Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಕೆಲವೇ ರಾಷ್ಟ್ರಗಳ ಸಾಲಿಗೆ ಸೇರಿ, ಜಗತ್ತಿಗೆ ತನ್ನ ವೈಜ್ಞಾನಿಕ ಸಾಮರ್ಥ್ಯವನ್ನು ಪ್ರದರ್ಶಿಸಿತು.

Team Udayavani, Jan 6, 2025, 12:16 PM IST

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

ಭಾರತದ ಪರಮಾಣು ಕಾರ್ಯಕ್ರಮವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದ ಹಿರಿಯ ವಿಜ್ಞಾನಿ, ಡಾ. ರಾಜಗೋಪಾಲ್ ಚಿದಂಬರಂ ಅವರು 88ನೇ ವಯಸ್ಸಿನಲ್ಲಿ, ಜನವರಿ 4ರಂದು ನಿಧನರಾದರು. ಭಾರತದ ಆರಂಭಿಕ ಹಿರಿಯ ವಿಜ್ಞಾನಿಗಳಲ್ಲಿ ಒಬ್ಬರು ಎಂಬ ಗೌರವಕ್ಕೆ ಪಾತ್ರರಾಗಿರುವ ಚಿದಂಬರಂ ಅವರು ಭಾರತವನ್ನು ಒಂದು ಪರಮಾಣು ಶಕ್ತಿಯನ್ನಾಗಿ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ

1936ರಲ್ಲಿ ಜನಿಸಿದ ಡಾ. ಚಿದಂಬರಂ ಅವರು ತನ್ನ ಬಾಲ್ಯದಿಂದಲೇ ಶೈಕ್ಷಣಿಕವಾಗಿ ಬಹಳಷ್ಟು ಮುಂದಿದ್ದರು. ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ ಚಿದಂಬರಂ, ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಸೇರ್ಪಡೆಯಾದರು. ತನ್ನ ಆರಂಭಿಕ ಜೀವನದಿಂದಲೇ ವಿಜ್ಞಾನಕ್ಕಾಗಿ ಮುಡಿಪಾಗಿಟ್ಟ ಚಿದಂಬರಂ ಅವರ ಪ್ರಯತ್ನಗಳು ದೇಶದ ಮೇಲೆ ಬಹಳಷ್ಟು ಪ್ರಭಾವ, ಪರಿಣಾಮ ಬೀರಿವೆ.

ಬಿಎಆರ್‌ಸಿ ಸೇರ್ಪಡೆ ಮತ್ತು ಆರಂಭಿಕ ಕೊಡುಗೆಗಳು

1962ರಲ್ಲಿ ಡಾ. ಚಿದಂಬರಂ ಅವರು ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್‌ಗೆ (ಬಿಎಆರ್‌ಸಿ) ಸೇರ್ಪಡೆಗೊಂಡು, ಅಲ್ಲಿ ಬಹಳ ಬೇಗನೆ ಉನ್ನತ ಹುದ್ದೆಗಳಿಗೆ ಏರುತ್ತಾ ವೃತ್ತಿಪರವಾಗಿ ಬೆಳವಣಿಗೆ ಹೊಂದಿದರು. ಹೈ ಪ್ರೆಷರ್ ಫಿಸಿಕ್ಸ್, ಕ್ರಿಸ್ಟಲೋಗ್ರಫಿ ಮತ್ತು ವಸ್ತು ವಿಜ್ಞಾನ ಕ್ಷೇತ್ರಗಳಲ್ಲಿ ಚಿದಂಬರಂ ಅಸಾಧಾರಣ ಸಂಶೋಧನೆಗಳು ಅವರನ್ನು ಓರ್ವ ಮುಖ್ಯ ವಿಜ್ಞಾನಿಯಾಗಿ ಗುರುತಿಸುವಂತೆ ಮಾಡಿದವು. ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಲೋಹಗಳು ಮತ್ತು ಮಿಶ್ರಲೋಹಗಳು ಹೇಗೆ ವರ್ತಿಸುತ್ತವೆ ಎಂಬುದರ ಕುರಿತು ಚಿದಂಬರಂ ಅವರು ನಡೆಸಿದ ಸಂಶೋಧನೆಗಳು ಎರಡು ರೀತಿಯಿಂದ ಮಹತ್ವ ಪಡೆದಿದ್ದವು. ಮೊದಲನೆಯದಾಗಿ, ಈ ಸಂಶೋಧನೆಗಳು ಆಧುನಿಕ ವಿಜ್ಞಾನಕ್ಕೆ ಕೊಡುಗೆ ನೀಡಿದರೆ, ಇನ್ನೊಂದೆಡೆ ಭಾರತದ ಪರಮಾಣು ಗುರಿಗಳ ಸಾಧನೆಗೂ ನೆರವಾದವು.

