ಕಾರ್ಕಳ ನಗರದಲ್ಲೂ ನೆಟ್‌ ಕಿರಿಕಿರಿ!

ಬಿಎಸ್‌ಎನ್‌ಎಲ್‌ ಸಂಪರ್ಕ 2ಜಿಗೆ ಸೀಮಿತ; ಡಾಟಾ ವೇಗ 40 ಎಂಬಿಪಿಎಸ್‌ ಮಾತ್ರ

Team Udayavani, Jan 6, 2025, 1:44 PM IST

9

ಸಾಂದರ್ಭಿಕ ಚಿತ್ರ

ಕಾರ್ಕಳ: ನೆಟ್‌ವರ್ಕ್‌ ಮತ್ತು ಇಂಟರ್‌ನೆಟ್‌ ಸೇವೆಗೆ ಸಂಬಂಧಿಸಿ ಹಳ್ಳಿಗಾಡಿನಲ್ಲಿ ಮಾತ್ರವಲ್ಲ, ಪಟ್ಟಣ ಪ್ರದೇಶಗಳಲ್ಲಿಯೂ ಸಮಸ್ಯೆ ಇದೆ. ಪಟ್ಟಣ ಭಾಗದಲ್ಲಿ ಸಾಕಷ್ಟು ಮಂದಿ ಬಿಎಸ್‌ಎನ್‌ಎಲ್‌ ಗ್ರಾಹಕರಿದ್ದಾರೆ. ಹಲವು ವರ್ಷಗಳಿಂದ ಬ್ರಾಡ್‌ಬ್ಯಾಂಡ್‌ ಮತ್ತು ಮೊಬೈಲ್‌ ನೆಟ್‌ವರ್ಕ್‌ನ ಚಂದಾದಾರಾಗಿರುವ ಗ್ರಾಹಕರಿಗೆ ಸಮರ್ಪಕ ಸೇವೆ ಸಿಗದೇ ಪರದಾಡುವ ಸ್ಥಿತಿ ಇದೆ. ಬಿಎಸ್‌ಎನ್‌ಎಲ್‌ ಸಂಸ್ಥೆ ಮೇಲಿನ ಅಭಿಮಾನದಿಂದ ಇನ್ನೂ ಗ್ರಾಹಕರಾಗಿರುವ ಹಲವಾರು ಮಂದಿ ಬಿಎಸ್‌ಎನ್‌ಎಲ್‌ ಸೇವೆ ಉನ್ನತೀಕರಣವನ್ನು ಬಯಸುತ್ತಿದ್ದಾರೆ.

ಕಾರ್ಕಳ ಪೇಟೆ ಪುರಸಭೆ ವ್ಯಾಪ್ತಿಯ ರಾಘವೇಂದ್ರ ಮಠದ ಹಿಂಬದಿ 2ಜಿ ನೆಟ್‌ವರ್ಕ್‌ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂಟರ್‌ನೆಟ್‌ ಸೇವೆ ಪಡೆದುಕೊಂಡ ಹಲವಾರು ಮಂದಿ ಅಗತ್ಯ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯದೇ ಅನಿವಾರ್ಯವಾಗಿ ಇನ್ನೊಂದು ಸಂಸ್ಥೆಯತ್ತ ಮುಖಮಾಡುವಂತಾಗಿದೆ ಎನ್ನುತ್ತಾರೆ ಸ್ಥಳೀಯರು. ದೂರು ಕೊಟ್ಟರೆ ನಿರ್ವಹಣೆ ಏನೋ ಮಾಡುತ್ತಾರೋ, ಆದರೆ ಮೂಲ ಸಮಸ್ಯೆಜೀವಂತವಾಗಿರುತ್ತದೆ ಎಂಬುದು ನಾಗರಿಕರ ಅಳಲು.

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಇಂಟರ್‌ನೆಟ್‌ ಸೇವೆ ಒದಗಿಸಲು ಒಟ್ಟು 18 ಟವರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಖಾಸಗಿ ಸಂಸ್ಥೆಗಳೇ ಪಾಲು ಹೆಚ್ಚು. ಬೇರೆ ಕಂಪೆನಿ ನೆಟ್‌ವರ್ಕ್‌ಗಳು 5ಜಿ ಹಂತಕ್ಕೆ ಅಪ್‌ಗ್ರೇಡ್‌ ಆದರೆ ಬಿಎಸ್‌ಎನ್‌ಎಲ್‌ ಮಾತ್ರ 3ಜಿ -4-ಜಿ ಸೇವೆ ನೀಡಲು ತಡಕಾಡುತ್ತಿದೆ.

ಸರಕಾರಿ ಕಚೇರಿಗಳಲ್ಲೂ ಸಮಸ್ಯೆ
ರಾಜ್ಯದ ವಿವಿಧ ತಾಲೂಕು ಮಟ್ಟದ ವಿವಿಧ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು ಬಿಎಸ್‌ಎನ್‌ಎಲ್‌ ಇಂಟರ್ನೆಟ್‌ ಸೇವೆ ಬಳಸುತ್ತಿದೆ. ವೇಗದ ಇಂಟರ್‌ನೆಟ್‌ ಇಲ್ಲದೆ ಕಚೇರಿ ಕೆಲಸ ಕಾರ್ಯಗಳಿಗೆ ವಿವಿಧ ತಂತ್ರಾಂಶ ಬಳಕೆ ಮಾಡಲು ತೊಡಕಾಗುತ್ತದೆ. ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆ, ಪಡಿತರ ತಿದ್ದುಪಡಿ ಸಹಿತ ಮೊದಲಾದ ಉದ್ದೇಶಗಳಿಗೆ ಸಾಕಷ್ಟು ಅಡ್ಡಿಯಾಗುತ್ತಿದೆ. 80 ಎಂಬಿಪಿಎಸ್‌ ಇಂಟರ್‌ನೆಟ್‌ ಡಾಟಾ ಸೇವೆ ಇದ್ದರೂ 40 ಎಂಬಿಪಿಎಸ್‌ ಡಾಟ ಸೌಲಭ್ಯ ಇಲ್ಲಿನ ಗ್ರಾಹಕರಿಗೆ ಸಿಗುತ್ತಿದೆ ಎಂಬುದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

