ಸರಕಾರ ಬಾಕಿ ಕೊಟ್ಟರೆ ಸಾರಿಗೆಗೆ ಸಾಲ ಬೇಡ !

ನಿಗಮಕ್ಕೆ ಸರಕಾರದಿಂದ 1,800 ಕೋ. ರೂ. ಬಾಕಿ

Team Udayavani, Jan 6, 2025, 6:55 AM IST

KSRT

ಬೆಂಗಳೂರು: ಪ್ರಯಾಣ ದರ ಪರಿಷ್ಕರ ಣೆಗೆ ಅನುಮತಿ ಮತ್ತು 2 ಸಾವಿರ ಕೋಟಿ ರೂ.ಗಳಷ್ಟು ಸಾಲ ಪಡೆಯಲು ಖಾತ್ರಿ ನೀಡುವ ಮೂಲಕ ರಾಜ್ಯದ ಸಾರಿಗೆ ನಿಗಮ ಗಳಿಗೆ ನೆರವಿನ ಔದಾರ್ಯ ತೋರಿ ಸುತ್ತಿರುವ ಸರಕಾರವು ಸ್ವತಃ ಅದೇ ನಿಗಮಗಳ 1,700-1,800 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅದನ್ನು ಪಾವತಿಸಿದರೆ ಸದ್ಯಕ್ಕೆ ಸಾಲವೂ ಬೇಕಿಲ್ಲ. ಸರಕಾರದಿಂದ ಸಾಲದ “ಗ್ಯಾರಂಟಿ’ಯೂ ಬೇಕಾಗುವುದಿಲ್ಲ!

ಸರಕಾರ ನೀಡಿದ ಮಾಹಿತಿ ಪ್ರಕಾರ ನಾಲ್ಕು ಸಾರಿಗೆ ನಿಗಮಗಳು ತಮ್ಮ ಮೇಲಿನ ಹೊಣೆಗಾರಿಕೆ ಮತ್ತು ಸಾಲ ಸೇರಿ ಒಟ್ಟು 5,039 ಕೋಟಿ ರೂ. ಪಾವತಿಸಬೇಕಿದೆ. ಈ ಪೈಕಿ ಭವಿಷ್ಯನಿಧಿ, ನಿವೃತ್ತ ನೌಕರರ ಬಾಕಿ, ಇಂಧನ ಬಾಕಿ ಸೇರಿದೆ. ಈ ಹೊರೆ ತಗ್ಗಿಸಲು ಸಾಲ ಪಡೆಯುವುದಕ್ಕೆ ಅನುಮತಿ ನೀಡಿರುವ ಸರಕಾರವು, ಅದಕ್ಕೆ ತಾನು “ಗ್ಯಾರಂಟಿ’ ನೀಡು ವುದಾಗಿ ಭರವಸೆ ನೀಡಿದೆ. ಆದರೆ ಗ್ಯಾರಂಟಿ “ಶಕ್ತಿ’ ಯೋಜನೆಯಡಿ ಬರಬೇಕಾದ ಮೊತ್ತವೇ 1,800 ಕೋಟಿ ರೂ. ಇದೆ. ಅದನ್ನು ಸಕಾಲದಲ್ಲಿ ಪಾವತಿಸಿದರೆ ಸದ್ಯಕ್ಕೆ ಸಾಲದ ಆವಶ್ಯಕತೆ ಇಲ್ಲ. ಬಡ್ಡಿಯ ಹೊರೆಯೂ ಇರುವುದಿಲ್ಲ.