ಭಾರತದ ಮೊದಲ ಪರಮಾಣು ಪರೀಕ್ಷೆ: ಪೋಖ್ರಾನ್-1

1974ರಲ್ಲಿ ಭಾರತ ‘ಸ್ಮೈಲಿಂಗ್ ಬುದ್ಧ’ ಎಂಬ ಹೆಸರಿನಲ್ಲಿ ನಡೆಸಿದ ಮೊದಲ ಪರಮಾಣು ಪರೀಕ್ಷೆಯ ಹಿಂದೆ ಡಾ. ಚಿದಂಬರಂ ಮುಖ್ಯ ಪಾತ್ರ ನಿರ್ವಹಿಸಿದ್ದರು. ಡಾ. ಹೋಮಿ ಜಹಂಗೀರ್ ಭಾಭಾ ಮತ್ತು ಡಾ. ರಾಜಾ ರಾಮಣ್ಣ ಅವರ ಜೊತೆಗೂಡಿ ಕಾರ್ಯಾಚರಿಸಿದ ಡಾ. ಚಿದಂಬರಂ ಅವರು ಪರಮಾಣು ಪರೀಕ್ಷೆಯ ವಿನ್ಯಾಸ ಮತ್ತು ಕಾರ್ಯರೂಪಗೊಳಿಸುವುದರಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸಿದ್ದರು. ಈ ಐತಿಹಾಸಿಕ ಘಟನೆಯ ಪರಿಣಾಮವಾಗಿ, ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರಿ, ಜಗತ್ತಿಗೆ ತನ್ನ ವೈಜ್ಞಾನಿಕ ಸಾಮರ್ಥ್ಯವನ್ನು ಪ್ರದರ್ಶಿಸಿತು.

ಡಾ. ರಾಜಾ ರಾಮಣ್ಣನವರೊಡನೆ ಕಾರ್ಯಾಚರಣೆ

ಡಾ. ಚಿದಂಬರಂ ಅವರು ಭಾರತದ ಪರಮಾಣು ಕಾರ್ಯಕ್ರಮದ ಪ್ರೇರಕ ಶಕ್ತಿಯಾಗಿದ್ದ ಡಾ. ರಾಜಾ ರಾಮಣ್ಣ ಅವರೊಡನೆ ಉತ್ತಮ ವೃತ್ತಿಪರ ಬಾಂಧವ್ಯ ಹೊಂದಿದ್ದರು. ಅವರ ಸಹಯೋಗ ಪರಸ್ಪರರ ಕುರಿತ ಗೌರವ ಮತ್ತು ಭಾರತದ ಪರಮಾಣು ಸಾಮರ್ಥ್ಯದ ವೃದ್ಧಿಯ ಕುರಿತ ಕನಸನ್ನು ಆಧರಿಸಿದ್ದವು. ಡಾ. ರಾಜಾ ರಾಮಣ್ಣನವರ ಮಾರ್ಗದರ್ಶನದಲ್ಲಿ, ಡಾ. ಚಿದಂಬರಂ ಅವರು ಪರಮಾಣು ವಿಜ್ಞಾನ ಕ್ಷೇತ್ರದಲ್ಲಿ ಓರ್ವ ಮುಖ್ಯ ವಿಜ್ಞಾನಿಯಾಗಿ ಹೊರಹೊಮ್ಮಿ, ಭಾರತದ ಪರಮಾಣು ಕಾರ್ಯಕ್ರಮದ ಬುನಾದಿಯನ್ನು ಬಲಪಡಿಸತೊಡಗಿದರು.

