NIA: ಅಕ್ರಮಕ್ಕೆ ದುಬಾೖಯಿಂದ ಹಣ: ಪಿಎಫ್ಐ ಕಾರ್ಯಕರ್ತ ಸೆರೆ
ಕರ್ನಾಟಕ, ಕೇರಳದಲ್ಲೂ ಪಿಎಫ್ಐ ಜಾಲ: ಆರೋಪ
Team Udayavani, Jan 6, 2025, 6:42 AM IST
ಹೊಸದಿಲ್ಲಿ: ಕರ್ನಾಟಕ, ಕೇರಳ, ಯುಎಇಗಳಲ್ಲಿರುವ ಸಿಂಡಿಕೇಟ್ಗಳನ್ನು ಬಳಸಿಕೊಂಡು ದುಬಾೖಯಿಂದ ಹಣ ಕ್ರೋಡೀಕರಿಸಿ, ಆ ಹಣವನ್ನು ಬಿಹಾರದಲ್ಲಿರುವ ನಿಷೇಧಿತ ಸಂಘಟನೆ ಪಿಎಫ್ಐನ ಕಾರ್ಯಕರ್ತರಿಗೆ ಹಂಚುತ್ತಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮೊಹಮ್ಮದ್ ಸಾಜ್ಜದ್ ಆಲಂ ಎಂಬ ಪಿಎಫ್ಐ ಕಾರ್ಯಕರ್ತನನ್ನು ಬಂಧಿಸಿರುವುದಾಗಿ ರವಿವಾರ ಹೇಳಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೂಲದವನಾದ ಸಾಜ್ಜದ್, ಶನಿವಾರ ದುಬಾೖಯಿಂದ ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆಯೇ ಆತನನ್ನು ಎನ್ಐಎ ಅಧಿಕಾರಿಗಳು ಬಂಧಿದ್ದಾರೆ. ಪಿಎಫ್ಐನ ಕಾರ್ಯಕರ್ತನಾಗಿರುವ ಈತನ ವಿರುದ್ಧ ಈ ಹಿಂದೆಯೇ ಎನ್ಐಎ ಅರೆಸ್ಟ್ ವಾರಂಟ್ ನೀಡಿತ್ತು. ಜತೆಗೆ ಲುಕ್ಔಟ್ ನೋಟಿಸ್ ಕೂಡ ನೀಡಿತ್ತು.
ದುಬಾೖಯಿಂದ ಕ್ರೋಡೀಕರಿಸಿದ ಹಣವನ್ನು ಬಿಹಾರಕ್ಕೆ ತಲುಪಿಸಿ, ಆ ಮೂಲಕ ಪಿಎಫ್ಐ ಅಜೆಂಡಾದಂತೆ ದೇಶದಲ್ಲಿ ಉಗ್ರ ಕೃತ್ಯಗಳು, ಕಾನೂನು ಬಾಹಿರ ಚಟುವಟಿಕೆಗಳು ಜತೆಗೆ ಭಾರತದಲ್ಲಿ 2047ರ ವೇಳಗೆ ಇಸ್ಲಾಮಿಕ್ ರೂಲ್ ರೂಪಿಸಿರುವ ಸಂಚನ್ನು ಪಿಎಫ್ಐ ಹೊಂದಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
MUST WATCH
ಹೊಸ ಸೇರ್ಪಡೆ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Kundapura: ಶಾಸ್ತ್ರಿ ಸರ್ಕಲ್ ಬಳಿ ವ್ಯಕ್ತಿಯ ಶವ ಪತ್ತೆ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.