತ್ತು ಎಂದು ಗಾವಸ್ಕರ್ ಹೇಳಿದರು.
“ನಾನು ನಿಸ್ಸಂಶಯವಾಗಿ ಪ್ರೆಸೆಂಟೇಶನ್ ಗಾಗಿ ಅಲ್ಲಿರಲು ಇಷ್ಟಪಡುತ್ತಿದ್ದೆ. ಯಾಕೆಂದರೆ, ಇದು ಬಾರ್ಡರ್-ಗಾವಸ್ಕರ್ ಟ್ರೋಫಿ” ಎಂದು ಗವಾಸ್ಕರ್ ಅವರನ್ನು ಕೋಡ್ ಸ್ಪೋರ್ಟ್ಸ್ ಉಲ್ಲೇಖಿಸಿದೆ.
“ಅಂದರೆ, ನಾನು ಇಲ್ಲಿಯೇ ಮೈದಾನದಲ್ಲಿಯೇ ಇದ್ದೆ. ನನ್ನ ಪ್ರಕಾರ, ಪ್ರೆಸೆಂಟೇಶನ್ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯಾ ಗೆದ್ದಿರುವುದು ಮುಖ್ಯವಲ್ಲ. ಅವರು ಉತ್ತಮ ಕ್ರಿಕೆಟ್ ಆಡಿದರು ಆದ್ದರಿಂದ ಅವರು ಗೆದ್ದರು. ನಾನು ಭಾರತೀಯ ಎಂಬ ಕಾರಣಕ್ಕೆ ನನಗೆ ಟ್ರೋಫಿ ಪ್ರೆಸೆಂಟೇಶನ್ ಗೆ ಕರೆಯಲಿಲ್ಲ. ನನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿಯನ್ನು ನೀಡಲು ನಾನು ಸಂತೋಷಪಡುತ್ತಿದ್ದೆ” ಎಂದು ಗಾವಸ್ಕರ್ ಹೇಳಿದರು.
ಆಸ್ಟ್ರೇಲಿಯಾ ಸರಣಿಯನ್ನು ಗೆದ್ದು ಬಿಜಿಟಿ ಪಡೆದುಕೊಂಡರೆ ಟ್ರೋಫಿ ವಿತರಣೆಗೆ ನಿಮ್ಮ ಅಗತ್ಯವಿಲ್ಲ ಎಂದು ಸಂಘಟಕರು ಹೇಳಿದ್ದರು ಎಂದು ಗಾವಸ್ಕರ್ ಸ್ವತಃ ಉಲ್ಲೇಖಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.