ಪೋಖ್ರಾನ್-2: ಭಾರತದ ಪರಮಾಣು ಸಾಮರ್ಥ್ಯ ವರ್ಧನೆ

ಡಾ. ಚಿದಂಬರಂ ಅವರ ಕೊಡುಗೆಗಳು ಪೋಖ್ರಾನ್-1 ಪರೀಕ್ಷೆಗಷ್ಟೇ ಸೀಮಿತವಾಗಿರಲಿಲ್ಲ. ಅವರು 1998ರ ಪೋಖ್ರಾನ್-2 ಪರಮಾಣು ಪರೀಕ್ಷೆಯಲ್ಲೂ ನಾಯಕತ್ವ ವಹಿಸಿದ್ದರು. ಈ ಸಂದರ್ಭದಲ್ಲಿ, ಭಾರತ ಕೇವಲ ಎರಡು ವಾರಗಳ ಅವಧಿಯಲ್ಲಿ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಈ ಪರೀಕ್ಷೆಗಳು ಪರಮಾಣು ಶಕ್ತಿಯಾಗಿ ಭಾರತದ ಸ್ಥಾನವನ್ನು ಭದ್ರಪಡಿಸಿದವು. ಹಾಗೆಯೇ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ, ಅವುಗಳನ್ನು ಪ್ರಯೋಗಿಸುವ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಿದವು. ಡಾ. ಚಿದಂಬರಂ ಅವರ ತಾಂತ್ರಿಕ ಪ್ರಾವೀಣ್ಯತೆ ಮತ್ತು ನಾಯಕತ್ವ ಈ ಅತ್ಯಂತ ರಹಸ್ಯಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ಬಹಳ ಮುಖ್ಯವಾಗಿದ್ದವು.

ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ ಮತ್ತು ಕೊಡುಗೆಗಳು

ತನ್ನ ಸುದೀರ್ಘ ವೃತ್ತಿಜೀವನದಲ್ಲಿ, ಡಾ. ಚಿದಂಬರಂ ಅವರು ಹಲವಾರು ಮುಖ್ಯ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು 1990-1993ರಲ್ಲಿ ಬಿಎಆರ್‌ಸಿ ಅಧ್ಯಕ್ಷರಾಗಿ, 1993-2000ದ ತನಕ ಪರಮಾಣು ಶಕ್ತಿ ಆಯೋಗದ ಮುಖ್ಯಸ್ಥರಾಗಿ, 2001-2018ರ ತನಕ ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಗಳು ಪರಮಾಣು ವಿಜ್ಞಾನವನ್ನೂ ಮೀರಿದವಾಗಿವೆ. ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಿದ ಹಲವಾರು ರಾಷ್ಟ್ರೀಯ ಯೋಜನೆಗಳಿಗೆ ಡಾ. ಚಿದಂಬರಂ ನೇತೃತ್ವ ವಹಿಸಿದ್ದರು.

ಜ್ಞಾನ ಮತ್ತು ಗ್ರಾಮೀಣ ಆವಿಷ್ಕಾರಗಳಿಂದ ಭಾರತದ ಸಬಲೀಕರಣ

ಡಾ. ಚಿದಂಬರಂ ಅವರು ತಂತ್ರಜ್ಞಾನವನ್ನು ಜನರ ಹತ್ತಿರಕ್ಕೆ ಒಯ್ಯುವ ಹಲವು ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಭಾರತದಾದ್ಯಂತ ಆವಿಷ್ಕಾರ ಮತ್ತು ಸಹಯೋಗಗಳನ್ನು ಉತ್ತೇಜಿಸಲು ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿದ ‘ನ್ಯಾಷನಲ್ ನಾಲೆಜ್ ನೆಟ್‌ವರ್ಕ್’ ಯೋಜನೆಯ ಹಿಂದಿನ ಶಕ್ತಿ ಡಾ. ಚಿದಂಬರಂ ಆಗಿದ್ದರು. ಇದೇ ಸಮಯದಲ್ಲಿ, ಅವರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಗ್ರಾಮೀಣ ಸಮುದಾಯಗಳ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ರೂರಲ್ ಟೆಕ್ನಾಲಜಿ ಆ್ಯಕ್ಷನ್ ಗ್ರೂಪ್ಸ್ (RuTAG) ಅನ್ನು ಸ್ಥಾಪಿಸಿದರು. ಇಂತಹ ಪ್ರಯತ್ನಗಳು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಸಾಧಿಸುವತ್ತ ಡಾ. ಚಿದಂಬರಂ ಅವರ ವಿಶಾಲ ದೃಷ್ಟಿಕೋನಕ್ಕೆ ಈ ಪ್ರಯತ್ನಗಳು ಸಾಕ್ಷಿಯಾಗಿವೆ.