ಯುಪಿಐ ಪೇಮೆಂಟ್‌ಗೆ ತೊಡಕು
ಕಾರ್ಕಳ ಪುರಸಭೆ ಮತ್ತು ಪಟ್ಟಣ ಸುತ್ತಮುತ್ತಲಿರುವ ಗ್ರಾಹಕರಿಗೆ ಯುಪಿಐ ಸೇವೆ ಬಳಕೆ ಮಾಡಲು ತೊಡಕುಂಟಾಗುತ್ತಿದೆ. ಅಂಗಡಿ ಅಥವಾ ಇನ್ನಿತರೆ ಶಾಪಿಂಗ್‌, ವರ್ತಕರಲ್ಲಿ ಖರೀದಿ ಮಾಡುವ ವೇಳೆ, ಗೂಗಲ್‌ ಪೇ ಅಥವ ಇನ್ನಿತರ ಯುಪಿಐ ಪೇಮೆಂಟ್‌ ಮೂಲಕ ಹಣ ಪಾವತಿ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಸಂದರ್ಭ ಹಣ ಪಾವತಿಯಾಗದೆ ಗೊಂದಲ ಉಂಟಾಗಲು ಕಾರಣವಾಗುತ್ತಿದೆ. ಬಹುತೇಕ ಮಂದಿ ಯುಪಿಐ ಪಾವತಿ ಪ್ರಕ್ರಿಯೆಯನ್ನೇ ಕೈಬಿಟ್ಟಿದ್ದಾರೆ.

ವ್ಯವಸ್ಥಿತ ಅಪ್‌ಗ್ರೇಡ್‌ ಅಗತ್ಯ
ಹಳ್ಳಿಗಳಲ್ಲಿ ನೆಟ್‌ವರ್ಕ್‌ ಉತ್ತಮವಾಗಿದ್ದರೂ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಸಾಕಷ್ಟಿದೆ. ಅಂಗಡಿಗಳಲ್ಲಿ ಗೂಗಲ್‌ ಪೇ ಮಾಡಲು ಸಾಧ್ಯವಾಗುವುದಿಲ್ಲ. ಪ್ರಮುಖ ಉದ್ದೇಶಗಳನ್ನು ಮೊಬೈಲ್‌ನಲ್ಲಿ ಸುಲಲಿತವಾಗಿ ಚರ್ಚಿಸಲು ಸಾಧ್ಯವಾಗುದಿಲ್ಲ. ವಿವಿಧ ಅಗತ್ಯ ಕೆಲಸಗಳಿಗೆ ಇಂದು ನೆಟ್‌ವರ್ಕ್‌-ಇಂಟರ್‌ನೆಟ್‌ ಸೌಕರ್ಯ ಅಗತ್ಯವಾಗಿ ಬೇಕಿದೆ. ಬಿಎಸ್‌ಎನ್‌ಎಲ್‌ ಗ್ರಾಹಕರು ಸಾಕಷ್ಟು ಮಂದಿ ಇನ್ನೂ ಚಂದಾದಾರರು ಇದ್ದಾರೆ. ಇನ್ನಷ್ಟು ವ್ಯವಸ್ಥಿತವಾಗಿ ಅಪ್‌ಗೆÅàಡ್‌ ಮಾಡಿ ಉತ್ತಮ ಸೇವೆ ನೀಡಲು ಸರಕಾರ ಕ್ರಮ ತೆಗೆದುಕೊಳ್ಳಬೇಕಿದೆ.
-ಡಾ| ಅರುಣ್‌ ಕುಮಾರ್‌ ಎಸ್‌. ಆರ್‌. , ಕುಮ್ರಪದವು, ಕಾರ್ಕಳ

ಹಲವು ಬಾರಿ ದೂರು
ಪೆರ್ವಾಜೆ, ಪತ್ತೂಂಜಿಕಟ್ಟೆ ಭಾಗದಲ್ಲಿ ನೆಟ್‌ವರ್ಕ್‌, ಇಂಟರ್‌ನೆಟ್‌ ಸಮಸ್ಯೆ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟವರು ಅಸಹಾಯಕರಾಗಿ ವರ್ತಿಸುತ್ತಾರೆ. ಟವರ್‌, ನೆಟ್‌ವರ್ಕ್‌ ನಿರ್ವಹಣೆಗೆ ಕಳಪೆ ಗುಣಮಟ್ಟದ ಪರಿಕರ, ಬ್ಯಾಟರಿಗಳು ಪೂರೈಕೆಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕು. ಬಿಎಸ್‌ಎನ್‌ಎಲ್‌ ಸೇವೆ ಸುಧಾರಣೆಗೆ ಜನಪ್ರತಿನಿಧಿಗಳು, ಸರಕಾರ ಈ ಬಗ್ಗೆ ಸೂಕ್ತ ಯೋಜನೆ ರೂಪಿಸಬೇಕು.
– ಸಂತೋಷ್‌ ಪೆರ್ವಾಜೆ, ಪತ್ತೂಂಜಿಕಟ್ಟೆ

-ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Kasaragod: ಯುವತಿ ನಾಪತ್ತೆ; ದೂರು ದಾಖಲು

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.