Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್ ಟಿಕೆಟ್
ಗುಜರಾತ್, ಮಹಾರಾಷ್ಟ್ರ , ವಿದರ್ಭ, ಬರೋಡಾ ಮುನ್ನಡೆ
Team Udayavani, Jan 6, 2025, 6:50 AM IST
ಅಹ್ಮದಾಬಾದ್: ದುರ್ಬಲ ನಾಗಾಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಸುಲಭ ಜಯ ಗಳಿಸಿದ ಕರ್ನಾಟಕ, “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ನೇರಪ್ರವೇಶ ಪಡೆದಿದೆ.
ಅಗರ್ವಾಲ್ ಪಡೆ “ಸಿ’ ಗುಂಪಿನಲ್ಲಿ 7 ಪಂದ್ಯಗಳಲ್ಲಿ ಆರನ್ನು ಗೆದ್ದು ಅಗ್ರಸ್ಥಾನಿಯಾಯಿತು. ಇತರ ಗುಂಪುಗಳ ಅಗ್ರಸ್ಥಾನಿ ತಂಡಗಳಾದ ಗುಜರಾತ್, ಮಹಾರಾಷ್ಟ್ರ, ವಿದರ್ಭ ಮತ್ತು ಬರೋಡಾ ಕೂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿವೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನಾಗಾಲ್ಯಾಂಡ್ 48.3 ಓವರ್‌ಗಳಲ್ಲಿ 206ಕ್ಕೆ ಆಲೌಟ್ ಆಯಿತು. ಕರ್ನಾಟಕ 37.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 207 ರನ್ ಬಾರಿಸಿತು.
ನಾಗಾಲ್ಯಾಂಡ್ ಸರದಿಯಲ್ಲಿ ಚೇತನ್ ಬಿಷ್ಟ್ 77, ಆರ್. ಜೋನಾಥನ್ 51 ರನ್ ಹೊಡೆದರು. ಶ್ರೇಯಸ್ ಗೋಪಾಲ್ 24ಕ್ಕೆ 4, ಅಭಿಲಾಷ್ ಶೆಟ್ಟಿ 42ಕ್ಕೆ 2 ವಿಕೆಟ್ ಉರುಳಿಸಿದರು.
ಅಗರ್ವಾಲ್ 4ನೇ ಶತಕ
ಚೇಸಿಂಗ್ ವೇಳೆ ಕರ್ನಾಟಕ ತಂಡದ ಕಪ್ತಾನ ಮಾಯಾಂಕ್ ಅಗರ್ವಾಲ್ ಮತ್ತೊಂದು ಶತಕದೊಂದಿಗೆ ಮಿಂಚಿದರು. 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸೇರಿದಂತೆ ಅಜೇಯ 116 ರನ್ ಬಾರಿಸಿದರು. ಇದು ಈ ಆವೃತ್ತಿಯಲ್ಲಿ ಮಾಯಾಂಕ್ ಸಿಡಿಸಿದ 4ನೇ ಶತಕ. ಮಾಯಾಂಕ್‌ಗೆ ಸಾಥ್ ನೀಡಿದ ಕೆ.ವಿ. ಅನೀಶ್ ಅವರಿಂದ ಅಜೇಯ 82 ರನ್ ಬಂತು.
ಪಂಜಾಬನ್ನು ಹಿಂದಿಕ್ಕಿದ ಕರ್ನಾಟಕ
“ಸಿ’ ಗುಂಪಿನ ಕ್ವಾರ್ಟರ್ ಫೈನಲ್ ನೇರ ಪ್ರವೇಶದ ಓಟದಲ್ಲಿ ಪಂಜಾಬ್ ತಂಡವನ್ನು ಕರ್ನಾಟಕ ಹಿಂದಿಕ್ಕಿದ್ದೇ ಒಂದು ವಿಶೇಷ. ಕರ್ನಾಟಕ 24 ಅಂಕ ಮತ್ತು 1.393 ನೆಟ್ ರನ್‌ರೇಟ್ ಹೊಂದಿತ್ತು. ಪಂಜಾಬ್ ಕೂಡ 24 ಅಂಕ ಗಳಿಸಿತ್ತು; ಆದರೆ ನೆಟ್ ರನ್‌ರೇಟ್‌ನಲ್ಲಿ ಮುಂದಿತ್ತು (2.401). ರನ್‌ರೇಟ್ ಲೆಕ್ಕಾಚಾರದಲ್ಲಿ ಪಂಜಾಬ್ ಮುನ್ನಡೆಯಬೇಕಿತ್ತು. ಆದರೆ ಇತ್ತಂಡಗಳ ಲೀಗ್ ಮುಖಾಮುಖಿಯಲ್ಲಿ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ ಕಾರಣ “ಸಿ’ ಗುಂಪಿನ ಅಗ್ರಸ್ಥಾನದ ಗೌರವ ಸಂಪಾದಿಸಿತು.
ಪ್ರತೀ ಗುಂಪಿನ ಅಗ್ರಸ್ಥಾನಿ ತಂಡಗಳು ಮತ್ತು ಅತ್ಯು ತ್ತಮ ಪ್ರದರ್ಶನ ನೀಡಿದ ಒಂದು ದ್ವಿತೀಯ ಸ್ಥಾನಿ ತಂಡ ಕ್ವಾರ್ಟರ್ ಫೈನಲ್ ತಲುಪಲಿದೆ. ಹೀಗಾಗಿ ಪಂಜಾಬ್ ಕೂಡ ಕ್ವಾರ್ಟರ್‌ಗೆàರುವುದು ಬಹುತೇಕ ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
MUST WATCH
ಹೊಸ ಸೇರ್ಪಡೆ
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Kundapura: ಶಾಸ್ತ್ರಿ ಸರ್ಕಲ್ ಬಳಿ ವ್ಯಕ್ತಿಯ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.