2023ರ ಜೂನ್‌ನಲ್ಲಿ ಜಾರಿಗೆ ಬಂದ ಸರಕಾರದ ಮೊದಲ ಗ್ಯಾರಂಟಿ “ಶಕ್ತಿ’ಯಡಿ ಇದುವರೆಗೆ 363 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಅದರ ಮೊತ್ತ 8,800 ಕೋಟಿ ರೂ. ಆಗಿದೆ. ಈ ಪೈಕಿ ಸರಕಾರ ಇದುವರೆಗೆ ಪಾವತಿಸಿದ್ದು ಅಂದಾಜು 7,000 ಕೋಟಿ ರೂ. ಪ್ರತೀ ತಿಂಗಳು ಒಟ್ಟು ಸಂಚರಿಸಿದ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೊತ್ತದಲ್ಲಿ ಶೇ. 75-80ರಷ್ಟನ್ನು ಮಾತ್ರ ಸರಕಾರ ಪಾವತಿಸುತ್ತಿದೆ. ಈ ಪೈಕಿ 2023ರಲ್ಲಿ ಶೇ. 26ರಷ್ಟು ಮತ್ತು 2024ರ ಡಿಸೆಂಬರ್‌ವರೆಗೆ ಶೇ. 16ರಷ್ಟು ಹಿಂಬಾಕಿ ಇದೆ. ಇದರ ಜತೆಗೆ ವಿದ್ಯಾರ್ಥಿ, ಅಂಗವಿಕಲರ ಸಹಿತ ಹಲವು ರಿಯಾಯಿತಿ ಪಾಸ್‌ಗಳ ಬಾಕಿ ಕೂಡ ಇದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿರೀಕ್ಷೆ ಮೀರಿದ ಯೋಜನಾ ವೆಚ್ಚ
ಈ ಬಾಕಿ ಉಳಿಕೆಗೆ ಸಕಾರಣವೂ ಇದೆ. “ಶಕ್ತಿ’ ಯೋಜನೆ ಜಾರಿಗೆ ಬಂದದ್ದು 2023ರ ಜೂ. 11ರಂದು. ಇದಕ್ಕೆ ಅಂದಾಜು ಮಾಡಿ ಲೆಕ್ಕಹಾಕಿದ್ದು 2023ರ ಮೇ ತಿಂಗಳಿನಲ್ಲಿ. ಅಲ್ಲಿಂದ ಇದುವರೆಗೆ ಒಟ್ಟು ಸುಮಾರು 3 ಸಾವಿರ ಸಾಮಾನ್ಯ ಬಸ್‌ಗಳು ಎಲ್ಲ ಸಾರಿಗೆ ನಿಗಮಗಳಿಗೆ ಸೇರ್ಪಡೆಗೊಂಡಿವೆ. ಅದರ ಬೆನ್ನಲ್ಲೇ ಸುತ್ತುವಳಿಗಳ ಸಂಖ್ಯೆ ಏರಿಕೆಯಾಗಿದೆ. ಕಾರ್ಯಾಚರಣೆ ಮಾಡುವ ಕಿ.ಮೀ.ಗಳು ಜಾಸ್ತಿ ಆಗಿವೆ. ಇದೆಲ್ಲವೂ ನಿರೀಕ್ಷೆ ಮೀರಿದ್ದರಿಂದ ಆರ್ಥಿಕ ಇಲಾಖೆಯಿಂದ ಪೂರ್ಣಪ್ರಮಾಣದಲ್ಲಿ ಹಣ ಬಿಡುಗಡೆ ಆಗಲಿಲ್ಲ. ಅದು ಪರೋಕ್ಷವಾಗಿ ನಿಗಮಗಳ ಮೇಲೆಯೇ ಹೊರೆಯಾಗಿ ಪರಿಣಮಿಸಿತು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

“ಇದೇನೂ ಹೊಸದಲ್ಲ, ಸಾಮನ್ಯವಾಗಿ ಸರಕಾರದಿಂದ ರಿಯಾಯಿತಿ ಪಾಸ್‌ಗಳ ಸಹಿತ ನಿಗಮಗಳಿಗೆ ಬರಬೇಕಾದ ಅನುದಾನ ಅಥವಾ ಹಿಂಬಾಕಿ ಸಂಪೂರ್ಣವಾಗಿ ಮತ್ತು ನಿಯಮಿತವಾಗಿ ಬರುವುದಿಲ್ಲ. ನಿಗಮಗಳು ಸಲ್ಲಿಸಿದ ಪ್ರಸ್ತಾವನೆ ಪೈಕಿ ಶೇ.70ರಿಂದ 75ರಷ್ಟು ಬರುತ್ತದೆ. ಉಳಿದದ್ದು ಲೆಕ್ಕಪುಸ್ತಕದಲ್ಲಿ ಸೇರ್ಪಡೆ ಆಗುತ್ತದೆ. ಪೂರ್ಣಪ್ರಮಾಣದಲ್ಲಿ ಪಾವತಿಯಾದರೆ, ತಕ್ಕಮಟ್ಟಿಗೆ ನಿಗಮಗಳ ಹೊರೆ ಕಡಿಮೆ ಆಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ KSRTC ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

GParameshwar

ಹೈಕಮಾಂಡ್‌ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್‌

Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

7-surathkal

Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GParameshwar

ಹೈಕಮಾಂಡ್‌ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್‌

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Kundapura: ಶಾಸ್ತ್ರಿ ಸರ್ಕಲ್‌ ಬಳಿ ವ್ಯಕ್ತಿಯ ಶವ ಪತ್ತೆ

Kundapura: ಶಾಸ್ತ್ರಿ ಸರ್ಕಲ್‌ ಬಳಿ ವ್ಯಕ್ತಿಯ ಶವ ಪತ್ತೆ

GParameshwar

ಹೈಕಮಾಂಡ್‌ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್‌

Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.