PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್
Team Udayavani, Jan 5, 2025, 9:45 PM IST
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ 421 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪಾಕಿಸ್ಥಾನ ಫಾಲೋಆನ್‌ಗೆ ತುತ್ತಾಗಿದೆ.
ದಕ್ಷಿಣ ಆಫ್ರಿಕಾದ 615 ರನ್ನುಗಳ ಬೃಹತ್ ಮೊತ್ತಕ್ಕೆ ಜವಾಬು ನೀಡುವಲ್ಲಿ ಎಡವಿದ ಪಾಕಿಸ್ಥಾನ 194ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕಾಗಿಸೊ ರಬಾಡ 3, ಕ್ವೇನ ಮಫಾಕ ಮತ್ತು ಕೇಶವ್ ಮಹಾರಾಜ್ ತಲಾ 2, ಮಾರ್ಕೊ ಜಾನ್ಸೆನ್ ಮತ್ತು ವಿಯಾನ್ ಮುಲ್ಡರ್ ಒಂದೊಂದು ವಿಕೆಟ್ ಉರುಳಿಸಿದರು.
ಪಾಕಿಸ್ಥಾನ ಸರದಿಯಲ್ಲಿ ಬಾಬರ್ ಆಜಂ ಏಕೈಕ ಅರ್ಧ ಶತಕ ದಾಖಲಿಸಿದರು (58). ಮೊಹಮ್ಮದ್ ರಿಜ್ವಾನ್ 46 ರನ್ ಮಾಡಿದರು.
ಫಾಲೋಆನ್ ಬಳಿಕ ಬ್ಯಾಟಿಂಗ್ ಹೋರಾಟವೊಂದನ್ನು ಜಾರಿಯಲ್ಲಿರಿಸಿರುವ ಪಾಕಿಸ್ಥಾನ ವಿಕೆಟ್ ನಷ್ಟವಿಲ್ಲದೆ 143 ರನ್ ಮಾಡಿ ದಿನದಾಟ ಮುಂದುವರಿಸುತ್ತಿದೆ.