ಪ್ರಶಸ್ತಿ ಪುರಸ್ಕಾರಗಳು

ಡಾ. ಚಿದಂಬರಂ ಅವರ ಮಹತ್ವದ ಕೊಡುಗೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರ್ಹವಾಗಿಯೇ ಸಂದಿವೆ. ಅವರಿಗೆ 1975ರಲ್ಲಿ ಪದ್ಮಶ್ರೀ ಪ್ರಶಸ್ತಿ, 1999ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿವೆ. ಅವರ ಕಾರ್ಯಗಳು ಅಸಂಖ್ಯಾತ ಯುವ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಸ್ಫೂರ್ತಿ ನೀಡಿ, ಪರಮಾಣು ತಂತ್ರಜ್ಞಾನದಲ್ಲಿ ಭಾರತ ನಾಯಕನಾಗಿ ಹೊರಹೊಮ್ಮುವಂತೆ ಮಾಡಿದವು.

ಎಂದೂ ಮರೆಯದ ಕೊಡುಗೆಗಳು

ಡಾ. ಚಿದಂಬರಂ ಅವರ ನಿಧನಕ್ಕೆ ದುಃಖ ಪಡುತ್ತಿರುವ ಸಂದರ್ಭದಲ್ಲೇ, ಭಾರತ ಅವರ ಅಸಾಧಾರಣ ಸಾಧನೆಗಳನ್ನೂ ಸ್ಮರಿಸುತ್ತಿದೆ. ಪರಮಾಣು ವಿಜ್ಞಾನ ಕ್ಷೇತ್ರದಲ್ಲಿ ಅವರ ಪ್ರಯತ್ನಗಳು ಮತ್ತು ಭಾರತದ ವೈಜ್ಞಾನಿಕ ಸಾಮರ್ಥ್ಯದ ಅಭಿವೃದ್ಧಿಗಾಗಿ ಅವರ ಕೊಡುಗೆಗಳು ಎಂದೂ ಮರೆಯಲು ಸಾಧ್ಯವಿಲ್ಲ. ರಕ್ಷಣೆ ಮತ್ತು ಕಾರ್ಯತಂತ್ರದ ಯೋಜನೆಗಳಿಗೆ ಕೊಡುಗೆ ನೀಡುವುದರ ಹೊರತಾಗಿಯೂ, ಡಾ. ಚಿದಂಬರಂ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಂಪೂರ್ಣ ಸಮಾಜಕ್ಕೆ ನೆರವಾಗುವಂತೆ ಮಾಡಲು ದಣಿವರಿಯದಂತೆ ದುಡಿದಿದ್ದಾರೆ.

ಡಾ. ಚಿದಂಬರಂ ಅವರ ಜೀವನ ನಮಗೆ ಅವರ ದೂರದೃಷ್ಟಿ, ಅವಿಶ್ರಾಂತ ಕಾರ್ಯಗಳು, ಮತ್ತು ಭಾರತದ ಭವಿಷ್ಯವನ್ನು ಬದಲಾಯಿಸಲು ರೂಪಿಸಿದ ಸಹಭಾಗಿತ್ವಗಳನ್ನು ನೆನಪಿಸುತ್ತದೆ. ಅವರ ಕೊಡುಗೆಗಳು, ಅವರು ಕೈಗೊಂಡ ಕಾರ್ಯಗಳು ಮುಂದಿನ ತಲೆಮಾರುಗಳ ಭಾರತೀಯ ವಿಜ್ಞಾನಿಗಳು ಮತ್ತು ನವೋದ್ಯಮಿಗಳಿಗೆ ಸ್ಫೂರ್ತಿ ನೀಡಿ, ಅವರು ನಿರ್ಮಿಸಿದ ತಳಹದಿಯ ಮೇಲೆ ಭಾರತವನ್ನು ನಿರ್ಮಿಸಲು ನೆರವಾಗಲಿವೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಟಾಪ್ ನ್ಯೂಸ್

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnatakaದಿಂದ ಕಕ್ಷೆಗೆ: ISRO ಸ್ಪೇಡೆಕ್ಸ್ ಜೊತೆ ನಭಕ್ಕೆ ಚಿಮ್ಮಲಿವೆ ಆದಿಚುಂಚನಗಿರಿ SJC

Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್‌ ಕಸರತ್ತು…ISRO ಸಾಹಸ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !

ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !

Proba 3 Mission: ಕೃತಕ ಸೂರ್ಯ ಗ್ರಹಣಕ್ಕೆ ಮುಹೂರ್ತ! ಏನಿದು ಪ್ರೋಬಾ 3 ಯೋಜನೆ

Proba 3 Mission: ಕೃತಕ ಸೂರ್ಯ ಗ್ರಹಣಕ್ಕೆ ಸಿದ್ಧತೆ! ಏನಿದು ಪ್ರೋಬಾ 3 ಯೋಜನೆ?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.